

ಭಟ್ಕಳ: ತಾಲೂಕಿನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಜನಸಾಮಾನ್ಯರಿಗೆ ಕಿರಿಕಿರಿಯನ್ನು ತಂದಿದ್ದು, ಜನರ ಹಿತದೃಷ್ಟಿಯಿಂದ ಅಗತ್ಯ ಬದಲಾವಣೆ ತಂದು ಕಾಮಗಾರಿ ಅನುಷ್ಠಾನಗೊಳಿಸುವಂತೆ ತಾಲೂಕಿನ ವಿವಿಧ ಸಂಘ ಸಂಸ್ಥೆಗಳ ಮುಖಂಡರು ಆಗ್ರಹಿಸಿದ್ದಾರೆ.
ಹೆದ್ದಾರಿ ಕಾಮಗಾರಿಯ ಕುರಿತು ತಾಲೂಕಿನ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ಮುಖಂಡರ ಅಭಿಪ್ರಾಯವನ್ನು ಸಂಗ್ರಹಿಸಲಾಯಿತು. ಭಟ್ಕಳದಲ್ಲಿ ಫೈ ಓವರ್ ಅಗತ್ಯ ಇದ್ದು, ಅದನ್ನು ಬ್ಯಾಂಪ್‌ಗೆ ಬದಲಾವಣೆ ಮಾಡಿರುವುದು ಖಂಡನೀಯವಾಗಿದೆ. ಈ ಹಿಂದೆಯೇ ಫೈ ಓವರ್‌ಗೆ ವಿನ್ಯಾಸ ರೂಪಿಸಿ ಹೆದ್ದಾರಿ ಪ್ರಾಧಿಕಾರವೇ ಅನುಮೋದನೆ ನೀಡಿದೆ. ಇದೀಗ ಏಕಾಏಕಿ ಬದಲಾವಣೆ ಮಾಡಿರುವುದು ಎ0ದು ಮುಖಂಡರು ಪ್ರಶ್ನಿಸಿದರು. ರಾಷ್ಟ್ರೀಯ ಹೆದ್ದಾರಿ ಮಧ್ಯೆ ಗೋಡೆಯ ರೀತಿ ದ್ವಿಭಾಜಕ ನಿರ್ಮಿಸಿರುವುದು ಸರಿಯಾದ ಕ್ರಮ ಅಲ್ಲ,
ಭಟ್ಕಳ, ಹಳದಿಪುರ, ಅವರ್ಸಾ ಬಿಟ್ಟರೆ ದೇಶದ ಯಾವುದೇ ಭಾಗದಲ್ಲಿ ಇಂತಹ ಕ್ರಮ ಅನುಸರಿಸಿಲ್ಲ. ಭಟ್ಕಳದ ಜನರು ನೋಡಿಕೊಂಡು ಸುಮ್ಮನೆ ಕುಳಿತಿರುವುದೇ ಇದಕ್ಕೆಲ್ಲ ಕಾರಣವಾಗಿದೆ. ಹೆದ್ದಾರಿಯ ಅಗಲವನ್ನು 45ಮೀ.ನಿಂದ 30ಮೀ.ಗೆ ಇಳಿಸಲಾಗಿದೆ. ಆದರೆ ಇಲ್ಲಿ ಸರ್ವೀಸ್ ರಸ್ತೆ ಇಲ್ಲದಿದ್ದರೆ, ಮುಂದಿನ ದಿನಗಳಲ್ಲಿ ಕಷ್ಟವಾಗುತ್ತದೆ. ಅಪಘಾತಗಳು ಹೆಚ್ಚುವ ಸಾಧ್ಯತೆ ಹೆಚ್ಚಿದೆ. ಗುಳ್ಳಿ ಕ್ರಾಸ್‌ನಲ್ಲಿ ಅಂಡರ್‌ಪಾಸ್ ಅಗತ್ಯವಾಗಿದ್ದು, ಈ ಬಗ್ಗೆಯೂ ಹೆದ್ದಾರಿ ಪ್ರಾಧಿಕಾರ ನಿರ್ಧಾರ ತೆಗೆದುಕೊಳ್ಳಬೇಕು. ಇಲ್ಲಿನ ಆಸ್ಪತ್ರೆ, ಶಾಲೆ, ರಿಕ್ಷಾ ಯೂನಿಯನ್, ಟೆಂಪೋ ಯೂನಿಯನ್ ಇತ್ಯಾದಿ ಸಂಘ ಸಂಸ್ಥೆಗಳಿAದ ಹೆದ್ದಾರಿ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಿ ಇಲ್ಲಿನ ಬೇಡಿಕೆಗಳನ್ನು ಸರಕಾರದ ಗಮನಕ್ಕೆ ತರಬೇಕು. ಭಟ್ಕಳ ಪುರಸಭೆ ಕೂಡಲೇ ಸಭೆ ಕರೆದು ನಿರ್ಣಯವನ್ನು ಜಿಲ್ಲಾಧಿಕಾರಿಗಳ ಮೂಲಕ ಸರಕಾರಕ್ಕೆ ಸಲ್ಲಿಸಬೇಕು, ಇನ್ನೊಂದು ಕಡೆ ಸಂಸದರು, ಶಾಸಕರ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಸಚಿವರು, ಮುಖ್ಯಮಂತ್ರಿಗಳ ಮುಂದೆ ಸಮಸ್ಯೆಯನ್ನು ವಿವರಿಸಿ, ಜನರ ಬೇಡಿಕೆ ಈಡೇರಿಸುವಂತೆ ಸರಕಾರದ ಮೇಲೆ ಒತ್ತಡ ಹೇರಬೇಕು. ನಮ್ಮ ಬೇಡಿಕೆಗಳಿಗೆ ಅಧಿಕಾರಿಗಳು ಹಾಗೂ ಹೆದ್ದಾರಿ ಪ್ರಾಧಿಕಾರ ಮನ್ನಣೆ ನೀಡದೇ ಇದ್ದರೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಉಗ್ರ ಪ್ರತಿಭಟನೆ ನಡೆಸುವುದು ಎಂದು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಈ ಸಂದರ್ಭದಲ್ಲಿ ಭಟ್ಕಳ ಪುರಸಭೆ ಅಧ್ಯಕ್ಷ ಪರ್ವೇಜ್ ಕಾಶೀಮ್‌ಜಿ, ಉಪಾಧ್ಯಕ್ಷ ಕೈಸರ್ ಮೊತೇಶಮ್. ಭಟ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ ನಾಯ್ಕ, ಭಟ್ಕಳ ಮಜ್ಜಿಸೇ ಇಸ್ಲಾ ವ ತಂಜೀಮ್ ಅಧ್ಯಕ್ಷ
ಎಸ್.ಎಂ.ಫರ್ವೇಜ,ಎo ಆರ್.ನಾಯ್ಕ, ರಾಜೇಶ ನಾಯಕ್, ಸೈಟ್ ಮೊತೇಶಮ್, ಇನಾಯಿತುಲ್ಲಾ ಶಾಬಂದ್ರಿ, ಅಬ್ದುರಕೀಟ್, ಎಮ್, ಜೆ. ಅಬ್ದುಲ್ ಮಜೀದ್, ನರೇಂದ್ರ ನಾಯಕ್, ಅಜೀಜ್ ಉರೆಹಮಾನ್ ರುಕ್ಕುದ್ದೀನ್, ಜೈಲಾನಿ ಮೊತೇಶಮ್, ಜೈಲಾನಿ ಶಾಬಂದ್ರಿ, ಸತೀಶಕುಮಾರ್, ತೌಫಿಕ್ ಬ್ಯಾರಿ,ಆಸಿಪ್ ಶೇಖ್ ಮೊದಲಾದವರು ಉಪಸ್ಥಿತರಿದ್ದರು.

More Stories
ಜನವರಿ 7 ಭಟ್ಕಳ ತಾಲೂಕ 11ನೆ ಸಾಹಿತ್ಯ ಸಮ್ಮೇಳ
ಭಟ್ಕಳ ತಾಲೂಕು ಕಸಾಪದಿಂದ ರಸಪ್ರಶ್ನೆ ಸ್ಪರ್ಧೆ – ಬಹುಮಾನ ವಿತರಣೆ.
ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲಿ ದೀಪದಾನ ಕಾರ್ಯಕ್ರಮ