March 12, 2025

Bhavana Tv

Its Your Channel

17 ವರ್ಷ ಸೇವೆ ಸಲ್ಲಿಸಿ ಮರಳಿದ ಯೋಧನಿಗೆ ಹುಟ್ಟೂರಲ್ಲಿ ಸ್ವಾಗತ

ಭಟ್ಕಳ: ಭಾರತೀಯ ಸೇನೆಯಲ್ಲಿ ೧೭ ವರ್ಷ ಸೇವೆ ಸಲ್ಲಿಸಿ ನಿವೃತ್ತಿ ಪಡೆದು ವಾಪಸ್ಸಾದ ಭಟ್ಕಳ ಬೆಂಗ್ರೆ ಸೋಮಯ್ಯನಮನೆ ನಿವಾಸಿ ರಾಜೇಶ ಸುಕ್ರಯ್ಯ ದೇವಡಿಗ (೩೮) ಅವರನ್ನು ಭಟ್ಕಳ ರೇಲ್ವೆ ನಿಲ್ದಾಣದಲ್ಲಿ ಕುಟುಂಬದ ಸದಸ್ಯರು ಹಾಗೂ ಗ್ರಾಮಸ್ಥರು ಬರಮಾಡಿಕೊಂಡರು.

ರಾಜೇಶ ದೇವಡಿಗ ೨೦೦೫ರಲ್ಲಿ ಸೈನ್ಯಕ್ಕೆ ಸೇರ್ಪಡೆಗೊಂಡು, ಮಹಾರಾಷ್ಟ್ರಉತ್ತರಪ್ರದೇಶ,
ಹಿಮಾಚಲ ಪ್ರದೇಶ, ಜಮ್ಮುಕಾಶ್ಮೀರ, ಪಂಜಾಬ್, ರಾಜಸ್ಥಾನರಾಜ್ಯಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಸೇವಾ ನಿವೃತ್ತಿ ಪಡೆದು ಆಗಮಿಸಿದ ರಾಜೇಶರನ್ನು ಸ್ವಾಗತಿಸಲು ತಾಯಿ ಕಾವೇರಿ ದೇವಡಿಗ, ತಾಪಂ ಮಾಜಿ
ಸದಸ್ಯ ವಿಷ್ಣು ದೇವಡಿಗ, ಊರಿನ ನಾಗರಿಕರು ಉಪಸ್ಥಿತರಿದ್ದರು..

error: