
ಭಟ್ಕಳ ತಾಲ್ಲೂಕಿನ ಮಣ್ಕುಳಿಯಲ್ಲಿರುವ ಪುಷ್ಪಾಂಜಲಿ ಚಿತ್ರಮಂದಿರದಲ್ಲಿ “ದ ಕಶ್ಮೀರಿ ಫೈಲ್” ಚಿತ್ರ ಪ್ರದರ್ಶನ ಮಾಡುವಂತೆ ಭಟ್ಕಳದ ಹಿಂದು ಕಾರ್ಯಕರ್ತರು ಚಿತ್ರಮಂದಿರಕ್ಕೆ ಮನವಿ ಸಲ್ಲಿಸಿದರು.

ಮಧ್ಯಾಹ್ನ 2.30 ಕ್ಕೆ ಪ್ರದರ್ಶನಗೊಳ್ಳುತ್ತಿದ್ದ “ರಾಧೆ ಶ್ಯಾಮ್” ಸ್ಥಗಿತಗೊಳಿಸಿ ಹಿಂದೂ ಪಂಡಿತರ ನೈಜ ಚಿತ್ರಕತೆಯನ್ನು ಆಧಾರಿತ ಕಶ್ಮೀರಿ ಫೈಲ್ ಭುವಿಯನ್ನು ಪ್ರದರ್ಶಿಸುವಂತೆ ಹಿಂದೂ ಕಾರ್ಯಕರ್ತರು ಚಿತ್ರಮಂದಿರಕ್ಕೆ ತೆರಲಿ ಮನವಿ ಸಲ್ಲಿಸಿದರು.
ನಂತರ ಹಿಂದೂ ಕಾರ್ಯಕರ್ತರು ಹಾಗೂ ಚಿತ್ರಮಂದಿರದ ಮೇಲ್ವಿಚಾರಕರ ನಡುವೆ ಮಾತುಕತೆ ನಡೆದು ಕೊನೆಗೆ ರಾತ್ರಿ 8.45 ರ ಚಿತ್ರ ಪ್ರದರ್ಶನಕ್ಕೆ “ದ ಕಶ್ಮೀರಿ ಫೈಲ್” ಚಿತ್ರವನ್ನು ಪ್ರದರ್ಶಿಸಲಾಗುವುದೆಂದು ಭರವಸೆಯನ್ನು ನೀಡಿದರು.
ಈ ವೇಳೆ ಮಾತನಾಡಿದ ಮಾಜಿ ಸೈನಿಕ ಶ್ರೀಕಾಂತ ನಾಯ್ಕ ಇತಿಹಾಸದಲ್ಲಿ ಮುಚ್ಚಿಟ್ಟಂತ ಕಶ್ಮೀರಿ ಪಂಡಿತರ ನೈಜ ಚಿತ್ರ ಕತೆ ಆಧಾರಿತ ಚಿತ್ರವನ್ನು ದೇಶ ಭಕ್ತರಿಗೆ ಅನಾವರಣ ಮಾಡಿದ್ದಾರೆ. ಆದರೆ ಕೆಲವೊಂದು ಚಿತ್ರಮಂದಿರದಲ್ಲಿ ಚಿತ್ರ ಪ್ರದರ್ಶನ ನಡೆಸದೆ ಚಿತ್ರ ಮಂದಿರ ಹೌಸ್ ಫುಲ್ ಎಂಬ ಬೋರ್ಡ ಹಾಕುವು ಮೂಲಕ ಷಡ್ಯಂತರ ಮಾಡಲಾಗುತ್ತಿದೆ. ಈ ಹಿನ್ನೆಲೆ ಭಟ್ಕಳದ ಪುಷ್ಪಾಂಜಲಿ ಚಿತ್ರಮಂದಿರದಲ್ಲಿ “ದ ಕಶ್ಮೀರಿ ಫೈಲ್” ಚಿತ್ರ ಪ್ರದರ್ಶನಗೊಳ್ಳದಿದ್ದರೆ ಮುಂದೆ ಆಗುವ ಹೊಣೆಗೆ ಅವರೇ ಹೊಣೆಗಾರಿಕೆ ಆಗುತ್ತಾರೆ ಎಂದರು
ಈ ವೇಳೆ ಹಿಂದೂ ಕಾರ್ಯಕರ್ತರಾದ ಶ್ರೀಕಾಂತ ನಾಯ್ಕ, ಶ್ರೀನಿವಾಸ ಹನುಮಾನಗರ, ರಾಜೇಶ, ಪಾಂಡುರoಗ ನಾಯ್ಕ , ಕೃಷ್ಣ ಕಂಚುಗಾರ, ನಾಗೇಶ ನಾಯ್ಕ ಚೌಥನಿ ದಿನೇಶ ಮೊಗೇರ ಜಾಲಿ, ಮೋಹನ ನಾಯ್ಕ, ಅರುಣ ನಾಯ್ಕ, ವಿವೇಕ ನಾಯ್ಕ ಜಾಲಿ, ಬಾಬು ಕಾರಗದ್ದೆ, ವಸಂತ ಜಂಬೂರ್ ಮಠ ಮುಂತಾದವರು ಉಪಸ್ಥಿತರಿದ್ದರು.

More Stories
ಜನವರಿ 7 ಭಟ್ಕಳ ತಾಲೂಕ 11ನೆ ಸಾಹಿತ್ಯ ಸಮ್ಮೇಳ
ಭಟ್ಕಳ ತಾಲೂಕು ಕಸಾಪದಿಂದ ರಸಪ್ರಶ್ನೆ ಸ್ಪರ್ಧೆ – ಬಹುಮಾನ ವಿತರಣೆ.
ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲಿ ದೀಪದಾನ ಕಾರ್ಯಕ್ರಮ