March 12, 2025

Bhavana Tv

Its Your Channel

20 ದಿನದಿಂದ ಧರಣಿ ನಡೆಸುತ್ತಿರುವ ಮೊಗೇರ ಸಮಾಜದವರನ್ನು ಭೇಟಿ ಮಾಡಿದ ಶಾಸಕ ದಿನಕರ ಶೆಟ್ಟಿ

ಭಟ್ಕಳ: ಮೊಗೇರ ಸಮಾಜದ ಧರಣಿ 20ನೇ ದಿನ ಪೂರೈಸಿದ್ದು ಕುಮಟಾ ಶಾಸಕ ದಿನಕರ ಶೆಟ್ಟಿ ಅವರು ಭೇಟಿ ನೀಡಿ ಧರಣಿ ನಿರತರನ್ನುದ್ದೇಶಿಸಿ ಮಾತನಾಡಿದರು.
ಆಡಳಿತ ಪಕ್ಷದ ಶಾಸಕನಾಗಿ ನಾನು ಇದೇ ತಿಂಗಳು 18ನೇ ತಾರೀಖಿನ ಒಳಗಾಗಿ ಸಮಾಜ ಕಲ್ಯಾಣ ಸಚಿವರು ನಡೆಸಲಿರುವ ಸಭೆಯಲ್ಲಿ ಭಾಗವಹಿಸಿ ಜಿಲ್ಲೆಯ ಮೊಗೇರರಿಗೆ ಆದ ಅನ್ಯಾಯದ ಕುರಿತು ಧ್ವನಿಯಾಗಲಿದ್ದೇನೆ. ಈ ಹಿಂದೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರವನ್ನು ನಿಲ್ಲಿಸಿದಾಗ ಈ ಹಿಂದೆ ಶಾಸಕನಾಗಿದ್ದಾಗ ಕೂಡಾ ಧ್ವನಿ ಎತ್ತಿದ್ದನ್ನು ಸ್ಮರಿಸಿದರು. ಈ ಬಾರಿ ಆಡಳಿತ ಪಕ್ಷದ ಶಾಸಕನಾಗಿದ್ದು ನಿಮ್ಮ ಬೆಂಬಲಕ್ಕೆ ಸದಾ ನಾನಿದ್ದೇನೆ ಎಂದ ಅವರು ಪ್ರಾಮಾಣಿಕವಾಗಿ ಮುಖ್ಯ ಮಂತ್ರಿಗಳೊAದಿಗೂ ಕೂಡಾ ಮಾತನಾಡಿ ನ್ಯಾಯ ಕೊಡಿಸುವ ಕಾರ್ಯವನ್ನು ಮಾಡುವುದಾಗಿ ಹೇಳಿದರು.
ಜಿಲ್ಲೆಯಲ್ಲಿ ಮೊಗೇರ ಸಮಾಜದ ಅನೇಕ ಪ್ರಮುಖರು ಪ್ರಾಮಾಣಿಕವಾಗಿ ಜೀವನ ಮಾಡುತ್ತಿದ್ದು ಮೊಗೇರ ಸಮಾಜಕ್ಕೆ ನ್ಯಾಯ ಕೊಡಿಸುವ ಕುರಿತು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದ ಅವರು ಮುಖ್ಯ ಮಂತ್ರಿಗಳು ತಮ್ಮ ಸಮಸ್ಯೆಯನ್ನು ಪರಿಹರಿಸುತ್ತಾರೆನ್ನುವ ಭರವಸೆ ತನಗಿದೆ ಎಂದೂ ಹೇಳಿದರು.
ಈ ಸಂದರ್ಭದಲ್ಲಿ ಮೊಗೇರ ಸಮಾಜಕ್ಕೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರವನ್ನು ನಿಲ್ಲಿಸುವುದಕ್ಕೆ ಪೂರಕವಾಗಿರುವ ಕಾರಣಗಳು ಹಾಗೂ ನಂತರದ ಕಾನೂನು ಹೋರಾಟದ ಬಗ್ಗೆ ಸಮಾಜದ ಕಾನೂನು ಸಲಹೆಗಾರ ನಾಗರಾಜ ಈ.ಎಚ್. ಎಳೆ ಎಳೆಯಾಗಿ ವಿವರಿಸಿದರು. ಉತ್ತರ ಕನ್ನಡ ಮೊಗೇರ ಜಾತಿಯು ಪರಿಶಿಷ್ಟ ಜಾತಿಗೆ ಸೇರಿದೆ. ಮೊಗೇರ ಎನ್ನುವ ಜಾತಿಯವರು ಯಾವುದೇ ಪ್ರದೇಶದಲ್ಲಿದ್ದರೂ ಸಹ ಅವರಿಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರವನ್ನು ನೀಡಬೇಕು ಎಂದು ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗ ಕೂಡಾ ತೀರ್ಪು ನೀಡಿದೆ. ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಎನ್ನುವುದನ್ನು ನಿರ್ಧಾರ ಮಾಡುವ ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗವೇ ತೀರ್ಪು ನೀಡಿದ ನಂತರ ಅಧಿಕಾರಿಗಳ ಹಂತದಲ್ಲಿ ತೊಂದರೆಯಾಗಿರುವುದನ್ನು ಸರಿಪಡಿಸಿಕೊಡುವಂತೆಯೂ ಕೋರಿದರು.
ಈ ಸಂದರ್ಭದಲ್ಲಿ ಮೊಗೇರ ಸಮಾಜದ ತಾಲೂಕಾ ಅಧ್ಯಕ್ಷ ಅಣ್ಣಪ್ಪ ಮೊಗೇರ ಮಾತನಾಡಿದರು. ಈ ಸಂದರ್ಭದಲ್ಲಿ ಶ್ರೀಕಾಂತ ಮೊಗೇರ ಕುಮಟಾ, ಮೊಗೇರ ಸಮಾಜದ ಹೋರಾಟ ಸಮಿತಿ ಪ್ರಮುಖ ಎಫ್. ಕೆ. ಮೊಗೇರ, ಜಿಲ್ಲಾಧ್ಯಕ್ಷ ಕೆ.ಎಂ. ಕರ್ಕಿ, ಜಿ.ಪಂ. ಮಾಜಿ ಅಧ್ಯಕ್ಷೆ ಜಯಶ್ರೀ ಮೊಗೇರ, ಕುಮಾರ ಹೆಬಳೆ, ಶ್ರೀಧರ ಮೊಗೇರ, ಶಂಕರ ಹೆಬಳೆ, ದುರ್ಗಪ್ಪ ಮೊಗೇರ ಮುಂತಾದವರಿದ್ದರು.

error: