March 12, 2025

Bhavana Tv

Its Your Channel

ಕಳೆದ 12 ದಿನಗಳಿಂದ ಧರಣಿ ನಡೆಸುತ್ತಿರುವ ಮೊಗೇರರಿಗೆ ಸದ್ಯದಲ್ಲಿಯೇ ನ್ಯಾಯ ಸಿಗುವ ವಿಶ್ವಾಸ ಇದೆ- ಸದಸ್ಯ ಗಣಪತಿ ಉಳ್ವೇಕರ್

ಟ್ಕಳ: ಪರಿಶಿಷ್ಟ ಜಾತಿ ಸ್ಥಾನ, ಮಾನಕ್ಕೆ ಆಗ್ರಹಿಸಿ ಕಳೆದ 12 ದಿನಗಳಿಂದ ಧರಣಿ ನಡೆಸುತ್ತಿರುವ ಮೀನುಗಾರರಿಗೆ ಸದ್ಯದಲ್ಲಿಯೇ ನ್ಯಾಯ ಸಿಗುವ ವಿಶ್ವಾಸ ಇದೆ ಎಂದು ವಿಧಾನಪರಿಷತ್ ಸದಸ್ಯ ಗಣಪತಿ ಉಳ್ವೇಕರ್ ಹೇಳಿದ್ದಾರೆ. ಅವರು ಧರಣಿ ಸ್ಥಳಕ್ಕೆ ಆಗಮಿಸಿ ಮೊಗೇರರನ್ನು ಉದ್ದೇಶಿಸಿ ಮಾತನಾಡಿದರು. ಮೊಗೇರರ ಹೋರಾಟ ನ್ಯಾಯೋಚಿತವಾಗಿದ್ದು, ಮೊಗೇರರ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಸಚಿವರು ಪ್ರಯತ್ನ ಮುಂದುವರೆಸಿದ್ದಾರೆ. ಸರಕಾರದ ಕ್ರಮದೊಂದಿಗೆ ಧರಣಿ ಕೆಲವೇ ದಿನಗಳಲ್ಲಿ ಮುಕ್ತಾಯ ಕಾಣಲಿದೆ. ಮೊಗೇರರ ಪ್ರತಿ ಹ0ತದ ಹೋರಾಟದಲ್ಲಿಯೂ ಜೊತೆಗೆ ನಿಲ್ಲುತ್ತೇನೆ ಎಂದು ಅವರು ಭರವಸೆ ನೀಡಿದರು.
ಮೀನುಗಾರ ಮುಖಂಡ ಗಣಪತಿ ಮಾಂಗ್ರೆ ಮಾತನಾಡಿ, ಮೊಗೇರರು ನಡೆಸುತ್ತಿರುವ ಹೋರಾಟ ಅವರ ಬದುಕಿಗಾಗಿ ನಡೆಸುತ್ತಿರುವ ಹೋರಾಟವಾಗಿದೆ. ಪರಿಶಿಷ್ಟ ಜಾತಿ, ಪಂಗಡ ಪ್ರಮಾಣ ಪತ್ರಕ್ಕಾಗಿ ಕ್ಷೇತ್ರ ನಿರ್ಬಂಧ ತೆಗೆದು ಹಾಕಿದ ನಂತರ ಅಂದಿನ ಶಾಸಕ ಎಸ್.ಎಮ್. ಯಾಹ್ಯಾ, ಅಂದಿನ ಮುಖ್ಯಮಂತ್ರಿ ದೇವರಾಜ ಅರಸು ಕೃಪೆಯಿಂದ ಇಲ್ಲಿನ ಮೊಗೇರರು ಪರಿಶಿಷ್ಟ ಜಾತಿ ಪ್ರಮಾಣ ಪತ್ರವನ್ನು ಪಡೆದು ಶೈಕ್ಷಣಿಕವಾಗಿ ಪ್ರಗತಿಯನ್ನು ಸಾಧಿಸಿದ್ದಾರೆ. ಈಗ ಸರಕಾರ ಇವರ ಕೂಗಿಗೆ ಸ್ಪಂದಿಸುವ ವಿಶ್ವಾಸ ಇದೆ. ಎಂದರು. ಮೊಗೇರ ಮುಖಂಡ ಎಫ್.ಕೆ.ಮೊಗೇರ, ಮೊಗೇರ ಉಪಸ್ಥಿತರಿದ್ದರು.
ಸಮುದಾಯ ನಡೆಸಿಕೊಂಡು ಬಂದಿರುವ ಧರಣಿ, ಹೋರಾಟದ ಬಗ್ಗೆ ವಿವರಿಸಿದರು. ಮಾಜಿ ಶಾಸಕ ಮಂಕಾಳು ವೈದ್ಯ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೋವಿಂದ ನಾಯ್ಕ, ಭಟ್ಕಳ ಬಿಜೆಪಿ ಅಧ್ಯಕ್ಷ ಸುಬ್ರಾಯ ದೇವಡಿಗ, ಬಿಜೆಪಿ ಮೀನುಗಾರಿಕೆ ವಿಭಾಗ ಪ್ರಕೋಷ್ಠದ ಸಂಚಾಲಕ ಹೂವಾ ಕಂಡೇಕರ್, ಮೋಹನ ನಾಯ್ಕ ಸರ್ಪನಕಟ್ಟೆ, ಭಾಸ್ಕರ ದೈಮನೆ, ಕುಮಾರ ಹೆಬಳೆ, ಶ್ರೀಕಾಂತ ನಾಯ್ಕ, ಮೊಗೇರ ಸಮಾಜದ ಮುಖಂಡಾದ ಕೆ.ಎಮ್.ಕರ್ಕಿ, ಭಾಸ್ಕರ ಮೊಗೇರ, ರಾಮಾ ಮೊಗೇರ, ಪುಂಡಲೀಕ ಹೆಬಳೆ, ಯಾದವ ಮೊಗೇರ, ದಿವಾಕರ ಮೊಗೇರ ಮೊದಲಾದವರು ಉಪಸ್ಥಿತರಿದ್ದರು

error: