March 12, 2025

Bhavana Tv

Its Your Channel

ಪೇಟೆಂಟ್ ಪಡೆಯುವ ಮೂಲಕ ಸಾಧನೆ ಮಾಡಿದ ಅಂಜುಮನ್ ಕಾಲೇಜಿನ ಪ್ರೊಫೆಸರ್ ಸುಬ್ರಹ್ಮಣ್ಯ ಭಾಗವತ

ಭಟ್ಕಳ : ಭಟ್ಕಳದ ಅಂಜುಮನ್ ಇನ್‌ಸ್ಟಿಟ್ಯೂಟ್ ಆಪ್ ಟಕ್ನೋಲಜಿ ಮತ್ತು ಮ್ಯಾನೇಜಮೆಂಟ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ಪ್ರೊಫೆಸರ್ ಸುಬ್ರಹ್ಮಣ್ಯ ಭಾಗವತ್ ಪೇಟೆಂಟ್ ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ. ಹೈಬ್ರಿಡ್ ಎಲೆಕ್ಟ್ರಿಕ್ ವಾಹನಗಳಲ್ಲಿ ಪವರ್ ಮತ್ತು ಎನರ್ಜಿ ಮ್ಯಾನೇಜ್‌ಮೆಂಟ್ ಸಿಸ್ಟಮ್‌ನ ಆಪ್ಟಿಮೈಸೇಶನ್‌ಗಾಗಿ ಆಳವಾದ ಕಲಿಕೆ ವಿಷಯದಲ್ಲಿ ಇವರಿಗೆ ಪೇಟೆಂಟ್ ಲಭಿಸಿದ್ದು ಎಐಟಿಎಮ್ ಮತ್ತು ಕಂಪ್ಯೂಟರ್ ಸೈನ್ಸ್ ವಿಭಾಗಕ್ಕೆ ಇದು ಅತ್ಯಂತ ಹೆಮ್ಮೆಯ ಕ್ಷಣವಾಗಿದೆ ಎಂದು ಸಂಸ್ಥೆಯ ಪ್ರಮುಖರು ತಿಳಿಸಿದ್ದಾರೆ.

ಪ್ರೊಫೆಸರ್ ಸುಬ್ರಹ್ಮಣ್ಯ ಭಾಗವತ್ ಜೊತೆಗೆ ೧೧ ಪರಿಣಿತ ಸಂಶೋಧನಾ ಆಧಾರಿತ ವಿವಿಧ ಕಾಲೇಜುಗಳ ಪ್ರಾಧ್ಯಾಪಕರು ಸಂಶೋಧನೆ ಮಾಡಿ ಪೇಟೆಂಟ್ ಪಡೆದಿರುತ್ತಾರೆ.
ಪ್ರೊಫೆಸರ್ ಸುಬ್ರಹ್ಮಣ್ಯ ಭಾಗವತ್ ಅವರು ಕಳೆದ ೧೭ ವರ್ಷಗಳಿಂದ ಭಟ್ಕಳದ ಅಂಜುಮನ್ ಇನ್‌ಸ್ಟಿಟ್ಯೂಟ್ ಆಪ್ ಟಕ್ನೋಲಜಿ ಮತ್ತು ಮ್ಯಾನೇಜಮೆಂಟ್ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದಾರೆ ಮತ್ತು ಅವರು ಅದೇ ಕಾಲೇಜಿನ ಹಳೆಯ ವಿದ್ಯಾರ್ಥಿಗಳಾಗಿದ್ದು ಪ್ರಸ್ತುತ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ತಮ್ಮ ಪಿಎಚ್‌ಡಿ ವ್ಯಾಸಂಗ ಮಾಡುತ್ತಿದ್ದಾರೆ. ಪ್ರಸ್ತುತ ಅವರು ಭಟ್ಕಳದ ಅಂಜುಮನ್ ಇನ್‌ಸ್ಟಿಟ್ಯೂಟ್ ಆಪ್ ಟಕ್ನೋಲಜಿ ಮತ್ತು ಮ್ಯಾನೇಜಮೆಂಟ್ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಇವರ ಸಾಧನೆಗೆ ಭಟ್ಕಳದ ಅಂಜುಮನ್ ಇನ್‌ಸ್ಟಿಟ್ಯೂಟ್ ಆಪ್ ಟಕ್ನೋಲಜಿ ಮತ್ತು ಮ್ಯಾನೇಜಮೆಂಟ್ ಕಾಲೇಜಿನ ಪ್ರಮುಖರು, ಉಪನ್ಯಾಸಕರು ಹಾಗೂ ಕುಟುಂಬದವರು ಅಭಿನಂದನೆ ಸಲ್ಲಿಸಿದ್ದಾರೆ.

error: