
ಭಟ್ಕಳ: ಯುವತಿಯೋರ್ವಳ ಹೊಟ್ಟೆಯಲ್ಲಿದ್ದ ಸುಮಾರು 7.5 ಕೆಜಿ ಗಡ್ಡೆಯನ್ನು ಯಶಸ್ವಿ ಶಸ್ತ್ರ ಚಿಕಿತ್ಸೆ ನಡೆಸುವ ಮೂಲಕ ಹೊರತೆಗೆದಿದ್ದು ಯುವತಿ ಪ್ರಾಣಾಪಾಯದಿಂದ ಪಾರು ಮಾಡಿರುವ ಘಟನೆ ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.
ಗೋಕರ್ಣ ಮೂಲದ ಬಂಕಿಕೊಡ್ಲ ಶಾರದ ಗೊಂಡ ಎನ್ನುವ 22 ವರ್ಷದ ಯುವತಿ ಶುಕ್ರವಾರದಂದು ಹೊಟ್ಟೆ ದಪ್ಪವಾಗಿದೆ ಎಂದು ಸ್ತ್ರೀ ರೋಗ ತಜ್ಞರಾದ ಡಾ.ಸಹನ್ ಎಸ್ ಕುಮಾರ ಬಳಿ ಚಿಕಿತ್ಸೆಗೆ ದಾಖಲಾಗಿದ್ದು ಯುವತಿ ತುಂಬಿದ ಗರ್ಭಿಣಿ ರೀತಿಯಲ್ಲಿ ಆಕೆಯ ಹೊಟ್ಟೆ ಕಂಡು ಬಂದಿದ್ದು ತಕ್ಷಣಕ್ಕೆ ಸ್ಕ್ಯಾನಿಂಗ್ ನಡೆಸಿ ನೋಡಿದಾಗ ಹೊಟ್ಟೆಯ ಬಲಭಾಗದ ಅಂಡಾಶಯದಲ್ಲಿ ನೀರು ಗುಳ್ಳೆ ರೀತಿಯ ಗಡ್ಡೆ ಇರುವುದು ಕಂಡು ಬಂದಿದೆ. ತಕ್ಷಣ ಸೋಮವಾರದಂದು
ಶಸ್ತ್ರಚಿಕಿತ್ಸೆ ನಡೆಸಿ 7.5 ಕೆ.ಜಿ ಗಡ್ಡೆಯನ್ನು ಹೊರತೆಗೆದಿದ್ದಾರೆ. ಶಸ್ತ್ರ ಚಿಕಿತ್ಸೆ ವೇಳೆ ಯುವತಿಯ
ಹಿಮೊಗ್ಲೋಬಿನ್ ಪ್ರಮಾಣ 7 ರಷ್ಟಿದ್ದು ಈಗ ಯುವತಿ ರಕ್ತ ನೀಡಲಾಗಿದ್ದು ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಯುವತಿ ಚೇತರಿಸಿಕೊಳ್ಳುತ್ತಿದ್ದಾರೆ,
ಈ ವೇಳೆ ತಾಲೂಕಾಸ್ಪತ್ರೆಯ ವೈದ್ಯಾಧಿಕಾರಿ ಡಾ. ಸವಿತಾ ಕಾಮತ್ ಅರವಳಿಕೆ ನೀಡಿ ಶಸ್ತ್ರ ಚಿಕಿತ್ಸೆ ನಡೆಸಲು ಸಹಕರಿಸಿದ್ದಾರೆ.
ನೂತನವಾಗಿ ಭಟ್ಕಳ ಸರ್ಕಾರಿ ಆಸ್ಪತ್ರೆಗೆ ಬಂದ ಸ್ತ್ರೀ ರೋಗ ತಜ್ಞ ಡಾ.ಸಹನ್ ಎಸ್ ಕುಮಾರ
ಮೂಡಬಿದ್ರೆ ಮೂಲದವರಾಗಿದ್ದು ಉಡುಪಿಯ ಕೆ.ಎಂ.ಸಿ ಆಸ್ಪತ್ರೆಯಲ್ಲಿ 5 ವರ್ಷ ಕೆಲಸ ಮಾಡಿರುವ ಅನುಭವ ಹೊಂದಿದ್ದು ಕಳೆದ 2 ತಿಂಗಳ ಹಿಂದೆಷ್ಟೆ ಭಟ್ಕಳ ಸರ್ಕಾರಿ ಆಸ್ಪತ್ರೆಗೆ ಸರ್ಕಾರದಿಂದ ನೇಮಕಗೊಂಡಿದ್ದಾರೆ.

More Stories
ಜನವರಿ 7 ಭಟ್ಕಳ ತಾಲೂಕ 11ನೆ ಸಾಹಿತ್ಯ ಸಮ್ಮೇಳ
ಭಟ್ಕಳ ತಾಲೂಕು ಕಸಾಪದಿಂದ ರಸಪ್ರಶ್ನೆ ಸ್ಪರ್ಧೆ – ಬಹುಮಾನ ವಿತರಣೆ.
ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲಿ ದೀಪದಾನ ಕಾರ್ಯಕ್ರಮ