
ಭಟ್ಕಳ: ಚಿತ್ರರಂಗಕ್ಕೆ ಕಳೆದ ಎರಡು ವರ್ಷಗಳಿಂದ ಕೊರೊನಾ ನೀಡಿದ ಹೊಡೆತಕ್ಕಿಂತ ಇತ್ತೀಚೆಗೆ ಪುನೀತ್ ರಾಜ್ಕುಮಾರ್ ಅವರ ನಿಧನ ಹೆಚ್ಚು ಆಘಾತಕಾರಿಯಾಗಿದೆ. ಚಿತ್ರರಂಗ ಇನ್ನೂ ಕೂಡಾ ಅವರ ನಿಧನದ ದುಖದಿಂದ ಹೊರಬಂದಿಲ್ಲ ಎಂದು ಹಾಸ್ಯನಟ ಟೆನ್ನಿಸ್ ಕೃಷ್ಣ ಹೇಳಿದರು.
ಅವರು ಭಟ್ಕಳದಲ್ಲಿ ಕಿಸ್ಮತ್ ಕಿರು ಚಿತ್ರ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ನಂತರ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಿದ್ದರು. ಚಿತ್ರರಂಗಕ್ಕೆ ಇದೊಂದು ದೊಡ್ಡ ನಷ್ಟವಾಗಿದ್ದು ಅವರ ಅಗಲಿಕೆಯ ದುಖ ಕೇವಲ ನಮಗಷ್ಟೇ ಅಲ್ಲ, ಆಂದ್ರ, ತಮಿಳುನಾಡಿನಿಂದ ಕೂಡಾ ತಂಡೋಪ ತಂಡವಾಗಿ ಜನ ಬಂದು ಅವರ ದರ್ಶನ ಪಡೆಯುತ್ತಿರುವುದು ಅವರ ಜನಪ್ರಿಯತೆಗೆ ಸಾಕ್ಷಿಯಾಗಿದೆ. ಇಂದಿನ ಚಿತ್ರರಂಗಕ್ಕೂ ಮೊದಲಿನ ಚಿತ್ರರಂಗಕ್ಕೂ ಅನೇಕ ಬದಲಾವಣೆಗಳಾಗಿವೆ ಎನ್ನುವುದನ್ನು ಒಪ್ಪಿಕೊಂಡ ಅವರು ಹಿಂದೆ ಒಂದು ಚಿತ್ರದಲ್ಲಿನ ಕಥೆಗೂ ಅದರಲ್ಲಿನ ಹಾಡಿಗೂ ಒಂದಕ್ಕೊAದು ಸಂಬAಧ ಇರುತ್ತಿತ್ತು. ಒಮ್ಮೆ ಕೇಳಿದರೆ ಮತ್ತೊಮ್ಮೆ ಕೇಳಬೇಕೆನ್ನಿಸುವ ಹಾಡು ಅಂದಿನ ಚಿತ್ರಗಳಲ್ಲಿತ್ತು. ಅಂದಿನ ಚಿತ್ರ ಸಾಹಿತಿಗಳು ಒಳ್ಳೊಳ್ಳೆ ಹಾಡುಗಳನ್ನು ಚಿತ್ರರಂಗಕ್ಕೆ ಕೊಟ್ಟಿದ್ದಾರೆ. ಚಿತ್ರರಂಗದ ಬೇರೆ ಬೇರೆ ಬಾಷೆಗಳ ಚಿತ್ರರಂಗಕ್ಕೆ ಪೈಪೋಟಿ ನೀಡುವುದಕ್ಕೋಸ್ಕರ ಈಗಿನ ಬದಲಾವಣೆಯನ್ನು ನಾವು ನೋಡುತ್ತಿದ್ದೇವೆ. ಕನ್ನಡ ಚಿತ್ರರಂಗದ ಬದಲಾವಣೆ ಅನಿವಾರ್ಯವಾಗಿತ್ತು ಲಾಕ್ಡೌನ್ ಆಗುವುದಕ್ಕೆ ಮುಂಚೆ ಲವ್ಮಾಕ್ವೆಲ್, ತಿಥಿ ಚಿತ್ರಗಳು ಬಂದವು. ಅವುಗಳಲ್ಲಿ ತಿಥಿ ಎನ್ನುವ ಚಿತ್ರ ಅತ್ಯಂತ ಕಡಿಮೆ ಬಜೆಟ್ನ ಚಿತ್ರವಾಗಿದ್ದ ಅನೇಕ ಪ್ರಶಸ್ತಿಗಳನ್ನು ಗಳಿಸುವಲ್ಲಿ ಯಶಸ್ವೀಯಾಗಿದ್ದಲ್ಲದೇ ಚಿತ್ರರಂಗದ ದಿಗ್ಗಜರು ಕೂಡಾ ಚಿತ್ರದ ಕುರಿತು ತಿಳಿದುಕೊಳ್ಳುವಂತೆ ಮಾಡಿ ಉತ್ತಮ ಸದ್ದು ಮಾಡಿದೆ. ಹೊಸ ಕಲಾವಿದರು, ಹೊಸ ನಿರ್ದೇಶಕರು ಕೂಡಿ ಮಾಡಿದ ಈ ಚಿತ್ರ 15 ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಗಳಿಸುವಲ್ಲಿ ಯಶಸ್ವೀಯಾಗಿದ್ದು ಅನೇಕ ಹಿಂದಿ ನಟರುಗಳು ಸಹ ಚಿತ್ರದ ಕುರಿತು ತಿಳಿದುಕೊಂಡಿದ್ದಾರೆ ಎಂದರೆ ಅದು ಕನ್ನಡ ಚಿತ್ರರಂಗದ ಹೆಮ್ಮೆ.
ಕೋರೊನಾ ಹೊಡೆತದ ನಂತರ ಚಿತ್ರರಂಗ ಮತ್ತೆ ಚೇತರಿಸಿಕೊಳ್ಳುವತ್ತ ಸಾಗುತ್ತಿದೆ. ಎಲ್ಲಾ ಥಿಯೇಟರ್ಗಳಲ್ಲಿಯೂ ಕೂಡಾ ಶೇ.100ರಷ್ಟು ಭರ್ತಿಗೆ ಪರವಾನಿಗೆ ಸರಕಾರ ನೀಡಿದ್ದು ಜನತೆ ಕನ್ನಡ ಚಿತ್ರಗಳನ್ನು ನೋಡುವ ಮೂಲಕ ಚಿತ್ರಗಳನ್ನು ಉಳಿಸಿ, ಕಲಾವಿದರನ್ನು ಬೆಳೆಸುವಂತೆ ಕರೆ ನೀಡಿದರು. ಹೊಸ ಕಲಾವಿದರಿಗೆ ಪ್ರೋತ್ಸಾಹ ಕೊಡಿ ಎನ್ನುವುದು ಅವರ ಕೋರಿಕೆಯಾಗಿದೆ.
ಕರಾವಳಿ ನಂಟು:
ಕರಾವಳಿಯ ಕುರಿತು ತನ್ನ ಸಂಬAಧವನ್ನು ಬಿಚ್ಚಿಟ್ಟ ಟೆನ್ನಿಸ್ ಕೃಷ್ಣ ನನ್ನ ಪತ್ನಿ ಮಂಗಳೂರಿನವಳು, ತನ್ನ ಮೊದಲ ಚಿತ್ರ ಮಲ್ಪೆಯಲ್ಲಿ ಚಿತ್ರೀಕರಣಗೊಂಡಿದ್ದರಿAದ ಕರಾವಳಿಯ ನನ್ನ ಸಂಬAಧ ಇನ್ನಷ್ಟು ಗಟ್ಟಿಗೊಂಡಿದೆ. ಮುರ್ಡೇಶ್ವರದಲ್ಲಿ, ಭಟ್ಕಳದಲ್ಲಿ ಅನೇಕ ಕಡೆಗಳಲ್ಲಿ ಶೂಟಿಂಗೆ ಬಂದಿದ್ದ ತನಗೆ ಕರಾವಳಿ ಅಚ್ಚುಮೆಚ್ಚು ಎಂದ ಅವರು ಅನೇಕ ಸಂಬAಧಿಗಳು ಮಂಗಳೂರು, ಹೊನ್ನಾವರ, ಕುಮಟಾಗಳಲ್ಲಿದ್ದಾರೆ ಎಂದರೆ ಭಟ್ಕಳದ ರಾಮಕೃಷ್ಣ ನಾಯ್ಕ, ರಾಜು ಗುಡಿಗಾರ ಅವರ ಬಹಳ ವರ್ಷದ ಸ್ನೇಹ ನೆನಪಿಸಿಕೊಳ್ಳಲು ಮರೆಯಲಿಲ್ಲ.
More Stories
ಜನವರಿ 7 ಭಟ್ಕಳ ತಾಲೂಕ 11ನೆ ಸಾಹಿತ್ಯ ಸಮ್ಮೇಳ
ಭಟ್ಕಳ ತಾಲೂಕು ಕಸಾಪದಿಂದ ರಸಪ್ರಶ್ನೆ ಸ್ಪರ್ಧೆ – ಬಹುಮಾನ ವಿತರಣೆ.
ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲಿ ದೀಪದಾನ ಕಾರ್ಯಕ್ರಮ