March 12, 2025

Bhavana Tv

Its Your Channel

ಸಂಭ್ರಮದಿOದ ನಡೆದ ಶ್ರೀ ನಾಗದೇವತಾ ಸಪರಿವಾರ ದೇವಸ್ಥಾನದ ವರ್ಧಂತಿ ಉತ್ಸವ

ಭಟ್ಕಳ ತಾಲೂಕಿನ ಶಿರಾಲಿಯ ಸೋನಾರಕೇರಿ-ದೈವಜ್ಞಕೇರಿಯಲ್ಲಿರುವ ಶ್ರೀ ನಾಗದೇವತಾ, ಶ್ರೀ ಜಟ್ಟಿಗರಾಯ, ಶ್ರೀ ಚೌಡೇಶ್ವರಿ, ಶ್ರೀ ವನದುರ್ಗಾ ಸಪರಿವಾರ ದೇವಸ್ಥಾನದ ೧೫ನೇ ವರ್ಷದ ವರ್ಧಂತಿ ಉತ್ಸವವು ಭಕ್ತಿ, ಶ್ರದ್ಧೆ ಮತ್ತು ಸಂಭ್ರಮದಿoದ ಇತ್ತೀಚೆಗೆ ಜರುಗಿತು.


ಎರಡು ದಿನಗಳ ಕಾಲ ನಡೆದ ಈ ಸಮಾರಂಭದಲ್ಲಿ ಶ್ರೀ ದೇವರ ಸನ್ನಿಧಿಯಲ್ಲಿ ಗಣೇಶ ಪೂಜಾ, ಪ್ರಾರ್ಥನೆ, ನಾಂದಿ,ತತ್ವಾAತ ಹೋಮ, ಮಹಾಪೂಜೆ,ಅನ್ನಸಂತರ್ಪಣೆ ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸಲಾಯಿತು.ರಾತ್ರಿ ಶ್ರೀ ಜ್ಞಾನೇಶ್ವರಿ ಮಹಿಳಾ ಮಂಡಳಿವರು ಭಜನಾ ಕಾರ್ಯಕ್ರಮವನ್ನು ನಡೆಸಿ ಕೊಟ್ಟರು.
ಆಡಳಿತ ಮೊಕ್ತೇಸರರಾದ ಶ್ರೀ ಗುರುದತ್ತ ವಾಮನ ಶೇಟ್ ಮುಂಬಯಿ ರವರ ನೇತೃತ್ವದಲ್ಲಿ ವೈದಿಕ ಕಾರ್ಯಕ್ರಮಗಳನ್ನು ನೆರವೇರಿಸಲಾಯಿತು.

ಊರಿನ ಮತ್ತು ಪರಊರಿನ ನೂರಾರು ಕುಟುಂಬಿಕರು ಮತ್ತು ಭಕ್ತಾದಿಗಳು ಆಗಮಿಸಿ ಶ್ರೀ ದೇವರ ಕೃಪೆಗೆ ಪಾತ್ರರಾದರು.

error: