March 13, 2025

Bhavana Tv

Its Your Channel

ಭಟ್ಕಳ ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಇಸ್ಮಾಯಿಲ್ ಇಮ್ಯಾದ್ ಮುಕ್ತೇಸರ ಆಯ್ಕೆ

ಭಟ್ಕಳ:- ಸಾಮಾಜಿಕ- ರಾಜಕೀಯ ಸಂಸ್ಥೆ ಮಸ್ಲಿಜೆ ಇಸ್ಲಾಹ್ ವಾ ತಂಝೀಮ್ ಬೆಂಬಲದೊAದಿಗೆ ಅವರು ಈಗಾಗಲೇ ಈ ಹುದ್ದೆಗೆ ನಾಮನಿರ್ದೇಶನಗೊಂಡಿದ್ದರು. ಪುರಸಭೆಯಲ್ಲಿ ನಡೆದ ಸಭೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು. ಪುರಸಭೆ ಅಧ್ಯಕ್ಷ ಪರ್ವೇಜ್ ಕಾಸಿಂಜಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆಗೆ ಇಸ್ಮಾಯಿಲ್ ಇಮ್ಯಾದ್ ಅವರನ್ನು ಪುರಸಭಾ ಸದಸ್ಯೆ ಫಾತಿಮಾ ಕೌಸರ್ ಸೂಚಿಸಿದರು. ಅಬ್ದುಲ್ ಅಜೀಂ ಮೊಹೆಶಮ್ ಮತ್ತು ಫಯಾಜ್ ಮುಲ್ಲಾ ನಾಮನಿರ್ದೇಶನವನ್ನು ಬೆಂಬಲಿಸಿದರು. ನಂತರ ಇಸ್ಮಾಯಿಲ್ ಇಮ್ಯಾದ್ ಮುಕ್ತೇಸರ್ ಅವಿರೋಧವಾಗಿ ಆಯ್ಕೆಯಾದರು.
ಯುವ ಸಮಾಜ ಸೇವಕ ಇಸ್ಮಾಯಿಲ್ ಇಮ್ಯಾದ್ ಅವರು ಬಂದರ್ ರಸ್ತೆ, ಮಗ್ದೂಮ್ ಕಾಲೋನಿ, ಜಾಲಿ ರಸ್ತೆ ಹನುಮಾನಗರ ಮತ್ತು ಅಕ್ಕಪಕ್ಕದ ಪ್ರದೇಶಗಳನ್ನು ಒಳಗೊಂಡ ವಾರ್ಡ್ ನಂ.4ರ ಕೌನ್ಸಿಲರ್ ಆಗಿರುವುದನ್ನು ಸ್ಮರಿಸಬಹುದಾಗಿದೆ. ಪುರಸಭೆಯಲ್ಲಿ ಕೌನ್ಸಿಲರ್ ಆಗಿ ಇದು ಮೊದಲ ಅವಧಿಯಾಗಿದೆ.
ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿರುವ ಅವರನ್ನು ಪುರಸಭೆ ಸದಸ್ಯರುಗಳು ಅಭಿನಂದಿಸಿ ಶುಭ ಹಾರೈಸಿದರು. ಉಪಾಧ್ಯಕ್ಷ ಖೈಸರ್ ಮೊಹಿಶಾಮ್, ಸಿಇಒ ಸೇರಿದಂತೆ ಹಲವರು ಇದ್ದರು.

error: