March 12, 2025

Bhavana Tv

Its Your Channel

ಭಗವದ್ಗೀತಾ ಕಂಠಪಾಠ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭ

ಟ್ಕಳ :-* ಮಹಾಭಾರತದ ಕಥೆಯಲ್ಲಿ ಪಾಂಡವರು ಕೇಳಿದ 5 ಗ್ರಾಮಗಳನ್ನು ಕೊಡದೆ ದ್ರೌಪದಿಯನ್ನು ತುಂಬಿದ ಸಭೆಯಲ್ಲಿ ನಡೆಸಿಕೊಂಡ ರೀತಿ ಮತ್ತು ಪರಾಕ್ರಮಿಗಳೆಂದು ಕರೆಯಿಸಿಕೊಂಡ ಭೀಷ್ಮ, ಕೃಪಾಚಾರ್ಯ, ಅಶ್ವತ್ಥಾಮರಂತಹ ಮಹಾನ್ ನಾಯಕರು ಕೂಡ ಪಾಂಡವರಿಗಾದ ಅನ್ಯಾಯವನ್ನು ಖಂಡಿಸದೇ ಮುಖಸ್ಮಿತರಾಗಿ ಕುಳಿತಿರುವುದು, ಕೊನೆಯಲ್ಲಿ ಸಂಧಾನವೋ ಸಮರವೋ ಎಂಬ ತಿರ್ಮಾನಕ್ಕೆ ಬರುವಲ್ಲಿ, ಸ್ವತಃ ಶ್ರೀಕೃಷ್ಣನೇ ಸಂಧಾನಕ್ಕೆ ತೆರಳಿದಾಗ ಸಮರವೇ ಸರಿ ಎಂದು ತಿರ್ಮಾನವಾಗಿ ಮಹಾಬಾರತ ಯುದ್ಧ ನಡೆಯಿತು. ಹೀಗೇ 18 ಅಧ್ಯಾಯವು ರಣಕ್ಷೇತ್ರದಲ್ಲಿ ಭಗವತ್ ಗೀತೆಯಾಗಿ ಶ್ರೀಕೃಷ್ಣನು ಅರ್ಜುನನಿಗೆ ಉಪದೇಶಿಸಿದನು. ಈ ಗೀತೋಪದೇಶವು ಎಲ್ಲರ ಜೀವನಕ್ಕೆ ಆದರ್ಶಪ್ರಾಯವಾಗಿದೆ ಎಂದು ಭಟ್ಕಳ ಎಜ್ಯುಕೇಶನ್ ಟ್ರಸ್ಟö ನ ಮ್ಯಾನೇಂಜಿಗ್ ಟ್ರಸ್ಟಿ ಆರ್.ಜಿ.ಕೊಲ್ಲೆ ಹೇಳಿದರು.

ಅವರು ಗಜಾನನ ಗಣಪತಿ ಕೊಲ್ಲೆ ರಾಯ್ಕರ್ ಪೌಂಡೇಶನ್ ಭಟ್ಕಳ ಇವರ ಆಶ್ರಯದಲ್ಲಿ ಭಟ್ಕಳ ಎಜ್ಯಕೇಶನ್ ಟ್ರಸ್ಟಿನ ಸಮೂಹ ಸಂಸ್ಥೆಗಳ ಮತ್ತು ಸಿಬ್ಬಂದಿಗಳ ಭಗವತ್ ಗೀತೆ ಕಂಠಪಾಠ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾದ ಅಂಕೋಲಾದ ಜೆ.ಸಿ.ಕಾಲೇಜಿನ ನಿವೃತ್ತ ಪ್ರಾಶುಂಪಾಲರಾದ ಮತ್ತು ದೈವಜ್ಙ ಬ್ರಾಹ್ಮಣ ಮಠ ಕರ್ಕಿಯ ಟ್ರಸ್ಟಿ ಮತ್ತು ಖಜಾಂಜಿಯಾದ ಶ್ರೀ ವಿ. ಆರ್. ವೆರ್ಣೇಕರ್ ರವರು ಮಾತನಾಡುತ್ತ ಭಗವತ್ ಗೀತೆ ಶ್ರವಣ, ಪಠಣ ಮತ್ತು ಮನನದ ಜೊತೆಗೆ ಲಿಖಿತ ರೂಪದಲ್ಲಿ ಅಧ್ಯಯನ ಮಾಡಿದಾಗ ಎಲ್ಲವೂ ಸ್ಮರಣೆಯಾಗಿ ಕಲಿಕೆಗೆ ಪೂರಕವಾಗುತ್ತದೆ ಎಂದು ಹೇಳಿದರು.
ಶ್ರೀ ಶಿವಶಾಂತಿಕ ದುರ್ಗಾಪರಮೇಶ್ವರಿ ದೇವಸ್ಥಾನ ದೇವಿಮನೆ ಮಾರುಕೇರಿ ಇದರ ಪ್ರಧಾನ ಅರ್ಚಕರಾದ ವಿದ್ವಾನ ಬಾಲಚಂದ್ರ ಎಲ್. ಭಟ್ ಮಾತನಾಡಿ ಭಗವತ್ ಗೀತೆಯು ಬ್ರಹ್ಮಚರ್ಯ, ಗ್ರಹಸ್ಥ, ವಾನಪ್ರಸ್ಥ ಮತ್ತು ಸನ್ಯಾಸಾಶ್ರಮಕ್ಕೆ ಬೇಕಾದ ಎಲ್ಲಾ ವಿಧದ ಜ್ಞಾನವನ್ನು ಮತ್ತು ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಯಲ್ಲಿ ಗುರು ಮತ್ತೆ ಸಂಸ್ಥೆ ಮೇಲೆ ವಿಧೇಯತೆಯನ್ನು ಕಲಿಸಿಕೊಡುವಲ್ಲಿ ಗೀತೋಪದೇಶದಲ್ಲಿನ ಶ್ರೀಕೃಷ್ಣಾರ್ಜುನರ ಭಾವಚಿತ್ರವು ವಿದ್ಯಾರ್ಥಿಗಳಿಗೆ ಮಾರ್ಗದರ್ಶನವಾಗಬೇಕೆಂದು ನುಡಿದರು.
ವಿಭಾಗವಾರು ನಡೆದ ಸ್ಪರ್ಧೆಯಲ್ಲಿ ಪ್ರಾಥಮಿಕ ವಿಭಾಗದಲ್ಲಿ ವಿಹಾ ವಿ. ಶಾನಭಾಗ, ಪ್ರೌಢಶಾಲಾ ವಿಭಾಗದಲ್ಲಿ ಶ್ರೀಷಾ ಜಿ.ಕೆ., ಪದವಿ ಪೂರ್ವ ವಿಭಾಗದಲ್ಲಿ ಪ್ರಶಾಂತಿ ಹೆಬ್ಬಾರ, ಪದವಿ ವಿಭಾಗದಲ್ಲಿ ನೂತನ ವಿ. ನಾಯ್ಕ, ಬಿ.ಎಡ್ ವಿಭಾಗದಲ್ಲಿ ಲಹರಿ ಹೆದ್ದಾರಿಮನೆ ಮತ್ತು ಉಪನ್ಯಾಸಕರ ವಿಭಾಗದಲ್ಲಿ ವಿಧಿ ವಿ. ಶಾನಭಾಗ ಪ್ರಥಮ ಸ್ಥಾನದ ಜೊತೆಗೆ ಒಟ್ಟು 34 ವಿದ್ಯಾರ್ಥಿಗಳು ದ್ವಿತೀಯ ಮತ್ತು ತೃತೀಯ ಸ್ಥಾನದ ಪ್ರಶಸ್ತಿ ಪತ್ರ, ಫಲಕ ಮತ್ತು ಒಟ್ಟು 52,000 ರೂಪಾಯಿಗಳ ನಗದು ಪುರಸ್ಕಾರವನ್ನು ಪಡೆದುಕೊಂಡರು.
ಭಟ್ಕಳ ಎಜ್ಯುಕೇಶನ್ ಟ್ರಸ್ಟನ ಅಧ್ಯಕ್ಷರು ಡಾ. ಸುರೇಶ ನಾಯಕ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಟ್ರಸ್ಟಿ ಮ್ಯಾನೇಜರ್ ರಾಜೇಶ ನಾಯಕ ಬಹುಮಾನ ವಿತರಿಸಿದರು. ಶೀ ಗಣಪತಿ ಶಿರೂರು, ಮುಖ್ಯಾಧ್ಯಾಪಕರು, ನ್ಯೂ ಇಂಗ್ಲೀಷ್ ಪ್ರೌಢಶಾಲೆ ಇವರು ಸ್ವಾಗತಿಸಿದರು, ದಿ ನ್ಯೂ ಇಂಗ್ಲೀಷ್ ಪಿ.ಯು.ಕಾಲೇಜಿನ ಪ್ರಾಂಶುಪಾಲರಾದ ಡಾ.ವೀರೇಂದ್ರ ವಿ. ಶಾನಭಾಗ ವಂದಿಸಿದರು. ವಿದ್ಯಾಭಾರತಿಯ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ದಿ ನ್ಯೂ ಇಂಗ್ಲೀಷ್ ಕಾಲೇಜಿನ ಉಪನ್ಯಾಸಕಿ ರೇಖಾ ಮೊಗೇರ ಕಾರ್ಯಕ್ರಮವನ್ನು ನಿರೂಪಿಸಿದರು.

error: