
ಭಟ್ಕಳ:-ಹಿಜಾಬ ಕುರಿತಾದ ತೀರ್ಪು ಪ್ರಕಟವಾಗುತ್ತಿರುವಂತೆ ಭಟ್ಕಳದ ಕೆಲವು ಮುಸ್ಲಿಂ ಯುವಕರು ಬಲವಂತವಾಗಿ ಒಂದು ಸಮುದಾಯದ ಅಂಗಡಿ ಮುಂಗಟ್ಟುಗಳನ್ನು ಬಂದ ಮಾಡಿಸುವಲ್ಲಿ ನಿರತರಾಗಿದ್ದು ಪೊಲೀಸರು ಆಕ್ಷೇಪ ವ್ಯಕ್ತಡಿಸಿ ಯಾರ ಮೇಲೂ ಒತ್ತಡ ಹೇರದಂತೆ ಮಂಗಳವಾರ ಸಂಜೆ ಎಚ್ಚರಿಸಿದ ಪ್ರಕರಣ ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ನಡೆದಿದೆ.
ಕರ್ನಾಟಕ ಉಚ್ಚ ನ್ಯಾಯಾಲಯ ಮಂಗಳವಾರ ಹಿಜಾಬ್ ಪ್ರಕರಣದಲ್ಲಿ ತೀರ್ಪು ನೀಡುತ್ತಿದ್ದಂತೆಯೇ ಹಿಜಾಬ್ ಪರವಾಗಿರುವವರು ತೀವ್ರ ಆಕ್ರೋಷ ಹೊರ ಹಾಕಿದ್ದಾರೆ. ಭಟ್ಕಳದಲ್ಲಿ ಹಲವು ಮುಸ್ಲಿಂ ಅಂಗಡಿಕಾರರು ಮಧ್ಯಾಹ್ನದ ಸಮಯಕ್ಕೆ ತಮ್ಮ ಅಂಗಡಿಗಳನ್ನು ಮುಚ್ಚಿ ಪ್ರತಿಭಟನೆ ನಡೆಸಿದರೆ ಕೆಲವು ಸಂಘಟನೆಯ ಪ್ರಮುಖರು ಅಂಗಡಿಕಾರರನ್ನು ಬಂದ್ ಮಾಡುವಂತೆ ಒತ್ತಾಯ ಹೇರುತ್ತಿರುವುದು ಕೆಲವು ಕಾಲ ಉದ್ವಿಘ್ನ ವಾತಾವರಣಕ್ಕೆ ಕಾರಣವಾಯಿತು.
ಹಿಜಾಬ್ ತೀರ್ಪು ಹೊರಬೀಳುತ್ತಿದ್ದಂತೆಯೇ ಭಟ್ಕಳದಲ್ಲಿ ಕೆಲವು ಸಂಘಟನೆಗಳು ಅಶಾಂತಿಯನ್ನು ಹುಟ್ಟು ಹಾಕಲು ಪ್ರಯತ್ನಿಸುವುದು ಸ್ಪಷ್ಟವಾಗಿದೆ. ಇಲ್ಲಿನ ತಂಜೀA ಸಂಸ್ಥೆಯು ಮಧ್ಯಾಹ್ನವೇ ಸಭೆಯನ್ನ ನಡೆಸಿ ಯಾವುದೇ ಪ್ರತಿಭಟನೆಯನ್ನು ನಡೆಸದಿರಲು ತೀರ್ಮಾನಿಸಿದ್ದು, ಹಿಜಾಬ್ ತೀರ್ಪಿನಿಂದ ಇಡೀ ಸಮುದಾಯಕ್ಕೆ ನೋವಾಗಿದೆ. ಬುಧವಾರ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಸ್ವಯಂ ಪ್ರೇರಿತರಾಗಿ ಬಂದ್ ಮಾಡುತ್ತಾರೆ ಎನ್ನುವ ನಿರ್ಣಯ ಕೈಗೊಂಡಿತ್ತು ಎನ್ನಲಾಗಿದೆ. ಆದರೆ ಕೆಲವೊಂದು ಸಂಘಟನೆಗಳು ಇಂದೇ ಬಂದ್ ಮಾಡಬೇಕು, ಪ್ರತಿಭಟನೆ ಮಾಡಬೇಕು ಎನ್ನುವ ಧೋರಣೆಯಿಂದ ನಗರದ ಮುಖ್ಯ ರಸ್ತೆಯಲ್ಲಿ ಹಾಗೂ ಚೌಕ್ ಬಜಾರ್, ಹೂವಿನ ಮಾರುಕಟ್ಟೆಯ ಸಮೀಪ ಗುಂಪು ಸೇರಿಕೊಂಡು ಬಂದ್ ಮಾಡಿಸುತ್ತಿರುವುದು ಹಲವರ ಕೆಂಗಣ್ಣಿಗೆ ಕಾರಣವಾಗಿತ್ತು. ಅಷ್ಟರಲ್ಲಿ ಸ್ಥಳಕ್ಕೆ ಧಾವಿಸಿದ ಡಿ.ವೈ.ಎಸ್.ಪಿ. ಬೆಳ್ಳಿಯಪ್ಪ, ಇನ್ಸಪೆಕ್ಟರ್ ದಿವಾಕರ್,ಹಾಗೂ
ಪಿ.ಎಸೈ ಸುಮಾ ಆರ್ಚಯ, ಗುಂಪು ಸೇರಿದ್ದವರನ್ನು ಚದುರಿಸಲು ಮುಂದಾದಾಗ ಹಲವರು ಪೊಲೀಸರೊಂದಿಗೆ ವಾಗ್ವಾದಕ್ಕಿಳಿದರು. ನಂತರ ಪೊಲೀಸರು ಎಲ್ಲರ ಮನವೊಲಿಲು ಯಶಸ್ವೀಯಾಗಿದ್ದು ಹಲವರು ಸ್ವಯಂ ಪ್ರೇರಿತರಾಗಿ ಬಂದ್ ಮಾಡಿದ್ದರೆ ಒತ್ತಾಯ ಪೂರ್ವಕವಾಗಿಇದು ಬಂದ್ ಮಾಡಿಸಲು ಬಂದವರು ಹಿಂತಿರುಗಿದ ಘಟನೆಯು ಕೂಡಾ ನಡೆಯಿತು.

More Stories
ಜನವರಿ 7 ಭಟ್ಕಳ ತಾಲೂಕ 11ನೆ ಸಾಹಿತ್ಯ ಸಮ್ಮೇಳ
ಭಟ್ಕಳ ತಾಲೂಕು ಕಸಾಪದಿಂದ ರಸಪ್ರಶ್ನೆ ಸ್ಪರ್ಧೆ – ಬಹುಮಾನ ವಿತರಣೆ.
ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲಿ ದೀಪದಾನ ಕಾರ್ಯಕ್ರಮ