
ಭಟ್ಕಳ:- ಚೆನ್ನಪಟ್ಟಣ ಹನುಮಂತ ದೇವಸ್ಥಾನಕ್ಕೆ 1500ಕ್ಕು ಹೆಚ್ಚು ವರ್ಷಗಳ ಇತಿಹಾಸವಿದು ದೇವಸ್ಥಾನವನ್ನು ಚೆನ್ನಭೈರಾದೇವಿ ಜೀರ್ಣೋದ್ಧಾರ ಮಾಡಿ ಜಮೀನು ಉಂಬಳಿ ಬಿಟ್ಟ ಬಗ್ಗೆ ಕೂಡಾ ಉಲ್ಲೇಖವಿದೆ. ಹಿಂದೆ 1947ಕ್ಕೂ ಪೂರ್ವದಲ್ಲಿ ಇದ್ದ ಕಲೆಕ್ಟರ್ ಓರ್ವರು ರಥೋತ್ಸವವನ್ನು ನಡೆಸುವುದಕ್ಕೆ ಅಡ್ಡಿ ಪಡಿಸಿದ್ದರೆನ್ನಲಾಗಿದೆ. ರಥದ ಗಾಲಿಗಳು ಶಿಥಿಲವಾಗಿದ್ದರಿಂದ ರಥವನ್ನು ಎಳೆಯ ಕೂಡದು. ರಥೋತ್ಸವದ ಪೂರ್ವಭಾವಿ ಧಾರ್ಮಿಕ ಕಟ್ಟಲೆಗಳನ್ನು ಮಾಡಲು ಯಾವುದೇ ತೊಂದರೆ ಇಲ್ಲ ಎಂದು ಆದೇಶ ಮಾಡಿದ್ದರೆನ್ನಲಾಗಿದೆ. ಆಗ ಸಮಾಜದ ಮುಖಂಡರು ಕೆಲವರು ಮನವಿ ಮಾಡಿಕೊಂಡಾಗ ರಥದ ಗಾಲಿಯು ಶಿಥಿಲವಾಗಿದ್ದು ರಥೋತ್ಸವದ ವೇಳೆಯಲ್ಲಿ ಯಾವುದೇ ಅನಾಹುತ ಸಂಭವಿಸಿದರೆ ಅದಕ್ಕೆ ಜವಾಬ್ದಾರಿಯನ್ನು ತೆಗೆದುಕೊಳ್ಳಲು ತಯಾರಿದ್ದರೆ ಮಾತ್ರ ಪರವಾನಿಗೆ ನೀಡುವುದಾಗಿ ಹೇಳಿದ್ದರು. ಆಗ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಅವರು ಹಾಕಿದ ಶರತ್ತಿನಂತೆ ಅಷ್ಟೊಂದು ಆಸ್ತಿ ಹೊಂದಿದವರು ಇಲ್ಲಾದ್ದರಿಂದ ಮತ್ತೆ ಸಂಕಷ್ಟ ಎದುರಾಗಿತ್ತು. ಆದರೆ ಸುದ್ದಿ ತಿಳಿದ ಸುಲ್ತಾನ್ ಸ್ಟ್ರೀಟ್ನಲ್ಲಿರುವ ಚರ್ಕಿನ್ ಕುಟುಂಬದ ಪ್ರಮುಖರೋರ್ವರು ತಾವು ಜಾಮೀನು ನಿಲ್ಲುವುದಾಗಿ ಯಾವುದೇ ಅನಾಹುತವಾದರೆ ಸರಕಾರಕ್ಕೆ ನಷ್ಟ ಭರಣ ಮಾಡಿಕೊಡುವುದಾಗಿ ಜಾಮೀನು ನಿಂತಿದ್ದರಿAದ ರಥೋತ್ಸವ ಸಾಂಗವಾಗಿ ನಡೆಯಿತು ಎನ್ನುವುದು ಇತಿಹಾಸ. ಮುಂದಿನ ವರ್ಷದಿಂದ ಹೊಸ ಗಾಲಿಗಳೊಂದಿಗೆ ರಥೋತ್ಸವ ಸಾಂಗವಾಗಿ ನಡೆಯಿತಾದರೂ ಸಂಕಷ್ಟದ ಕಾಲದಲ್ಲಿ ಜಾಮೀನು ನಿಂತಿದ್ದ ಕುಟುಂಬಕ್ಕೆ ಪ್ರತಿ ವರ್ಷವೂ ದೇವಸ್ಥಾನದ ಪ್ರಮುಖರು ವಾದ್ಯದೊಂದಿಗೆ ಹೋಗಿ ಅವರಿಗೆ ಹೂವು ಹಣ್ಣು ಕೊಟ್ಟು ರಥೋತ್ಸವಕ್ಕೆ ಆಹ್ವಾನ ಮಾಡಿ ಬರುವ ಸಂಪ್ರದಾಯ ಮುಂದುವರಿದುಕೊAಡು ಬಂದಿದೆ.
ಅದೇ ರೀತಿಯಾಗಿ ಈ ವರ್ಷವೂ ಕೂಡಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಶ್ರೀಧರ ಮೊಗೇರ ಅವರ ನೇತೃತ್ವದಲ್ಲಿ ಪ್ರಮುಖರು ಹೋಗಿ ಅನ್ಸಾರಿ ಶಾಬಂದ್ರಿ ಚಿರ್ಕನ್ ಅವರ ಕುಟುಂಬಕ್ಕೆ ಹಾಗೂ ಜೈನ ಮತ್ತು ಪ್ರಭು ಕುಟುಂಬಗಳಿಗೆ
ಆಹ್ವಾನ ಕೊಟ್ಟು ಬಂದರು. ಈ ಸಂದರ್ಭದಲ್ಲಿ ಕುಟುಂಬದ ಇನಾಯತುಲ್ಲಾ ಶಾಬಂದ್ರಿ, ಜೇಲಾನಿ ಶಾಬಂದ್ರಿ ಮುಂತಾದವರು ಉಪಸ್ಥಿತರಿದ್ದರು. ಅದೇ ರೀತಿಯಾಗಿ ಜೈನ ಕುಟುಂಬ ಮತ್ತು ಪ್ರಭು ಕುಟುಂಬಕ್ಕೂ ಕೂಡಾ ವರ್ಷಂಪ್ರತಿಯAತೆ ಆಹ್ವಾನ ನೀಡಲಾಯಿತು.

More Stories
ಜನವರಿ 7 ಭಟ್ಕಳ ತಾಲೂಕ 11ನೆ ಸಾಹಿತ್ಯ ಸಮ್ಮೇಳ
ಭಟ್ಕಳ ತಾಲೂಕು ಕಸಾಪದಿಂದ ರಸಪ್ರಶ್ನೆ ಸ್ಪರ್ಧೆ – ಬಹುಮಾನ ವಿತರಣೆ.
ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲಿ ದೀಪದಾನ ಕಾರ್ಯಕ್ರಮ