March 12, 2025

Bhavana Tv

Its Your Channel

ಕುಂಟವಾಣಿ ಪ್ರೌಢಶಾಲೆಯಲ್ಲಿ ಶಿಕ್ಷಕಿ ಸವಿತಾ ನಾಯ್ಕಗೆ ಬೀಳ್ಕೊಡುಗೆ

ಭಟ್ಕಳ :- ಕುಂಟವಾಣಿ ಪ್ರೌಢಶಾಲೆ ಪ್ರಾರಂಭವಾದಾಗಿನಿAದ ಸರಿಸುಮಾರು 15 ವರ್ಷಗಳ ಕಾಲ ಸೇವೆ ಸಲ್ಲಿಸಿ ಸರಕಾರಿ ಪ್ರೌಢಶಾಲೆ ಸೋನಾರಕೇರಿ ಭಟ್ಕಳ ಇಲ್ಲಿಗೆ ವರ್ಗಾವಣೆಗೊಂಡ ಶ್ರೀಮತಿ ಸವಿತಾ ನಾಯ್ಕ ಇವರಿಗೆ ಬಿಳ್ಕೊಡುಗೆ ಸಮಾರಂಭ ನಡೆಯಿತು. ಜೊತೆಯಲ್ಲಿ ಅವರ ಸ್ಥಾನಕ್ಕೆ ಸೋನಾರಕೇರಿ ಪ್ರೌಢಶಾಲೆಯಿಂದ ವರ್ಗಾವಣೆಗೊಂಡು ಬಂದ ಸವಿತಾ ಅವರನ್ನು ಸ್ವಾಗತಿಸಲಾಯಿತು. ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಶ್ರೀ ವೆಂಕಟೇಶ ನಾಯ್ಕ, ಸದಸ್ಯರಾದ ಸಂತೋಷ ನಾಯ್ಕ,ಮಂಜುನಾಥ ಶೆಟ್ಟಿ,ಸುಕ್ರ ಗೊಂಡ, ಗಜಾನನ ದೇಶಭಂಡಾರಿ, ಲಲಿತಾ ಗೊಂಡ, ಗೌರಿ ರಾಜು ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು. ಶ್ರೀಮತಿ ಸವಿತಾ ನಾಯ್ಕ ಅವರು ತಮ್ಮ ಭಾಷಣದಲ್ಲಿ ತಮಗೆ ಸಹಕರಿಸಿದ ಎಲ್ಲರನ್ನು ಸ್ಮರಿಸಿದರು. ಕೆಲವು ವಿದ್ಯಾರ್ಥಿಗಳು ತಮ್ಮ ಅನುಭವ ಹಂಚಿಕೊAಡರು, ಪ್ರಭಾರ ಮುಖ್ಯಾದ್ಯಾಪಕರಾದ ಡಾ|| ಸುರೇಶ ತಾಂಡೇಲ, ಶಿಕ್ಷಕರಾದ ಸವಿತಾ ನಾಯ್ಕ, ವಿಮಲಾ ಮೊಗೇರ ತಮ್ಮ ಒಡನಾಟ ಸ್ಮರಿಸಿದರು. ಶಿಕ್ಷಕರಾದ ಕುಮಾರ ನಾಯ್ಕ ಸ್ವಾಗತಿಸಿದರೆ, ಮಾರುತಿ ನಾಯ್ಕ ವಂದಿಸಿದರು, ಆನಂದ ನಾಯ್ಕ ಕಾರ್ಯಕ್ರಮ ನಿರೂಪಿಸಿದರು.

error: