March 12, 2025

Bhavana Tv

Its Your Channel

ಶ್ರೀಕ್ಷೇತ್ರ ದೇವಿಮನೆಯಲ್ಲಿ ಮಹಾರಥೋತ್ಸವ

ಭಟ್ಕಳ ತಾಲ್ಲೂಕಿನ ಶಕ್ತಿಕ್ಷೇತ್ರಗಳಲ್ಲೊಂದಾದ ಕಿತ್ರೆಯ ಶ್ರೀಕ್ಷೇತ್ರ ದೇವಿಮನೆಯ ಶ್ರೀ ದುರ್ಗಾಪರಮೇಶ್ವರಿ ದೇವಿಯ ಮಹಾರಥೋತ್ಸವ ಕೋವಿಡ್ ಮಾರ್ಗಸೂಚಿಯಂತೆ ಗುರುವಾರ ಮಧ್ಯಾಹ್ನ ಸಂಪನ್ನಗೊAಡಿತು.

ರಥೋತ್ಸವದ ಪ್ರಯುಕ್ತ ದೇವಸ್ಥಾನದಲ್ಲಿ ತಾಂತ್ರಿಕ ಗೋಕರ್ಣದ ಅಮೃತೇಶ್ವರ ಭಟ್ಟ ಇವರ ಆಚಾರ್ಯತ್ವದಲ್ಲಿ ಬೆಳಿಗ್ಗೆಯಿಂದಲೇ ಗಣೇಶ ಪೂಜೆ, ಪುಣ್ಯಾಹ, ದುರ್ಗಾಹವನ, ರುದ್ರಹವನ, ರಥ ಸಂಪ್ರೋಕ್ಷಣೆ, ಕಲಾಶಾಭಿಷೇಕ, ಪೂರ್ಣಾಹುತಿ, ಶ್ರೀ ದೇವರ ರಥಾರೋಹಣ, ತೀರ್ಥಪ್ರಸಾದ ವಿತರಣೆ ನಡೆಯಿತು. ರಾಘವೇಶ್ವರ ಭಾರತೀ ಶ್ರೀಗಳ ದಿವ್ಯ ಉಪಸ್ಥಿತಿಯಲ್ಲಿ ದೇವಸ್ಥಾನದ ಪ್ರಧಾನ ಅರ್ಚಕ ಲಂಬೋಧರ ಭಟ್ಟ, ಬಾಲಚಂದ್ರ ಭಟ್ಟ ಮತ್ತಿತರರ ಅರ್ಚಕರು ರಥೋತ್ಸವದ ವಿಧಿವಿಧಾನಗಳನ್ನು ನೆರವೇರಿಸಿದರು.
ಈ ಸಂದರ್ಭದಲ್ಲಿ ಶಾಸಕ ಸುನೀಲ ನಾಯ್ಕ, ಆಡಳಿತ ಮಂಡಳಿಯ ಅಧ್ಯಕ್ಷ ಶಿವಾನಂದ ಹೆಬ್ಬಾರ, ಭವತಾರಿಣಿ ಸೀಮಾ ಪರಿಷತ್ ಅಧ್ಯಕ್ಷ ವಿನಾಯಕ ಭಟ್ಟಬೆಟ್ಕೂರು, ಮೊಕ್ತೆಸರ ಉಮೇಶ ಹೆಗಡೆ, ವೆ.ಮೂ ಸುಬ್ರಾಯ ಭಟ್ಟ, ಗುರು ಉಪಾಧ್ಯಾಯ, ಶ್ರೀಧರ ಭಟ್ಟ,ಸತೀಶ ಭಟ್ಟ, ಪ್ರಮುಖರಾದ ಎಂ ಎಂ ಹೆಬ್ಬಾರ, ಗಣೇಶ ಹೆಬ್ಬಾರ,ಅನಂತ ಹೆಬ್ಬಾರ, ಎಂ ವಿ ಭಟ್ಟ,ವಿನಾಯಕ ಭಟ್ಟ ಸೇರಿದಂತೆ ಹಲವು ಮುಖಂಡರು, ಭಕ್ತರು ಪಾಲ್ಗೊಂಡಿದ್ದರು. ರಥೋತ್ಸವದ ನಂತರದಲ್ಲಿ ಮಹಾಅನ್ನಸಂತರ್ಪಣೆ ನಡೆಯಿತು.

error: