
ಭಟ್ಕಳ:- ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಭಟ್ಕಳ ಇದರ ವತಿಯಿಂದ ಪ್ರಥಮಬಾರಿಗೆ ತಾಲೂಕಿನ ವಿವಿಧ ಇಲಾಖೆಗಳ ನೌಕರರಿಗಾಗಿ ನಡೆದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಮುರ್ಡೇಶ್ವರ ಪೋಲೀಸ್ ತಂಡವನ್ನು ಭಟ್ಕಳ ಪೋಲೀಸ್ ತಂಡ ಸೋಲಿಸಿ ಚಾಂಪಿಯನ್ ತಂಡವಾಗಿ ಹೊರಹೊಮ್ಮಿತು.
ಶನಿವಾರ ಭಟ್ಕಳ ಪೊಲೀಸ್ ಮೈದಾನದಲ್ಲಿ ಭಟ್ಕಳ ಡಿವೈಎಸ್‌ಪಿ ಬೆಳ್ಳಿಯಪ್ಪ ಪಂದ್ಯಾವಳಿಯನ್ನು ಉದ್ಘಾಟಿಸಿದ್ದರು. ಸಂಘದ ಅಧ್ಯಕ್ಷ ಮೋಹನ ನಾಯ್ಕ, ಹೆಸ್ಕಾಂ ಇಲಾಖೆಯ ಗ್ರಾಮೀಣ ವಲಯಾಧಿಕಾರಿ ಶೇಖರ ಪೂಜಾರಿ ಸಂಘದ ಕಾರ್ಯದರ್ಶಿ ಗಣೇಶ ಹೆಗಡೆ ಕಾರ್ಯಕ್ರಮ ನಿರ್ವಹಿಸಿದ್ದರು. ಸಂಘದ ರಾಜ್ಯ ಪರಿಷತ್ ಸದಸ್ಯ ಪ್ರಕಾಶ ಶಿರಾಲಿ, ಉಪಾಧ್ಯಕ್ಷ ಶಂಶುದ್ದೀನ್, ಸಂಘದ ಕ್ರೀಡಾ ಕಾರ್ಯದರ್ಶಿ ವಾಸುದೇವ ಮೊಗೇರ, ವಿವಿಧ ಇಲಾಖೆಗಳ ನೌಕರರು ಹಾಜರಿದ್ದರು..
ಭಟ್ಕಳ ತಾಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧ ಇಲಾಖೆಗಳ ಒಟ್ಟೂ 6 ತಂಡಗಳು ಭಾಗವಿಸಿದ್ದವು. ಭಾನುವಾರ ನಡೆದ ಅಂತಿಮ ಪಂದ್ಯದಲ್ಲಿ ಮುರ್ಡೇಶ್ವರ ಪೊಲೀಸ್ ತಂಡ ಮತ್ತು ಭಟ್ಕಳ ಪೊಲೀಸ್ ತಂಡಕ್ಕೆ ಅಂತಿಮ ಹಣಾಹಣಿ ಎರ್ಪಟ್ಟಿತ್ತು. ಭಟ್ಕಳ ಪೊಲೀಸ್ ತಂಡ ವಿಜಯಿಯಾಗಿ ಕಪ್ ಅನ್ನು ತನ್ನ ಮುಡಿಗೇರಿಸಿಕೊಂಡರೆ, ಮುರ್ಡೇಶ್ವರ ಪೋಲೀಸ್ ತಂಡವು ರನ್ನರ್ಸ್ ಅಪ್ ತಂಡವಾಗಿ ಹೊರಹೊಮ್ಮಿದೆ. ವಿಜೇತರಿಗೆ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಭಟ್ಕಳ ಅಧ್ಯಕ್ಷ ಮೋಹನ ನಾಯ್ಕ ಮತ್ತು ಪಧಾಧಿಕಾರಿಗಳು ಬಹುಮಾನ ವಿತರಿಸಿದರು.

More Stories
ಜನವರಿ 7 ಭಟ್ಕಳ ತಾಲೂಕ 11ನೆ ಸಾಹಿತ್ಯ ಸಮ್ಮೇಳ
ಭಟ್ಕಳ ತಾಲೂಕು ಕಸಾಪದಿಂದ ರಸಪ್ರಶ್ನೆ ಸ್ಪರ್ಧೆ – ಬಹುಮಾನ ವಿತರಣೆ.
ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲಿ ದೀಪದಾನ ಕಾರ್ಯಕ್ರಮ