March 13, 2025

Bhavana Tv

Its Your Channel

ಜ್ಞಾನೇಶ್ವರಿ ಮಹಿಳಾ ಮಂಡಳಿ ಸೋನಾರಕೇರಿ ಭಟ್ಕಳ ಆಶ್ರಯದಲ್ಲಿ ನಡೆದ ವಿಶ್ವ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ

ಭಟ್ಕಳ: ಪ್ರತಿಯೊಂದು ಪುರುಷನ ಹಿಂದೆ ಒಂದು ಹೆಣ್ಣು ಇರುವ ಹಾಗೇ, ಜೀವನದಲ್ಲಿ ಹೆಣ್ಣು ಈಗಿನ ಸಂದರ್ಭದಲ್ಲಿ ಎಲ್ಲಾ ಕ್ಷೇತ್ರದಲ್ಲಿ ತೊಡಗಿಕೊಂಡಿದ್ದಾರೆ. ಹಾಗೂ ಸಮಾಜದ ಸಹಕಾರ ಅಷ್ಟೇ ಮುಖ್ಯ ಎಂದು ಪುರಸಭೆ ಮುಖ್ಯಾಧಿಕಾರಿ ರಾಧಿಕಾ ಎಸ್ ಹೇಳಿದರು.

ಅವರು ದೈವಜ್ಞ ಸಭಾಭವನದಲ್ಲಿ ಜ್ಞಾನೇಶ್ವರಿ ಮಹಿಳಾ ಮಂಡಳಿ ಸೋನಾರಕೇರಿ ಭಟ್ಕಳ ಇವರ ಆಶ್ರಯದಲ್ಲಿ ನಡೆದ ವಿಶ್ವ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಭಾಗಿಯಾಗಿ ಮಾತನಾಡಿದರು.

ಉದ್ಘಾಟಕರಾಗಿ ಆಗಮಿಸಿದ ಕರ್ನಾಟಕ ಮಾನವ ಹಕ್ಕುಗಳ ರಾಜ್ಯಾಧ್ಯಕ್ಷೆ ಪ್ರೇಮ ರಾಮಮೂರ್ತಿ ಮಾತನಾಡಿ, ಹೆಣ್ಣು ಸಂಸಾರದ ಕಣ್ಣು, ಹೆಣ್ಣು ಯಾವುದೇ ಶೋಷಣೆಗೆ ಒಳಪಡದೇ ಎಲ್ಲಾ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿ ನಿಲ್ಲಬೇಕು. ಎದ್ದು ನಿಂತರೆ ಮಾತ್ರ ಸಮಾಜದ ಏಳಿಗೆ ಸಾಧ್ಯ ಎಂದರು.

ಪಿಎಸ್‌ಐ ಸುಮಾ ಆಚಾರ್ಯ ಮಾತನಾಡಿ ಸಮಾಜದಲ್ಲಿ ಹೆಣ್ಣು ಗಂಡು ಎಂಬ ಭೇದ ಭಾವ ಮಾಡದೇ, ಸಮಾನವಾದ ಶಿಕ್ಷಣವನ್ನು ನೀಡಿ ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡಿ ಎಂದು ಮಾತನಾಡಿದರು.

ಶ್ರೀ ಜ್ಞಾನೇಶ್ವರಿ ಮಹಿಳಾ ಮಂಡಳಿಯ ಅಧ್ಯಕ್ಷೆಯಾದ ಪರಿಮಳ ರಾಜಶೇಖರ ಶೇಟ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅಶ್ವಿನಿ ಶೇಟ್, ಸವಿತಾ ಸಾನು, ಶಕುಂತಲಾ ಶೇಟ್ ಮಾತನಾಡಿದರು. ವೇದಿಕೆ ಮೇಲೆ ವೆಂಕಟೇಶ ಸಂಸ್ಥೆಯ ಅಧ್ಯಕ್ಷ ಸುಧಾಕರ್ ಪಾಂಡುರAಗ ಶೇಟ್ ಮತ್ತು ದೈವಜ್ಞ ಯುವಕ ಮಂಡಳಿಯ ಅಧ್ಯಕ್ಷ ಅಣ್ಣಪ್ಪ ಕೊಗ್ಗ ಶೇಟ್ ಇವರು ಉಪಸ್ಥಿತರಿದ್ದರು. ಪ್ರೇಮಾ ಮಾರುತಿ ಶೇಟ್ ಇವರಿಗೆ ದೈವಜ್ಞಾ ವೀರ ಮಹಿಳೆ ಪ್ರಶಸ್ತಿ ಕೊಟ್ಟು ಗೌರವಿಸಲಾಯಿತು.

ಸೌಮ್ಯ ದಿನೇಶ್ ಶೇಟ್, ಸವಿತಾ ರತ್ನಕರ್ ಶೇಟ್, ದೀಪಾ ಸಂದೀಪ ಕೊಲ್ಲೆ, ಸುಪ್ರಿಯ ಉದಯ ಮಾನಕಾಮೆ, ಸವಿತಾ ರತ್ನಾಕರ್ ಶೇಟ್, ಸುಪ್ರಿಯ ಉದಯ ಮಾನಕಾಮೆ ಕಾರ್ಯಕ್ರಮ ನಿರ್ವಹಿಸಿದರು

error: