March 12, 2025

Bhavana Tv

Its Your Channel

ಉತ್ತರ ಕನ್ನಡ ಜಿಲ್ಲಾ ನೈಜ ಪರಿಶಿಷ್ಟ ಜಾತಿ ಪಂಗಡಗಳ ಸಾಂವಿಧಾನಿಕ ಹಕ್ಕುಗಳ ರಕ್ಷಣಾ ಒಕ್ಕೂಟದಿಂದ ಉಪವಿಭಾಗಾಧಿಕಾರಿಗಳಿಗೆ ಮನವಿ

ಉತ್ತರ ಕನ್ನಡ ಜಿಲ್ಲಾ ನೈಜ ಪರಿಶಿಷ್ಟ ಜಾತಿ ಪಂಗಡಗಳ ಸಾಂವಿಧಾನಿಕ ಹಕ್ಕುಗಳ ರಕ್ಷಣಾ ಒಕ್ಕೂಟದಿಂದ ಉಪವಿಭಾಗಾಧಿಕಾರಿ ಮಮತಾ ದೇವಿ ಅವರಿಗೆ ಮನವಿ ನೀಡಿದರು.

ಭಟ್ಕಳ: ಉತ್ತರ ಕನ್ನಡ ಜಿಲ್ಲಾ ನೈಜ ಪರಿಶಿಷ್ಟ ಜಾತಿ ಪಂಗಡಗಳ ಸಾಂವಿಧಾನಿಕ ಹಕ್ಕುಗಳ ರಕ್ಷಣಾ ಒಕ್ಕೂಟದಿಂದ ಉಪವಿಭಾಗಾಧಿಕಾರಿ ಮಮತಾ ದೇವಿ ಅವರಿಗೆ ಮನವಿ ನೀಡಿ ಮಾತನಾಡಿದ ದಲಿತ ಮುಖಂಡ ತುಳಿಸಿದಾಸ ಪಾವಸ್ಕರ 1976ರ ಪ್ರಾದೇಶಿಕ ನಿರ್ಭಂದ ತೆಗೆದು ಹಾಕಿದ ನಂತರ ಪರಿಶಿಷ್ಟ ಜಾತಿ ಯಾದಿಗೆ ಯಾವುದೇ ಹೊಸ ಜಾತಿ ಸೇರ್ಪಡೆ ಮಾಡಿಲ್ಲ. ಇದರ ದುರ್ಲಾಭ ಪಡೆದ ಕೆಲವು ಸಮಾನ ಜಾತಿ ಸೂಚಕ ಹೆಸರಿನ ಜಾತಿಯವರು ರಾಜಕೀಯ ಮತ್ತು ಹಣದ ಬಲದಿಂದ ಸಕ್ಷಮ ಪ್ರಾಧಿಕಾರಕ್ಕೆ ತಪ್ಪು ಮಾಹಿತಿಯನ್ನು ನೀಡಿ ನಕಲಿ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆದು ಸಂವಿಧಾನದ ಪರಿಚ್ಛೇದ 341 ರ ಅಡಿಯಲ್ಲಿ ನೈಜ ಪರಿಶಿಷ್ಟರಿಗೆ ಸಿಗಬೇಕಾದ ಮೀಸಲಾತಿಯ ಹಗಲು ದರೋಡೆ ಮಾಡುತ್ತಿದ್ದಾರೆ. ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡುವ ಹಕ್ಕು ಕೇಂದ್ರ ಸಂಸತ್ತು ಅಧಿವೇಶನಕ್ಕೆ ಮಾತ್ರ ಸಾಧ್ಯ ಇದೆ. ಮೊಗೇರ ಸಮುದಾಯ ಸಮಾಜದಲ್ಲಿ ಅಸ್ಪಶತೆಗೆ, ಶೊಷಣೆಗೆ ದೌರ್ಜನ್ಯಕ್ಕೆ ಒಳಗಾಗಿಲ್ಲ. ಅವರಿಗೆ ಈಗಾಗಲೇ ಪ್ರವರ್ಗ -1ರ ಅಡಿಯಲ್ಲಿ ಜಾತಿ ಪ್ರಮಾಣ ಪತ್ರ ನೀಡಲಾಗಿದೆ. ರಾಜ್ಯ ಹೈಕೋರ್ಟ, ಉಚ್ಚ ನ್ಯಾಯಾಲಯ ಪರಿಶಿಷ್ಟ ಜಾತಿ ಕ್ರಮ ಸಂಖ್ಯೆ 78ರಲ್ಲಿ ಬರುವ ಮೊಗೇರ ಅವರಿಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡಬೇಕು ಎಂದು ಆದೇಶಿಸಿದೆ. ಆದರೆ ಭಟ್ಕಳ ಮೊಗೇರರು ಬೆಸ್ತರಾಗಿದ್ದು ಕೆಳಜಾತಿಯಲ್ಲಿ ಬರುವುದಿಲ್ಲ ಎಂದರು. ಒಂದೊಮ್ಮೆ ನ್ಯಾಯಂಗ ನಿಂದನೆ ಮಾಡಿ ಅಧಿಕಾರಿಗಳು ಪ್ರಮಾಣ ಪತ್ರ ನೀಡದೇ ಇದ್ದರೆ ಅವರು ಅಧಿಕಾರಿಗಳ ವಿರುದ್ದ ನ್ಯಾಯಾಲಯದಲ್ಲಿ ಏಕೆ ದಾವೆ ಹೂಡುತ್ತೀಲ್ಲ ಎಂದರು.
ಕಳೆದ 12 ವರ್ಷಗಳಿಂದ ಎಸ್ಸಿ ಪ್ರಮಾಣ ನಿಲ್ಲಿಸಿದ್ದರೂ ಸಹ ಹಳೆಯ ಪ್ರಮಾಣ ಪತ್ರವನ್ನೇ ಇಟ್ಟುಕೊಂಡು ಸ್ಥಳೀಯ ಸಂಸ್ಥೆಗಳ ಚುನಾವಣೆ, ಸಹಕಾರಿ ಸಂಘಗಳ ಚುನಾವಣೆಗಳಿಗೆ ಸ್ಪರ್ಧಿಸಿ ನೈಜ ಪರಿಶಿಷ್ಟರ ಮೇಲೆ ದೌರ್ಜನ್ಯವಾಗುತ್ತಿದ್ದು ಇದನ್ನು ಸಹ ತಡೆಯಬೇಕು ಎಂದೂ ಆಗ್ರಹಿಸಿದ್ದಾರೆ.
ಇದಕ್ಕೂ ಮೊದಲು ನಗರದ ದಂಡಿನ ದುರ್ಗಾದೇವಿ ದೇವಸ್ಥಾನದಿಂದ ಮೆರವಣಿಗೆಯಲ್ಲಿ ಬಂದು ಸಹಾಯಕ ಆಯುಕ್ತರ ಕಚೇರಿಯಲ್ಲಿ ಸೇರಿ ಮನವಿಯನ್ನು ನೀಡಿದರು.
ಮನವಿಯನ್ನು ಸ್ವೀಕರಿಸಿದ ಸಹಾಯಕ ಆಯುಕ್ತೆ ಮಮತಾದೇವಿ ಜಿ.ಎಸ್. ಅವರು ತಮ್ಮಲ್ಲಿರುವ ದಾಖಲೆಗಳನ್ನು ವರ್ಷವಾರು ರೀತಿಯಲ್ಲಿ ನೀಡಿ ಅವುಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತುಳಸೀದಾಸ ಪಾವಸ್ಕರ್, ನಾರಾಯಣ ಶಿರೂರು, ಎನ್. ಆರ್. ಮುಕ್ರಿ, ಅಶೋಕ ಹಸ್ಲರ್, ಕಿರಣ್ ಶಿರೂರು, ಮಾದೇವ ಬಾಕಡ್, ವೆಂಕಟೇಶ ಹಳ್ಳೇರ, ಗಣೇಶ ಹಳ್ಳೇರ ಸೇರಿದಂತೆ ಮಹಿಳೆಯರು, ಮಕ್ಕಳು ಇದ್ದರು.

error: