March 13, 2025

Bhavana Tv

Its Your Channel

ಸ್ಮರಣ ಸಂಚಿಕೆ ದಾಖಲಾರ್ಹ ; ಅರಣ್ಯ ಭೂಮಿ ಹಕ್ಕಿಗೆ ಕಾನೂನಾತ್ಮಕ ಪರಿಹಾರ ನೀಡಿ- ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ.

ಭಟ್ಕಳ: ಅರಣ್ಯವಾಸಿಗಳಿಗೆ ಅರಣ್ಯ ಭೂಮಿ ಅನಿವಾರ್ಯ. ಭೂಮಿ ಹಕ್ಕಿಗೆ ಕಾನೂನಾತ್ಮಕ ಪರಿಹಾರ ನೀಡುವದು ಅವಶ್ಯ. 30 ವರ್ಷ ಸಮಗ್ರ ಹೋರಾಟದ ತುಣುಕು ಮತ್ತು ಕಾನೂನಿನ ಅಂಶಗಳಿAದ ಕೂಡಿದ ಸ್ಮರಣ ಸಂಚಿಕೆ ಹೋರಾಟಗಾರರ ವೇದಿಕೆ ಹೊರ ತಂದಿರುವದು ದಾಖಲಾರ್ಹ ಎಂದು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಅವರು ಹೇಳಿದರು.
ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಅವರ ನೇತ್ರತ್ವದಲ್ಲಿ ದಿ. 17 ರಂದು ಭಟ್ಕಳದ ಶಿರಾಲಿಯ ಶಾರದಾಹೊಳೆ ಹಳೆಕೋಟೆ ಹನುಮಂತ ದೇವಾಲಯದ ಸಭಾಂಗಣದಲ್ಲಿ ಹೋರಾಟಗಾರರ ವೇದಿಕೆ ಹೊರತಂದಿರುವ ಸ್ಮರಣ ಸಂಚಿಕೆ ಅವಲೋಕಿಸುತ್ತ ಮೇಲಿನಂತೆ ಹೇಳಿದರು.
ಅರಣ್ಯ ಭೂಮಿ ಹಕ್ಕು ನೀಡುವಲ್ಲಿ ಉದಾಶೀಲತೆ ಬೇಡಾ. ಭೂಮಿ ಮಾನವ ಕುಲಕ್ಕೆ ಅನಿವಾರ್ಯ. ಅರಣ್ಯವಾಸಿಗಳು ಅರಣ್ಯದ ಅವಿಭಾಜ್ಯ ಅಂಗ ಎಂದು ಉಲ್ಲೇಖಿಸಿದರು.
ನಿಯೋಗದಲ್ಲಿ ಸಂಚಾಲಕರಾದ ದೇವರಾಜ ಗೊಂಡ, ಪಾಂಡುರAಗ ನಾಯ್ಕ ಬೆಳಕೆ, ವಾಮನ ನಾಯ್ಕ ಮಂಕಿ, ದೇವಾಲಯದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೃಷ್ಣ ನಾಯ್ಕ ಉಪಸ್ಥಿತರಿದ್ದರು.

error: