March 12, 2025

Bhavana Tv

Its Your Channel

ವಿದ್ಯಾಂಜಲಿ ಪಬ್ಲಿಕ್ ಸ್ಕೂಲ್ ನಲ್ಲಿ ಜ್ಯೋತಿ ಪ್ರಧಾನ ಕಾರ್ಯಕ್ರಮ

ಭಟ್ಕಳ:- ಕಳೆದ ಶುಕ್ರವಾರ ತಾಲೂಕಿನ ವಿದ್ಯಾಂಜಲಿ ಪಬ್ಲಿಕ್ ಸ್ಕೂಲ್ ನಲ್ಲಿ ೧೦ ನೇ ತರಗತಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭವನ್ನು ಜ್ಯೋತಿ ಪ್ರಧಾನ ಎಂಬ ವಿಶೇಷ ಹೆಸರಿನೋಂದಿಗೆ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮವನ್ನು ಪ್ರಾರ್ಥನೆ ಮತ್ತು ದೀಪ ಬೆಳಗುವುದರ ಮೂಲಕ ಆರಂಭಿಸಲಾಯಿತು. ಕಾರ್ಯಕ್ರಮದ ವೇದಿಕೆಯ ಮೇಲೆ ರವೀಂದ್ರ ಕೋಲ್ಲೆ, ಡಾ. ಸುರೇಶ ನಾಯಕ್, ರಾಜೇಶ ನಾಯಕ್, ವಿಶ್ವನಾಥ ಭಟ್ ಮತ್ತು ಶಾಲೆಯ ಮುಖ್ಯ ಶಿಕ್ಷಕಿಯಾದ ಶ್ರೀಮತಿ ಶೈಲಜಾ ಹೆಗಡೆ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ರವೀಂದ್ರ ಕೋಲ್ಲೆ ವಿದ್ಯಾರ್ಥಿ ಜೀವನವು ಒಂದು ಮಹತ್ವದ ಘಟ್ಟವಾಗಿದ್ದು ವಿದ್ಯಾರ್ಥಿಗಳು ಜ್ಞಾನಾರ್ಜನೆಗೆ ಹೆಚ್ಚಿನ ಒತ್ತು ನೀಡುವುದರ ಮೂಲಕ ಭವಿಷ್ಯದಲ್ಲಿ ಸಮಾಜದ ಏಳಿಗೆಗೆ ಶ್ರಮಿಸಬೇಕು ಎಂದು ಉಪದೇಶಿಸಿದರು. ಸಂಪನ್ಮೂಲ ವ್ಯಕ್ತಿಯಾಗಿ
ಆಗಮಿಸಿದ ವಿಶ್ವನಾಥ ಭಟ್ ಅವರು ವಿದ್ಯಾರ್ಥಿಗಳು ಸಮಗ್ರ ಭವಿಷ್ಯದ ಚಿಂತನೆಯನ್ನು ಹೇಗೆ ಮಾಡಬೇಕು ಎನ್ನುವುದನ್ನು ತಿಳಿಸಿದರು. ನಂತರ ಮತ್ತೋಬ್ಬ ಅತಿಥಿ ರಾಜೇಶ ನಾಯಕ್ ಇವರು ಮಕ್ಕಳ ಭವಿಷ್ಯದ ಗುರಿಯನ್ನು ಅವರಿಂದಲೇ ತಿಳಿದು, ಅವರ ಗುರಿಗಳಿಗೆ ಸಮಗ್ರ ಮಾರ್ಗದರ್ಶನ ನೀಡುವ ಮೂಲಕ ಪುಷ್ಟಿ ತುಂಬುವ ಕೆಲಸ ಮಾಡಿದರು. ಹಾಗೇಯೇ ಕಾರ್ಯಕ್ರಮದಲ್ಲಿ
ಉಪಸ್ಥಿತರಿದ್ದ ಭಟ್ಕಳ್ ಎಜುಕೇಶನ್ ಟ್ರಸ್ಟ್ ಅಧ್ಯಕ್ಷರಾದ ಡಾ. ಸುರೇಶ ನಾಯಕ್ ಕಾರ್ಯಕ್ರಮವನ್ನು
ಉದ್ದೇಶಿಸಿ ” ಸದೃಢ ದೇಹದಲ್ಲಿ ಸದೃಢ ಮನಸ್ಸು” ಎಂಬುವುದನ್ನು ಸಂಕ್ಷಿಪ್ತವಾಗಿ ತಿಳಿಸುವ ಮೂಲಕ
ಭವಿಷ್ಯದಲ್ಲಿ ವಿದ್ಯಾರ್ಥಿಗಳು ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳುವುದರ ಮೂಲಕ ಸಮಾಜಕ್ಕೆ ಮಾದರಿಯಾಗಬೇಕು ಎನ್ನುವುದನ್ನು ತಿಳಿಸಿದರು.
” ದೀಪ ಜ್ಯೋತಿ ಪರಂ ಬ್ರಹ್ಮ
ದೀಪ ಜ್ಯೋತಿ ಜನಾರ್ಧನ”
ಜಗವ ಬೆಳಗೊ ದೀವಿಗೆಗೆ ಬತ್ತಿ ಎಣ್ಣೆಗಳೆರಡು ಹೇಗೆ ಮುಖ್ಯವೋ ಹಾಗೆ ಜ್ಞಾನವೆಂಬ ವಿದ್ಯಾ ದೇಗುಲಕ್ಕೆ ವಿದ್ಯಾರ್ಥಿ ಮತ್ತು ಶಿಕ್ಷಕರು ಕೂಡ ಅಷ್ಟೇ ಮುಖ್ಯ ಅಂತಹ ಜ್ಞಾನವೆಂಬ ದೀವಿಗೆಯನ್ನು ಮುಖ್ಯ ಶಿಕ್ಷಕರು ತಮ್ಮ ಕೈಯಿಂದ ವಿದ್ಯಾರ್ಥಿ ಮತ್ತು ಅವರ ಪಾಲಕರಿಗೆ ಹಸ್ತಾಂತರಿಸುವ ಮೂಲಕ ತಮ್ಮಲ್ಲಿ ಪಡೆದ ಜ್ಞಾನವನ್ನು ಜಗತ್ತಿಗೆ ತೆರೆದಿಡುತಿದ್ದೇವೆ ಅಥವಾ ನೀಡುತ್ತಿದೇವೆ ಎಂದು ಸಾಂಕೇತಿಕರಿಸಿದರು.

error: