March 12, 2025

Bhavana Tv

Its Your Channel

ಶಿರಾಲಿ ಗ್ರಾಮದ ತಟ್ಟಿಹಕ್ಕಲಿನ ಕೇಶವಮೂರ್ತಿ ದೇವಸ್ಥಾನ ಆವರಣದಲ್ಲಿ ಎಂಟುನೂರು ವರ್ಷದ ಇತಿಹಾಸ ಇರುವ ಶಾಸನವೊಂದು ಪತ್ತೆ

ಭಟ್ಕಳ ತಾಲೂಕಿನ ಶಿರಾಲಿ ಗ್ರಾಮದ ಮಣ್‌ಹೊಂಡದ ತಟ್ಟಿಹಕ್ಕಲಿನಲ್ಲಿರುವ ಕೇಶವಮೂರ್ತಿ ದೇವಸ್ಥಾನ ಆವರಣದಲ್ಲಿ ಎಂಟುನೂರು ವರ್ಷದ ಇತಿಹಾಸ ಇರುವ ಹೊನ್ನಾವರ ಮಹಾ ಪ್ರಧಾನ ಯೀಚಪ್ಪ ಒಡೆಯರ ಅಪ್ರಕಟಿತ ಹಳೆಯ ಶಾಸನವೊಂದು ಪತ್ತೆಯಾಗಿದೆ

ತಾಲೂಕಿನ ಶಿರಾಲಿ ಗ್ರಾಮದ ಮಣ್‌ಹೊಂಡದ ತಟ್ಟಿಹಕ್ಕಲಿನಲ್ಲಿರುವ ಕೇಶವಮೂರ್ತಿ ದೇವಾಲಯ ೮೦೦ ವರ್ಷಕ್ಕೂ ಅಧಿಕ ಪುರಾತನ ದೇವಸ್ಥಾನವಾಗಿದ್ದು ಈ ದೇವಸ್ಥಾನದ ಜೀರ್ಣೋದ್ಧಾರದ ಸಂದರ್ಬದಲ್ಲಿ ಈ ಶಾಸನ ಪತ್ತೆಯಾಗಿದೆ. ಈ ಶಾಸನವನ್ನು ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ದೇವರಾಜ, ಸ್ನಾತಕೋತ್ತರ ಇತಿಹಾಸ ಮತ್ತು ಪುರಾತತ್ವ ವಿಭಾಗದ ಮುಖ್ಯಸ್ಥರಾದ ಡಾ. ಗಣಪತಿ ಗೌಡ ಮತ್ತು ಇತಿಹಾಸ ಮತ್ತು ಪುರಾತತ್ವ ಸಂಶೋಧನಾರ್ಥಿ ಶ್ರುತೇಶ್ ಮೂಡುಬೆಳೆ ಓದಿ ಅರ್ಥೈಸಿದ್ದಾರೆ. ಗ್ರಾನೈಟ್ (ಕಣ) ಶಿಲೆಯಲ್ಲಿ ಕೊರೆಯಲ್ಪಟ್ಟಿರುವ ಈ ಶಾಸನವು ೩.೫ ಅಡಿ ಎತ್ತರ ಹಾಗು ೨.೫ ಅಡಿ ಅಗಲವಾಗಿದೆ. ಶಾಸನದಲ್ಲಿ ಒಟ್ಟು ೩೭ ಸಾಲುಗಳಿದ್ದು ಕನ್ನಡ ಲಿಪಿ ಮತ್ತು ಭಾಷೆಯದ್ದಾಗಿದೆ. ಶಾಸನದ ಶಿರೋಭಾಗದಲ್ಲಿ ಶಿವಲಿಂಗಕ್ಕೆ ಪೂಜೆಗೈಯ್ಯುತ್ತಿರುವ ಯತಿ, ಕರುವಿಗೆ ಹಾಲುಣಿಸುತ್ತಿರುವ ಹಸು ಹಾಗೂ ನಂದಿಯ ಉಬ್ಬು ಕೆತ್ತನೆಯಿದೆ.

ಶಾಸನವು ಎರಡು ಕಾಲಘಟ್ಟದಲ್ಲಿ ದಾನ ನೀಡಿರುವ ವಿಷಯವನ್ನು ಉಲ್ಲೇಖಿಸುತ್ತದೆ. ವಿಜಯನಗರದ ಒಂದನೇ ದೇವರಾಯನು ಆಳ್ವಿಕೆ ಕಾಲದಲ್ಲಿ ಹೊನ್ನಾವರದ ರಾಜಧಾನಿಯಲ್ಲಿದ್ದುಕೊಂಡು ಹಯಿವೆ-ತುಳು-ಕೊಂಕಣ ಪ್ರದೇಶಗಳನ್ನು ಆಳ್ವಿಕೆ ಮಾಡುತ್ತಿದ್ದ ಮಹಾಪ್ರಧಾನ ಯೀಚಪ್ಪ ಜನಾರ್ದನ ಒಡೆಯನು ೧೩೩೩ ನೆಯ ವಿಕೃತ ಸಂವತ್ಸರದ ಕಾರ್ತಿಕ ಶುದ್ಧ | ಶುಕ್ರವಾರ (ಕ್ರಿ.ಶ ೧೪೧೦ ನವೆಂಬರ್ ೬ ಮಂಗಳವಾರ)ದAದು ಮಂಡಣದ ಕೇಶವನಾಥ ದೇವರಿಗೆ ಕೊಟ್ಟ ದತ್ತಿಯ ಕುರಿತು ಉಲ್ಲೇಖಿಸುತ್ತದೆ.
ಹಾಗೆಯೇ ಗ್ರಾಮದ ಶಕವರುಷ ೧೩೧೨ ನೆಯ ಶುಕ್ಲ ಸಂವತ್ಸರದ ಪಾಲ್ಗುಣ ಮಾಸ ಶು ೧೩ ಆದಿತ್ಯವಾರ ಅಂದರೆ ಕ್ರಿ.ಶ ೧೩೯೦ ಮಾರ್ಚ್ ೮ ಸೋಮವಾರ ದಂದು ವಿಜಯನಗರದ ದೊರೆ ಇಮ್ಮಡಿ ಹರಿಹರ ಆಳ್ವಿಕೆ ಮಾಡುತ್ತಿರುವಾಗ ಹೊನ್ನಾವರದ ರಾಜಧಾನಿಯಿಂದ ಆಳ್ವಿಕೆ ಮಾಡುತ್ತಿದ್ದ ಮಹಾಪ್ರಧಾನ ಮಲ್ಲಪ್ಪ ಒಡೆಯನ್ನು ಬೆಂಗ್ರೆಯ ತಟ್ಟಿಹಕ್ಕಲ ಕೇಶವನಾಥ ದೇವರ ಅಮೃತಪಡಿಯ ಧರ್ಮಕ್ಕೆ ಭೂಮಿಯನ್ನು ದತ್ತಿ ಬಿಟ್ಟುಕೊಟ್ಟಿರುವುದು ತಿಳಿದುಬರುತ್ತದೆ. ಈ ದತ್ತಿಯನ್ನು ಆಚಂದ್ರರ್ಕ ಸ್ಥಾಯಿಯಾಗಿ ಪಾಲಿಸಿಕೊಂಡು ಬರಬೇಕೆಂದು ಚಪ್ಪ ಒಡೆಯರು ಶಾಸನವನ್ನು ಬರೆಯಿಸಿ ಮಂಡಣ ಕೇಶವನಾಥ ದೇವಾಲಯದಲ್ಲಿ ಸ್ಥಾಪಿಸಿರುವ ವಿಷಯ ಶಿಲಾಶಾಸನದಿಂದ ತಿಳಿದುಬಂದಿದೆ.
ದೇವಸ್ಥಾನದಲ್ಲಿ ಹಿಂದೆ ಈ ದೇವಸ್ಥಾನದಲ್ಲಿ ವಿಜ್ರಂಬಣೆಯಿAದ ರಥೋತ್ಸವ ನಡೆಯುತಿತ್ತು ಎಂಬ ಮಾಹಿತಿಯು ಕೂಡಾ ಲಬ್ಯವಿದೆ ಕಾಲಕ್ರಮೇಣ ದೇವಸ್ಥಾನ ಅಭಿವೃದ್ದಿ ಕುಂಟಿತವಾಗುತ್ತಾ ಬಂದು ರಥೋತ್ಸವವು ನಿಂತುಹೊಗಿರುತ್ತದೆ ರಥೋತ್ಸವ ನಡೆಯುತ್ತಿರುವ ಬಗ್ಗೆ ಇಲ್ಲಿ ದೊರೆತಿರುವ ರಥದ ಗಾಲಿಯೆ ಸಾಕ್ಷಿಯಾಗಿರುತ್ತದೆ
ಈ ದೇವಸ್ಥಾನ ದ್ವಾರದ ನೇರಕ್ಕೆ ೫೦೦ ಮಿಟರ್ ದೂರದಲ್ಲಿ ನಾಗನ ದೇವಸ್ಥಾನವಿದ್ದು ಈ ಕೇಶವ ನಾಥ ದೇವರ ಮೂರ್ತಿ ಹಾಗು ನಾಗ ಬನವು ಎದುರು ಬದುರಾಗಿರುವುದು ತುಂಬ ಕೈತುಕದ ಸಂಗತಿಯಾಗಿದೆ ಈಗ ಈ ದೇವಸ್ಥಾನ ಪುನಃ ಸ್ಥಳಿಯ ಗ್ರಾಮಸ್ಥರ ಶ್ರಮದಿಂದ ಪುನಃ ಪುರಾತನ ದೇವಸ್ಥಾನವಾದ ಕೇಶವ ಮೂರ್ತಿ ದೇವಸ್ತಾನ ಉರ್ಜಿತವಾಗುತ್ತಿರುವುದು ಪ್ರಶಂಸೆಯ ಸಂಗತಿಯಾಗಿದೆ .ಈ ಸಂದರ್ಭದಲ್ಲಿ ಗೋಳಿ ಕೇರಿ ಕುಟುಂಬದವರಾದ ಅನಂತಭಟ್ಟ ಮಾತನಾಡಿ ಈ ದೇವಸ್ಥಾನವನ್ನು ಪುರಾತನ ಕಾಲದಿಂದಲೂ ನಮ್ಮ ಗೋಳಿ ಕೇರಿ ಮನೆತನದವರು ಪೂಜೇ ನಡೆಸಿಕೊಂಡು ಬರುತ್ತಿದ್ದು ಈಗಲೂ ನಮ್ಮ ಮನೆತನದವರು ಈ ದೇವಸ್ಥಾನಕ್ಕೆ ತುಂಬ ಕೊಡುಗೆಗಳನ್ನು ನೀಡಿತ್ತಾ ಬಂದಿದ್ದಾರೆ ಎಂದರು.

ನAತರ ದೇವಸ್ಥಾನದ ಆಡಳಿತ ಕಮೀಟಿ ಅಧ್ಯಕ್ಷ ಆನಂದ ದೇವಡಿಗ ಮಾತನಾಡಿ ಮಾತನಾಡಿ ಈ ದೇವಸ್ಥಾನ ಎಷ್ಟು ಪುರಾತನ ದೇವಸ್ಥಾನ ಎಂಬುವುದಕ್ಕೆ ಸದ್ಯ ದೊರೆತಿರುವ ಶಿಲಾ ಶಾಸನವೆ ಸಾಕ್ಷಿಯಾಗಿದೆ ಇಲ್ಲಿ ಸಂತಾನ ಬಾಗ್ಯ ಕಲ್ಯಾಣ ಕಾರ್ಯಗಳು ನಡೆಯುವಂತೆ ಹರಕೆಗಳನ್ನು ಮಾಡಿಕೊಂಡರೆ ಆ ಹರಕೆಗೆ ಭಗವಾನ ಮಹಾವಿಷ್ಟು ಅಸ್ತು ಎನ್ನುತ್ತಾನೆ ಎಂಬ ನಂಬಿಕೆ ಪುರಾನತ ಕಾಲದಿಂದಲೂ ಪ್ರಚಲಿತದಲ್ಲಿತ್ತು ಎಂದು ಹೇಳಿದರು.
ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ಸ್ನಾತಕೋತ್ತರ ಇತಿಹಾಸ ಮತ್ತು ಪುರಾತತ್ವ ವಿಭಾಗದ ಮುಖ್ಯಸ್ಥ ಡಾ. ಗಣಪತಿ ಗೌಡ ಮಾತನಾಡಿದರು
ಶಾಸನದಲ್ಲಿ ಉಲ್ಲೇಖಿತ ಮಂಡ್ಮಣ ಇಂದಿನ ಮಣ್‌ಹೊಂಡವಾಗಿರಬೇಕು.ಇನ್ನುಳಿದAತೆ ಬೆಂಗ್ರೆ ಮತ್ತು ತಟ್ಟಿಹಕ್ಕಲು ಹೆಸರು ಯಥಾವತ್ತಾಗಿ ಇಂದಿಗೂ ಮುಂದುವರಿದಿದೆ ಎಂದು ಶಾಸನವನ್ನು ಓದಿ ಅಥೈಸಿರುವ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ಸ್ನಾತಕೋತ್ತರ ಇತಿಹಾಸ ಮತ್ತು ಪುರಾತತ್ವ ವಿಭಾಗದ ಮುಖ್ಯಸ್ಥ ಡಾ. ಗಣಪತಿ ಗೌಡ ಮತ್ತು ಇತಿಹಾಸ ಮತ್ತು ಪುರಾತತ್ವ ಸಂಶೋದನಾರ್ಥಿ ಶ್ರೀ ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಸ್ಥಳೀಯ ಪರಮೇಶ್ವರ ದೇವಡಿಗ ಮಾತನಾಡಿದರು
ಈ ಶಾಸನವನ್ನು ಸಂಶೋದಿಸುವಲ್ಲಿ ಕೇಶವಮೂರ್ತಿ ದೇವಾಲಯದ ಉತ್ಸವ ಸಮಿತಿಯ ಅಧ್ಯಕ್ಷರಾದ ರವಿ ದೇವಾಡಿಗ, ಸಮಿತಿ ಸದಸ್ಯರಾದ ವೆಂಕಟ್ರಮಣ ದೇವಾಡಿಗ, ಸುಬ್ರಾಯ ದೇವಾಡಿಗ, ರಾಮಕೃಷ್ಣ ದೇವಾಡಿಗ, ಜನಾರ್ನದನ ದೇವಾಡಿಗ, ದೇವರಾಜ ದೇವಾಡಿಗ, ಮಂಜುನಾಥ ದೇವಾಡಿಗ ಮತ್ತು ಸಂಕರ್ಷಣ ಗುರುದತ್ತ ಶುಕ್ಲ ಮೊದಲಾದವರು ಸಹಕರಿಸಿದ್ದರು.

error: