March 13, 2025

Bhavana Tv

Its Your Channel

ಉಚ್ಚ ನ್ಯಾಯಾಲಯ ನೀಡಿದ ಹಿಜಾಬ್ ಕುರಿತ ತೀರ್ಪು ಸಂಪೂರ್ಣ ನಮ್ಮ ಇಸ್ಲಾಮ್‌ಗೆ ವಿರುದ್ಧವಾಗಿದೆ; ಭಟ್ಕಳ ಮಜ್ಲಿಸೆ ಇಸ್ಲಾ-ವ-ತಂಜೀo ಸಂಸ್ಥೆ ಹೇಳಿಕೆ

ಭಟ್ಕಳ: ಉಚ್ಚ ನ್ಯಾಯಾಲಯ ನೀಡಿದ ಹಿಜಾಬ್ ಕುರಿತ ತೀರ್ಪು ಸಂಪೂರ್ಣ ನಮ್ಮ ಇಸ್ಲಾಮ್‌ಗೆ ವಿರುದ್ಧವಾಗಿದ್ದು ಇದರಿಂದ ತಮಗೆ ಬಹಳ ನೋವಾಗಿದೆ ಎಂದು ಭಟ್ಕಳದ ಮಜ್ಲಿಸೆ ಇಸ್ಲಾ-ವ-ತಂಜೀA ಸಂಸ್ಥೆ ಹೇಳಿದೆ.

ನಗರದ ತಂಜೀA ಸಂಸ್ಥೆಯ ಕಚೇರಿಯಲ್ಲಿ ಪತ್ರಿಕಾ ಗೋಷ್ಟಿಯನ್ನು ನಡೆಸಿದ ತಂಜೀA ಪ್ರಮುಖರಲ್ಲಿ ಮಾತನಾಡಿದ ನ್ಯಾಯವಾದಿ ಇಮ್ರಾನ್ ಲಂಕಾ ಈ ಕುರಿತು ಮುಂದಿನ ನಡೆಯನ್ನು ನಿರ್ಧಾರ ಮಾಡಲಾಗುತ್ತದೆ, ಸರ್ವೋಚ್ಚ ನ್ಯಾಯಾಲಯ ಹಾಗೂ ಮುಸ್ಲಿಂ ಪರ್ಸನಲ್ ಲಾ ಬೋರ್ಡಿನಲ್ಲಿ ಪ್ರಶ್ನಿಸಲಾಗುತ್ತದೆ ಎಂದರು. ಹಿಜಾಬ್ ಕುರಿತು ನ್ಯಾಯಾಲಯದ ಬಾಗಿಲು ತಟ್ಟಿದ ಎಲ್ಲಾ ವಿದ್ಯಾರ್ಥಿನಿಯರಿಗೆ ಅಗತ್ಯ ಬೆಂಬಲ ಕೊಡುವುದರೊಂದಿಗೆ ಅವರಿಗೆ ನೈತಿಕ ಸ್ಥೆರ್ಯ ತುಂಬುತ್ತೇವೆ ಎಂದು ಹೇಳಿದರು. ನ್ಯಾಯಾಲಯದಲ್ಲಿ ಅರ್ಜಿದಾರರ ಪರವಾಗಿ ಹಿರಿಯ ನ್ಯಾಯವಾದಿಗಳು ಮಾಡಿದ ವಾದ ಹಾಜರುಪಡಿಸಿದ ದಾಖಲೆಗಳು ಯಾವುವೂ ಕೂಡಾ ಗಣನೆಗೆ ತೆಗೆದುಕೊಂಡಿಲ್ಲ. ಅದನ್ನು ನ್ಯಾಯಾಲಯ ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ ಎನಿಸುತ್ತಿದೆ. ಈ ತೀರ್ಪು ಪ್ರಧಾನಿಯವರ ಬೇಟಿ ಬಚಾವ್ ಬೇಟಿ ಪಡಾವ್ ಘೋಷಣೆಗೆ ವಿರುದ್ಧವಾಗಿದೆ ಎಂದೂ ಅವರು ಹೇಳಿದರು.
ಇಸ್ಲಾಂ ಧರ್ಮದಲ್ಲಿ ಹಿಜಾಬ್ ಕಡ್ಡಾಯಗೊಳಿಸಿಲ್ಲ ಎನ್ನುವ ತೀರ್ಪಿನ ವಾಕ್ಯದ ಕುರಿತು ಮಾತನಾಡಿದ ಜಾಮಿಯಾ ಮಸೀದಿಯ ಮುಖ್ಯ ಧರ್ಮಗುರು ಮೌಲಾನಾ ಅಬ್ದುಲ್ ಅಲೀಮ್ ಖತೀಬಿ ಮಾತನಾಡಿ ಇಸ್ಲಾಮ್ ಧರ್ಮದಲ್ಲಿ ಯಾವುದು ಕಡ್ಡಾಯವಾಗಿದೆ, ಯಾವುದು ಕಡ್ಡಾಯವಾಗಿಲ್ಲ ಎಂದು ಇಸ್ಲಾಮಿಕ್ ವಿಧ್ವಾಂಸರು ಮಾತ್ರ ಹೇಳ ಬಲ್ಲರು. ಇಸ್ಲಾಂ ಕುರಿತು ಯಾವುದೇ ಅಧ್ಯಯನ ಮಾಡದೇ, ಅದರಲ್ಲಿ ಆಳವಾಗಿ ಹೋಗದೇ ಯಾವುದು ಇಲ್ಲ, ಯಾವುದು ಇದೆ ಎಂದು ಹೇಳಲು ಅಸಾಧ್ಯವಾಗುತ್ತದೆ ಎಂದ ಅವರು ಕುರಾನ್ ಮುತ್ತು ಹದೀಸ್ ಎರಡರಲ್ಲಿಯೂ ಕೂಡಾ ಮಹಿಳೆಯು ಮನೆಯಿಂದ ಹೊರಕ್ಕೆ ಹೋಗುವಾಗ ಕಡ್ಡಾಯವಾಗಿ ಹಿಜಾಬ್ ಧರಿಸುವಂತೆ ಹೇಳಿದೆ. ಕುರಾನ್ ಮತ್ತು ಹದೀಸ್ ಕುರಿತು ಆಳವಾದ ಅಧ್ಯಯನದಿಂದ ಮಾತ್ರ ಇದನ್ನು ಹೇಳಲು ಸಾಧ್ಯವೇ ವಿನಹ ಬೇರೆಯವರಿಗೆ ಹೇಗೆ ಹೇಳಲು ಸಾಧ್ಯ ಎಂದೂ ಅವರು ಪ್ರಶ್ನಿಸಿದರು.
ಈ ಸಂದರ್ಭದಲ್ಲಿ ತಂಜೀA ಅಧ್ಯಕ್ಷ ಎಸ್. ಎಂ. ಪರ್ವೇಜ್, ಪ್ರಧಾನ ಕಾರ್ಯದರ್ಶಿ ಅಬ್ದುರ್ ರಖೀಬ್, ಮಾಧ್ಯಮ ಸಂಹನಗಾರ ಡಾ. ಹನೀಫ್ ಶಬಾಬ್, ಮೌಲಾನಾ ಅಜೀಜುರೆಹಮಾನ್ ನದ್ವಿ ಮುಂತಾದವರು ಉಪಸ್ಥಿತರಿದ್ದರು.

error: