March 12, 2025

Bhavana Tv

Its Your Channel

ಸಾರದಹೊಳೆ ಹಳೆಕೋಟೆ ಹನುಮಂತ ದೇವರ ಪುನರ್ ಪ್ರತಿಷ್ಠಾಪನೆ ಕಾರ್ಯ ಹಿನ್ನೆಲೆ ಬಾಂಬ್ ನಿಷ್ಕ್ರಿಯ ದಳದಿಂದ ತೀವ್ರ ತಪಾಸಣೆ

ಭಟ್ಕಳ:ತಾಲೂಕಿನ ಶಿರಾಲಿಯ ಸಾರದಹೊಳೆಯಲ್ಲಿ ಶ್ರೀ ಕ್ಷೇತ್ರ ಹಳೆಕೋಟೆ ಹನುಮಂತ ದೇವರ ಐತಿಹಾಸಿಕ ಮಂದಿರ ಪುನರ್ ಪ್ರತಿಷ್ಠಾಪನೆ ಕಾರ್ಯ ಇಂದಿನಿoದ ೨೦ ರವರೆಗೆ ವಿಜೃಂಭಣೆಯಿoದ ನಡೆಯಲಿದ್ದು ಈ ಹಿನ್ನೆಲೆ ಕಾರವಾರದಿಂದ ಆಗಮಿಸಿದ ಬಾಂಬ್ ನಿಷ್ಕ್ರಿಯದಳ ಹಾಗೂ ಶ್ವಾನದಳ ತಂಡ ಬಂದು ದೇವಾಲಯ ಒಳಾಂಗಣ,ಹೊರಾoಗಣ,ಸ್ವಾಮೀಜಿಯವರು ಪೀಠ,ಹೊರೆ ಕಾಣಿಕೆ ನೀಡುವ ಸ್ಥಳ,ಕಾರ್ಯಕ್ರಮ ನಡೆಯುವ ಸ್ಥಳ ಊಟದ ಸ್ಥಳ,ವಾಹನ ನಿಲ್ಲುವ ಸ್ಥಳ ಹಾಗೂ ಎಲ್ಲೆಡೆ ಪರಿಶೀಲನೆ ಮಾಡಿದ್ದು ಪೋಲಿಸ್ ಬಂದೋಬಸ್ತ ಏರ್ಪಡಿಸಿ ತೀವ್ರ ನಿಗಾ ಇಟ್ಟಿದೆ.ದೇವಸ್ಥಾನ ಆಡಳಿತ ಕಮೀಟಿ ಅಗತ್ಯವಿದ್ದ ಕಡೆ ಸಿಸಿ ಕ್ಯಾಮರಾ ಕೂಡಾ ಅಳವಡಿಸಿ ನಿಗಾ ವಹಿಸಲಾಗಿದೆ.

ಈ ಸಂದರ್ಭದಲ್ಲಿ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿಗಳಾದ ಅನಿಲ್ ನಾಯ್ಕ.
ಸಂಜು ಬೋವಿ, ಜಗನ್ನಾಥ ನಾಯ್ಕ, ರಮೇಶ ಸಿರ್ಸಿಕರ್, ಸಂತೋಷ ನಾಯ್ಕ, ಮಾಬ್ಲೆಶ್ವರ ಗೌಡ, ಪ್ರಶಾಂತ ಉಮಚಗಿ, ಶ್ವಾನ ಅಣಸಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

error: