March 12, 2025

Bhavana Tv

Its Your Channel

ಭಟ್ಕಳ ಜಾಲಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಕಾರಗದ್ದೆಯಲ್ಲಿ ಮಂಗನ ಕಾಟ

ಭಟ್ಕಳ ತಾಲೂಕಿನ ಜಾಲಿ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿನ ಕಾರಗದ್ದೆಯಲ್ಲಿ ಮಂಗವೊAದು ಒಂದೇ ದಿನದಲ್ಲಿ ಮೂವರಿಗೆ ಕಚ್ಚಿ ಗಾಯಗೊಳಿಸಿರುವ ಘಟನೆ ಗ್ರಾಮಸ್ಥರಲ್ಲಿ ತೀವ್ರ ಆತಂಕವನ್ನುAಟು ಮಾಡಿದೆ.

ಮಂಗನ ಹಾವಳಿಯಿಂದ ಮಹಿಳೆಯರು, ಮಕ್ಕಳು, ಮೊಟಾರ್ ಸೈಕಲ್ ಸವಾರರು ರಸ್ತೆಯಲ್ಲಿ ತಿರುಗಾಡುವುದೇ ಕಷ್ಟ ಎನ್ನುವ ಪರಸ್ಥಿತಿ ಬಂದಿದೆ. ಬುಧವಾರ ಮುಗ್ದಂ ಕಾಲೋನಿಯ ಉಮ್ಮರ್ ಬಿಲಾಲ್ ಎನ್ನುವವರು ತಮ್ಮ ಇಬ್ಬರು ಮಕ್ಕಳೊಂದಿಗೆ ಬೈಕಿನಲ್ಲಿ ಕಾರಗದ್ದೆಗೆ ಹೋಗುತ್ತಿರುವ ಸಂದರ್ಭದಲ್ಲಿ ಮಂಗ ದಾಳಿ ಮಾಡಿ ಕಚ್ಚಿ ಇವರಿಗೆ ಬೆನ್ನಿನ ಭಾಗಕ್ಕೆ ಗಾಯಗಳಾಗಿವೆ. ತಕ್ಷಣ ಇವರನ್ನು ಸರಕಾರಿ ಆಸ್ಪತ್ರೆಗೆ ಒಯ್ದು ಸೂಕ್ತ ಚಿಕಿತ್ಸೆ ನೀಡಲಾಯಿತು. ಇದೇ ರೀತಿ ಮಂಗಳವಾರ ರಾತ್ರಿಯೂ ಕೂಡಾ ಕಾರಗದ್ದೆ ಸಮೀಪ ಹುರುಳಿಸಾಲಿನ ಮಂಗಳಿ ಗೊಂಡ ಎನ್ನುವ 72 ವರ್ಷ ವೃದ್ಧೆಗೆ ಮತ್ತು ಕಳೆದೆರಡು ದಿನಗಳ ಹಿಂದೆ ತಿಮ್ಮಪ್ಪ ಗೊಂಡ ಎನ್ನುವವರಿಗೂ ಕಚ್ಚಿ ಗಾಯಗೊಳಿಸಿದ ಕುರಿತು ಗ್ರಾಮಸ್ಥರು ಹೇಳುತ್ತಿದ್ದು ತೀವ್ರ ಆತಂಕವಾಗುತ್ತಿದೆ ಎಂದು ದೂರಿದ್ದಾರೆ. ಕಾರಗದ್ದೆಯಲ್ಲಿ ದಿನದಿಂದ ದಿನಕ್ಕೆ ಮಂಗನ ಆಟಾಟೋಪ ಹೆಚ್ಚಾಗುತ್ತಿದ್ದು ಇದು ಜನರ ಮೇಲೆ ದಾಳಿ ಮಾಡುತ್ತಿರುವುದರಿಂದ ಅರಣ್ಯ ಇಲಾಖೆ ತಕ್ಷಣ ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ವ್ಯಕ್ತವಾಗಿದೆ.

ಶರತ್ ಶೆಟ್ಟಿ, ವಲಯ ಅರಣ್ಯಾಧಿಕಾರಿ ಮಾತನಾಡಿ ಕಾರಗದ್ದೆಯಲ್ಲಿನ ಮಂಗ ಜನರಿಗೆ ತೊಂದರೆ ಕೊಡುತ್ತಿರುವ ಕುರಿತು ತಿಳಿಸಿದ್ದಾರೆ. ಮಂಗನನ್ನು ಹಿಡಿಯಲು ಕ್ರಮ ಕೈಗೊಳ್ಳಲಾಗುವುದು

error: