March 12, 2025

Bhavana Tv

Its Your Channel

ಮುರ್ಡೇಶ್ವರದ ಬೀನ ವೈದ್ಯ ಡಿಗ್ರಿ & ಪಿ ಯು ಕಾಲೇಜ್ನಲ್ಲಿ “ಬೀನ ಪ್ರೊ ಕಬ್ಬಡಿ ಲೀಗ್- ೨೦೨೨” ಪಂದ್ಯಾವಳಿಯನ್ನು ಶನಿವಾರದಂದು ಏಪಡಿಸಲಾಗಿತ್ತು.

ಮುರ್ಡೇಶ್ವರ ; ಕಾರ್ಯಕ್ರಮದ ಉದ್ಘಾಟನೆಯನ್ನು ಭಟ್ಕಳ್ ಟೌನ್ ಪಿಎಸ್‌ಐ ಯಲ್ಲಪ್ಪ ನೆರವೇರಿಸಿ ವಿದ್ಯಾರ್ಥಿಗಳಿಗೆ ಶುಭ ಕೋರಿದರು. ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಮಾಂಕಾಳ್ ವೈದ್ಯ ವಹಿಸಿ ಮಾತನಾಡುತ್ತ, ಏನಾನಾದರೂ ಸಾಧಿಸಲು ಅವಕಾಶ ಮುಖ್ಯ ಎಲ್ಲರಿಗೂ ಅವಕಾಶ ಸಿಗುವುದಿಲ್ಲ, ಅವಕಾಶ ಸಿಕ್ಕರಷ್ಟೇ ಏನಾದ್ರು ಸಾದಿಸಲು ಸಾಧ್ಯ, ಸಿಕ್ಕ ಅವಕಾಶವನ್ನು ತಾಳ್ಮೆಯಿಂದ ಸರಿಯಾದ ರೀತಿಯಲ್ಲಿ ಉಪಯೋಗಿಸಕೊಳ್ಳಬೇಕು. ವಿದ್ಯಾರ್ಥಿಗಳ ಸಾಧನೆಗೆ ಬೇಕಾದ ಎಲ್ಲಾ ಅವಕಾಶಗಳನ್ನು ಸಂಸ್ಥೆ ಮಾಡಿಕೊಡುತ್ತಿದೆ. ಹಾಗೂ ಎಲ್ಲಾ ರೀತಿಯ ಸಹಾಯ ಸಹಕಾರಕ್ಕೆ ತಾನು ಸಿದ್ದನಿದ್ದೇನೆ ಎಂದು ಭರವಸೆ ನೀಡಿದರು.

ಮುಖ್ಯ ಅಥಿತಿಯಾಗಿ ಸಂಸ್ಥೆಯ ಟ್ರಸ್ಟಿ, ಆಡಳಿತ ನಿರ್ದೇಶಕಿ ಪುಷ್ಪಲತಾ ವೈದ್ಯ ಮಾತನಾಡಿ, ಭಾಗವಯಿಸಿರುವ ಎಲ್ಲಾ ಟೀಮ್ ಗೆಲ್ಲಲು ಸಾಧ್ಯವಿಲ್ಲ ಒಂದು ಟೀಮ್ ಗೆಲ್ಲಬೇಕಾದರೆ ಉಳಿದ ಟೀಮ್ಗಳು ಸೋಲಬೇಕಾಗುತ್ತದೆ, ಪಂದ್ಯದಲ್ಲಿ ಸೋಲು ಗೆಲವು ಮುಖ್ಯವಲ್ಲ ನಿಮ್ಮದೇ ಆದ ಛಾಪು ಮೂಡಿಸುವುದು ಮುಖ್ಯ. ಬದ್ಧತೆ, ಛಲ,ಶಿಸ್ತು, ಆಸಕ್ತಿ, ಧೈರ್ಯ,ಪ್ರಯತ್ನ ಇದ್ದರೆ ಮಾತ್ರ ಆಟದಲ್ಲಿ ಮತ್ತು ಪ್ರೇಕ್ಷಕರ ಮನದಲ್ಲಿ ಛಾಪು ಮೂಡಿಸುವುದು ಸಾಧ್ಯ. ಅಂತಹಾ ಸಂಪೂರ್ಣವಾದ ಪ್ರಾಮಾಣಿಕ ಮಾನಸಿಕ & ದಹಿಕವಾದ ಪ್ರಯತ್ನ ನಿಮ್ಮದಾಗಬೇಕು.ಇಂತಹ ಗಳಿಗೆಗಳು ನೆನಪಿಡುವಂತ ಮಹತ್ವದ ಗಳಿಗೆಗಳಾಗಲೆಂದು ಸ್ಫೂರ್ತಿ ತುಂಬಿ ಶುಭ ಹಾರೈಸಿದರು.

ಪಾಂಶುಪಾಲಾರಾದ ವಿಠ್ಠಲ್ ನಾಯ್ಕ್ ಎಲ್ಲರನ್ನು ಸ್ವಾಗತಿಸಿದರು. ವಿದ್ಯಾರ್ಥಿಗಳಾದ ವಂದನಾ ನಾಯ್ಕ್ ಹಾಗೂ ದೀಪಿಕಾ ನಾಯ್ಕ್ ಕಾರ್ಯಕ್ರಮದ ನಿರೂಪಣೆ ಮಾಡಿದರೆ, ಅಂಕಿತ ನಾಯ್ಕ್ ವಂದನಾರ್ಪಣೆ ಮಾಡಿದರು. ಪಂದ್ಯ ಅತ್ಯಂತ ರೋಚಣಿಯವಾಗಿ ನೆಡೆಯಿತು.

error: