
ಭಟ್ಕಳ: ಶಿವಮೊಗ್ಗದಲ್ಲಿ ನಡೆದ ಹರ್ಷ ಕೊಲೆ ಹಾಗೂ ನಂತರ ನಡೆದ ಗಲಭೆಗೆ ಸಚಿವ ಈಶ್ವರಪ್ಪನವರೇ ಕಾರಣವಾಗಿದ್ದು, ಕೂಡಲೇ ಅವರನ್ನು ಸಚಿವ ಸಂಪುಟದಿAದ ವಜಾಗೊಳಿಸುವಂತೆ ಆಗ್ರಹಿಸಿ ಸೋಶಿಯಲ್ ಡೆಮಾಕ್ರೆಟಿಕ್ ಪ್ರಂಟ್ ಆಫ್ ಇಂಡಿಯಾ (ಎಸ್‌ಡಿಎಫ್‌ಐ) ಕಾರ್ಯಕರ್ತರು ಇಲ್ಲಿನ ಮಿನಿ ವಿಧಾನಸೌಧದ ಮುಂದೆ ಪ್ರತಿಭಟನೆ
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಎಸ್‌ಡಿಪಿಐ ಜಿಲ್ಲಾಧ್ಯಕ್ಷ ತೌಫಿಕ್ ಬ್ಯಾರಿ, ಭಾರತದಲ್ಲಿ ಹಿಂದೂ ಮುಸ್ಲಿಮರು ಅನ್ನೋನ್ಯವಾಗಿ ಬದುಕುತ್ತ ಬಂದಿದ್ದು, ಚುನಾವಣೆಯ ಹೊತ್ತಿಗೆ ಬಿಜೆಪಿ ಗಲಭೆಗಳನ್ನು ಸೃಷ್ಟಿಸಿ ಲಾಭ ಪಡೆಯಲು ಹವಣಿಸುತ್ತಿದೆ. ಹರ್ಷ ಕೊಲೆ ನಡೆದ ನಂತರ ಈಶ್ವರಪ್ಪನವರು, ಕೊಲೆಗೆ ಮುಸ್ಲಿಮ್ ಗೂಂಡಾಗಳೇ ಕಾರಣ ಎಂದು ಹೇಳಿರುವುದು ಅವರ ಮನಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ. ಕೊಲೆಗಾರರು ಗಾಂಜಾ ಸೇವಿಸಿ ಕೃತ್ಯ ಎಸಗಿದ್ದಾರೆ ಎಂದು ವರದಿಯಾಗಿದ್ದು,ಗಾಂಜಾ,ಸರಾಹಿ ಮಾರಾಟ ವ್ಯಾಪಾರ ವಹಿವಾಟು ಬಿಜೆಪಿ ಕಾಲಾವಧಿಯಲ್ಲಿಯೇ ಹೆಚ್ಚಾಗಿದೆ. ಎಸ್‌ಡಿಪಿಐ ಇಂತಹ ಯಾವುದೇ ಕಸುಬಿನಲ್ಲಿಯೂ ಪಾಲ್ಗೊಂಡಿಲ್ಲ. ಆದರೂ ಎಸ್‌ಡಿಪಿಐ ಅನ್ನು ನಿಷೇಧಿಸಬೇಕು ಎಂದು ಬಿಜೆಪಿ ಮುಖಂಡರು ಹೇಳುತ್ತಿರುವುದು ಹಾಸ್ಯಾಸ್ಪದ ಸಂಗತಿಯಾಗಿದೆ. ಗೃಹ ಸಚಿವರಾದವರೂ ಪೊಲೀಸ್ ತನಿಖೆಯ ವಿರುದ್ಧವೇ ಮಾತನಾಡುತ್ತಿದ್ದಾರೆ ಎಂದರೆ ಅವರು ಆ ಇಲಾಖೆಯ ಸಚಿವರಾಗಿರುವುದಾದರೂ ಏತಕ್ಕೆ ಎಂದು ಪ್ರಶ್ನಿಸಿದರು.
ಜಿಲ್ಲೆಯಲ್ಲಿಯೂ ಕೆಲವರು ಧರ್ಮದ ಆಧಾರದಲ್ಲಿ ಹೇಳಿಕ ನೀಡುತ್ತಿರುವುದು ಖಂಡನೀಯವಾಗಿದ್ದು, ಅವರು ಪ್ರತಿಭಟನೆ ನಡೆಸಿ ಸ್ಥಳದಲ್ಲಿಯೇ ನಾವೂ ಪ್ರತಿಭಟನೆ ನಡೆಸುವ ಸಾಮರ್ಥ್ಯವನ್ನು ಹೊಂದಿದ್ದೇವೆ ಎಂದು ಎಚ್ಚರಿಸಿದರು. ತಹಸೀಲ್ದಾರ ಎಸ್. ರವಿಚಂದ್ರ ಮನವಿ ಪತ್ರವನ್ನು ಸ್ವೀಕರಿಸಿದರು. ಎಸ್‌ಡಿಪಿಐ ಪ್ರಮುಖ, ಜಾಲಿ ಪಟ್ಟಣ ಪಂಚಾಯತ ಸದಸ್ಯ ವಾಸೀಮ್ ಮನೇಗಾರ್ ಉಪಸ್ಥಿತರಿದ್ದರು. ಎಸ್‌ಡಿಪಿಐ ಪ್ರತಿಭಟನೆಯ ಹಿನ್ನೆಲೆಯಲ್ಲಿ ಸಿಪಿಐ ದಿವಾಕರ ನೇತೃತ್ವದಲ್ಲಿ ಬಿಗಿಯಾದ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

More Stories
ಜನವರಿ 7 ಭಟ್ಕಳ ತಾಲೂಕ 11ನೆ ಸಾಹಿತ್ಯ ಸಮ್ಮೇಳ
ಭಟ್ಕಳ ತಾಲೂಕು ಕಸಾಪದಿಂದ ರಸಪ್ರಶ್ನೆ ಸ್ಪರ್ಧೆ – ಬಹುಮಾನ ವಿತರಣೆ.
ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲಿ ದೀಪದಾನ ಕಾರ್ಯಕ್ರಮ