March 12, 2025

Bhavana Tv

Its Your Channel

ಕಿಸ್‌ಮತ್ ಕಿರುಚಿತ್ರ ಬಿಡುಗಡೆಗೊಳಿಸಿದ ಖ್ಯಾತ ಹಾಸ್ಯನಟ ಟೆನ್ನಿಸ್ ಕೃಷ್ಣ

ಭಟ್ಕಳ ಕಾಸ್ತುಡಿ ಹನುಮಂತ ದೇವಸ್ಥಾನದ ಸಭಾಗೃಹದಲ್ಲಿ ಪುರವರ್ಗದ ಕರಾವಳಿ ಹುಡುಗರು ಯೂಟ್ಯೂಬ್ ಚಾನೆಲ್ ಕ್ರಿಯೇಶನ್ಸ್ ಅವರು ನಿರ್ಮಿಸಿರುವ ಕಿಸ್‌ಮತ್ ಕಿರುಚಿತ್ರವನ್ನು ಚಲನಚಿತ್ರರಂಗದ ಖ್ಯಾತ ಹಾಸ್ಯನಟ ಟೆನ್ನಿಸ್ ಕೃಷ್ಣ ಬಿಡುಗಡೆಗೊಳಿಸಿದರು.

ನಂತರ ಮಾತನಾಡಿದ ಅವರು, ಯುವಕರು ನಿರ್ಮಿಸಿದ ಕಿಸ್‌ಮತ್ ಕಿರುಚಿತ್ರ ಉತ್ತಮವಾಗಿ ಪ್ರದರ್ಶನಗೊಳ್ಳಲಿ. ಈ ಚಿತ್ರವನ್ನು ಹೆಚ್ಚು ಹೆಚ್ಚು ಜನರು ಶೇರ್ ಮಾಡಿ ವೀಕ್ಷಿಸುವಂತಾಗಬೇಕು. ಕಿರುಚಿತ್ರ ತಂಡದ ಪಾತ್ರಧಾರಿಗಳು ಮುಂದಿನ ದಿನಗಳಲ್ಲಿ ಸಿನಿಮಾದಲ್ಲಿ ಎಂದರು. ನಟಿಸುವಂತಾಗಲಿ ಎಂದು ಶುಭ ಹಾರೈಸಿದರು.
ಕಿರುಚಿತ್ರ ನಿರ್ಮಾಣದಲ್ಲಿ ತೊಡಗಿಸಿಕೊಂಡ ಯುವ ನಟ, ನಟಿ ಹಾಗೂ ಸಂಗೀತ ನಿರ್ದೇಶಕರ ಕಾರ್ಯವನ್ನು ಶ್ಲಾಘಿಸಿದ ಅವರು ಅತ್ಯುತ್ತಮ ಕಿರುಚಿತ್ರವಾಗಿ ಹೊರಬರಲಿ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಯಲ್ವಡಿಕವೂರು ಗ್ರಾಮ ಪಂಚಾಯತ್ ಅಧ್ಯಕ್ಷ ಲಕ್ಷ್ಮೀನಾರಾಯಣ ನಾಯ್ಕ ಕಿಸ್‌ಮತ್ ಕಿರುಚಿತ್ರ ತಂಡಕ್ಕೆ ಪ್ರೋತ್ಸಾಹ ನೀಡುವ ಅಗತ್ಯವಿದೆ. ಚಿತ್ರವನ್ನು ಹೆಚ್ಚು ಜನರು ವೀಕ್ಷಿಸಿ ತಂಡವನ್ನು ಬೆಂಬಲಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಹಿರಿಯ ಮುಖಂಡ ಅಣ್ಣಪ್ಪ ನಾಯ್ಕ ಅಬ್ಬಿಹಿತ್ತ ಮಾತನಾಡಿ, ಪುರವರ್ಗದ ಯುವಕರು ಸೇರಿ ಉತ್ತಮ ಕಿರುಚಿತ್ರವನ್ನು ರಚಿಸಿದ್ದಾರೆ. ಈ ಹಿಂದೆಯೂ ಸಹ ಇವರು ರಚಿಸಿದ ಮೋಜಿನ ಬಲೆ-1, 2 ಕಿರುಚಿತ್ರವೂ ಯಶಸ್ವಿಯಾಗಿ ಪ್ರದರ್ಶನಗೊಂಡಿದೆ. ಇದನ್ನೂ ಹೆಚ್ಚೆಚ್ಚು ಶೇರ್ ಮಾಡಿ ಅವರಿಗೆ ಪ್ರೋತ್ಸಾಹಿಸಬೇಕು ಎಂದು ಹೇಳಿದರು.
ನಂತರ ನಿರ್ದೇಶಕ ರವಿ ನಾಯ್ಕ ಮಾತನಾಡಿ,ಇದೊಂದು ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಕಿರುಚಿತ್ರವಾಗಿದ್ದು, ಸ್ಥಳೀಯ ಕಲಾವಿದರನ್ನು ಬಳಸಿಕೊಳ್ಳಲಾಗಿದೆ ಎಂದರು.
ಇದೆ ವೇಳೆ ಕಿರು ಚಿತ್ರ ತಂಡದಿoದ ಹಾಸ್ಯ ನಟ ಟೆನ್ನಿಸ್ ಕೃಷ್ಣರವರಿಗೆ ಶಾಲು ಹೊದಿಸಿ ಸನ್ಮಾನಿಸಿ ಗೌರವಿಸಿದರು.
ಚಲನಚಿತ್ರ ರಂಗದ ಸಹಾಯಕ ನಿರ್ದೇಶಕ ಮಂಜುನಾಥ ಭಟ್ಕಳ, ಉದ್ಯಮಿ ಉದಯ ನಾಯ್ಕ ಮಾತನಾಡಿದರು. ವೇದಿಕೆಯಲ್ಲಿ ಕಿರುಚಿತ್ರದ ನಿರ್ಮಾಪಕ ಮಾದೇವ ನಾಯ್ಕ, ನಿವೃತ್ತ ಸೈನಿಕ ಶ್ರೀಕಾಂತ ನಾಯ್ಕ, ಮಂಜುನಾಥ ನಾಯ್ಕ, ಗಣಪತಿ ನಾಯ್ಕ, ಗಜಾನನ ಆಚಾರಿ, ಸುಬ್ರಾಯ ನಾಯ್ಕ, ಚಿತ್ರದ ನಾಯಕ ಜಗದೀಶ ನಾಯ್ಕ, ನಾಯಕಿ ಅಂಕೋಲಾದ ರೂಪಾರಾಣಿ ಸೇರಿದಂತೆ ಮುಂತಾದವರಿದ್ದರು.

.

error: