
ಭಟ್ಕಳ : ಪರಿಶಿಷ್ಟ ಜಾತಿ ಸೌಲಭ್ಯಕ್ಕೆ ಸಂಬಧಿಸಿದAತೆ ಮೊಗೇರ ಹಾಗೂ ದಲಿತ ಸಮುದಾಯವರು ಗುರುವಾರ ಏಕಕಾಲದಲ್ಲಿ ನಡೆಸಿದ ಪ್ರತಿಭಟನೆ ಒಂದು ಹಂತದಲ್ಲಿ ಭಟ್ಕಳದಲ್ಲಿ ಬಿಗುವಿನ ವಾತಾವರಣ ಎರ್ಪಟ್ಟು ಮೊಗೇರ ಸಮುದಾಯವರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.
ಕಳೆದ ಮಾ.23ರಿಂದ ತಹಸೀಲ್ದಾರ್ ಕಚೇರಿಯ ಪಕ್ಕದಲ್ಲಿ ಪರಿಶಿಷ್ಟ ಜಾತಿ ಪ್ರಮಾಣ ಪತ್ರಕ್ಕಾಗಿ ತಾವು ಧರಣಿ ಸತ್ಯಾಗ್ರಹ ನಡೆಸುತ್ತಿರುವಾಗ ಇನ್ನೊಂದು ಸಂಘಟನೆಗೆ ಪ್ರತಿಭಟನೆ ನಡೆಸಿ ಮನವಿ ಪತ್ರ ಸಲ್ಲಿಸಲು ಅವಕಾಶ ಕೊಟ್ಟಿರುವುದನ್ನು ಮೊಗೇರ ಸಮಾಜದ ಯುವಕರು ತೀವ್ರವಾಗಿ ಖಂಡಿಸಿದರು.
ತಾಲೂಕಾ ಆಡಳಿತ ಸೌಧದ ಗೇಟಿನ ಬಳಿಯಲ್ಲಿ ಪೊಲೀಸರಿಗೂ ಹಾಗೂ ಯುವಕರಿಗೂ ತೀವ್ರ ವಾಗ್ವಾದ ನಡೆಯಿತು. ತಾವೂ ಕೂಡಾ ತಹಸೀಲ್ದಾರ್ ಕಚೇರಿ ಆವರಣಕ್ಕೆ ಬರುವುದಾಗಿ ಯುವಕರು ಘೋಷಣೆಗಳನ್ನು ಕೂಗಿದರು. ಒಂದು ಹಂತದಲ್ಲಿ ಪೊಲೀಸರು ಕಂಗಾಲಾಗಿದ್ದು ನಿಯಂತ್ರಿಸುವುದೇ ಕಷ್ಟಕರವಾಗಿತ್ತು.
ಉತ್ತರ ಕನ್ನಡ ಜಿಲ್ಲಾ ನೈಜ ಪರಿಶಿಷ್ಟ ಜಾತಿ/ಪಂಗಡಗಳ ಸಾಂವಿಧಾನಿಕ ಹಕ್ಕುಗಳ ರಕ್ಷಣಾ ಒಕ್ಕೂಟದ ಸದಸ್ಯರು ಮೆರವಣಿಗೆಯಲ್ಲಿ ಘೋಷಣೆ ಕೂಗುತ್ತಾ ಡೋಲುಗಳೊಂದಿಗೆ ತಾಲೂಕಾ ಆಡಳಿತ ಸೌಧದಕ್ಕೆ ಬರುತ್ತಿದ್ದಂತೆಯೇ ಪ್ರತಿಭಟನಾಕಾರರ ಆಕ್ರೋಶ ಮಿತಿ ಮೀರಿದ್ದು ಪರಿಸ್ಥಿತಿ ವಿಕೋಪಕ್ಕೆ ಹೋಗುವುದನ್ನು ಅರಿತ ಪೊಲೀಸರು ಬಿಗು ಬಂದೋಬಸ್ತ ಏರ್ಪಡಿಸಿದರು.
ಈ ಸಂದರ್ಭದಲ್ಲಿ ಆಕ್ರೋಶ ವ್ಯಕ್ತಪಡಿಸಿದ ಮೊಗೇರ ಸಮಾಜದ ಕೆಲ ಯುವಕರು ನಾವು ಶಾಂತಯುತವಾಗಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದೇವೆ. ನಮ್ಮ ಧರಣಿಯಿಂದ ಯಾರಿಗೂ ತೊಂದರೆಯಾಗಿಲ್ಲ. ನಮ್ಮ ಧರಣಿ ಸಂದರ್ಭದಲ್ಲೇ ಬೇರೆಯವರಿಗೆ ಮೆರವಣಿಗೆಯಲ್ಲಿ ಡೋಲು ಬಾರಿಸಿ, ನೃತ್ಯ ಮಾಡಿಕೊಂಡು ಹೋಗಲು ಅವಕಾಶ ಕಲ್ಪಿಸಿರುವುದು ಸರಿಯಲ್ಲ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರಲ್ಲದೇ ಪೊಲೀಸರೊಂದಿಗೆ ತೀವ್ರ ವಾಗ್ವಾದ ನಡೆಸಿ ಗೇಟು ತೆಗೆಯುವಂತೆ ಪಟ್ಟುಹಿಡಿದರು. ಗೇಟು ತೆಗೆಯಲು ಅವಕಾಶ ಕೊಡದ ಪೊಲೀಸರು ಆಕ್ರೋಶಿತ ಯುವಕರಿಗೆ ತಾಲೂಕಾ ಆಡಳಿತ ಸೌಧದ ಕಂಪೌAಡ್ ಒಳಗಡೆ ಪ್ರವೇಶಕ್ಕೆ ಅವಕಾಶ ಕೊಡಲಿಲ್ಲ. ಜಿಲ್ಲಾ ನೈಜ ಪರಿಶಿಷಷ್ಟ ಜಾತಿ ಪಂಗಡಗಳ ಸಾಂವಿಧಾನಿಕ ಹಕ್ಕುಳ ರಕ್ಷಣಾ ಒಕ್ಕೂಟದವರು ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿ ಹೊರ ಹೋಗುವವರೆಗೂ ಬಿಗು ಪೊಲೀಸ್ ಬಂದೋಬಸ್ತ ಏರ್ಪಡಿಸಲಾಗಿತ್ತು. ನಂತರ ವಿಕೋಪಕ್ಕೆ ಹೋಗುವ ಹಂತದಲ್ಲಿದ್ದ ಪರಿಸ್ಥಿತಿ ತಿಳಿಯಾದ್ದರಿಂದ ಯಾವುದೇ ಅಹಿತಕರ ಘಟನೆಗೆ ಅವಕಾಶ ಆಗಲಿಲ್ಲ. ಸಮಾಜದ ಮುಖಂಡರು, ಪೊಲೀಸರು ಆಕ್ರೋಶಿತ ಯುವಕರನ್ನು ಸಮಾಧಾನಿಸಿದರು.
ಡಿ.ವೈ.ಎಸ್.ಪಿ. ಕೆ.ಯು. ಬೆಳ್ಳಿಯಪ್ಪ, ಇನ್ಸಪೆಕ್ಟರ್ ದಿವಾಕರ, ಸಬ್ ಇನ್ಸಪೆಕ್ಟರ್ ಸುಮಾ ಬಿ.ಹೆಚ್. ಬಿ. ಪಿ ಎಸ್ ಐ ಕುಡಗುಂಟಿ, ಗೋಕರ್ಣ ಪಿ.ಎಸ್ ಐ ಪಿ.ಎಸ್.ಐ. ರವೀಂದ್ರ ಬೀರಾದಾರ,ಹೊನ್ನಾವರ ಪಿ ಎಸ್ ಐ ಆನಂದಮೂರ್ತಿ ಸೇರಿದಂತೆ ಹೊರಗಿನಿಂದ ಬಂದಿದ್ದ ಇನ್ಸಪೆಕ್ಟರ್‌ಗಳು, ಸಬ್ ಇನ್ಸಪೆಕ್ಟರ್‌ಗಳು ಬಂದೋಬಸ್ತ ಕಾರ್ಯ ವಹಿಸಿದ್ದರು.

More Stories
ಜನವರಿ 7 ಭಟ್ಕಳ ತಾಲೂಕ 11ನೆ ಸಾಹಿತ್ಯ ಸಮ್ಮೇಳ
ಭಟ್ಕಳ ತಾಲೂಕು ಕಸಾಪದಿಂದ ರಸಪ್ರಶ್ನೆ ಸ್ಪರ್ಧೆ – ಬಹುಮಾನ ವಿತರಣೆ.
ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲಿ ದೀಪದಾನ ಕಾರ್ಯಕ್ರಮ