
ಭಟ್ಕಳ: ಸನ್ಯಾಸಿಗಳ ತಪಸ್ಸಿನಿಂದ ಜನರ ತೆರಿಗೆ ಹಣ ಪೋಲಾಗುತ್ತಿರುವುದು ತಪ್ಪಿಸಲು ಸಾಧ್ಯವಿಲ್ಲ ಈ ನಿಟ್ಟಿನಲ್ಲಿ ಮುಂದಿನ ಬಾರಿ ಚುನಾವಣೆಗೆ 5 ಲಕ್ಷ ನಾಗಾಸಾಧುಗಳಿಂದ ಚುನಾವಣೆ ಪ್ರಚಾರದೊಂದಿಗೆ ಸನ್ಯಾಸಿಗಳು ರಾಜ್ಯ ಚುನಾವಣೆಗೆ ಧುಮುಕುವ ಉದ್ದೇಶ ಹೊಂದಿದ್ದು, ಇಂದು ರಾಜ್ಯದಲ್ಲಿ ಸನಾತನ ಧರ್ಮ ತಿದ್ದಬೇಕಾದ ಜವಾಬ್ದಾರಿ ನಮ್ಮ ಮೇಲಿದೆ ಎಂದು ಧರ್ಮಸ್ಥಳ ಶ್ರೀರಾಮ ಕ್ಷೇತ್ರದ ಮಠಾಧೀಶರಾದ ಜಗದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಗಳು ಹೇಳಿದರು.
ಮನುಷ್ಯರ ಸುಖಕ್ಕಾಗಿಯೇ ಶ್ರದ್ದಾಕೇಂದ್ರಗಳ ನಿರ್ಮಾಣದ ಹಿಂದಿನ ಉದ್ದೇಶವಾಗಿದೆ. ಜನಸಾಮಾನ್ಯರ ಉದ್ದಾರಕ್ಕೆ ಈ ಹಿಂದಿನ ಋಷಿಮುನಿಗಳು ಶ್ರದ್ದಾಕೇಂದ್ರಗಳನ್ನು ನಿರ್ಮಿಸಿದ್ದರು. ಈಗ ಈ ಕೇಂದ್ರಗಳು ಮನುಷ್ಯನ ಜೀವನದ ಉತ್ತುಂಗವನ್ನು, ಪ್ರೇರಣೆಯನ್ನು ಮಾಡುವಂತಹ ಕೆಲಸ ಮಾಡಬೇಕಾಗಿದೆ.
ಧರ್ಮ ಮತ್ತು ರಾಜ್ಯಾಂಗಕ್ಕೆ ಸಂಪರ್ಕ ಕಲ್ಪಿಸುವ ಕೆಲಸದಲ್ಲಿಯೂ ಸಹ ಶ್ರದ್ದಾಕೇಂದ್ರದ ಪಾತ್ರ ಬಹುಮುಖ್ಯವಾಗಿದೆ. ಈ ಹಿಂದೆ ರಾಜರ ಆಳ್ವಿಕೆಯಿದ್ದು ಈಗ ಶಾಸಕಾಂಗದ ನಾಯಕರ ಆಡಳಿತ ನಡೆಯುತ್ತಿದೆ. ಆದರೆ ಇಂದಿನ ದಿನ ಮಾನದಲ್ಲಿ ಪ್ರಜೆಗಳ ಯೋಗಕ್ಷೇಮ ಅಚಿದರೆ ಜನರ ಮೇಲಿನ ಕಾಳಜಿ ಕಡಿಮೆಯಾಗುತ್ತಿದೆ.
5 ಲಕ್ಷ ಸಂತರಲ್ಲಿ ನಾನು ಸಹ ಒಬ್ಬ ಇದ್ದು ತಿಂಗಳಿಗೆ ಒಮ್ಮೆ ಎಲ್ಲ ಸಂತರು ಕುಳಿತು ಮಾತನಾಡುತ್ತೇವೆ. ಇಂದಿನ ದಿಕ್ಕು ತಪ್ಪುತ್ತಿರುವ ಆಡಳಿತ ವ್ಯವಸ್ಥೆಯ ಬಗ್ಗೆ ಚರ್ಚೆಗಳು ನಡೆಯುತ್ತವೆ. ಅದರಂತೆ ಬೇಸತ್ತ ಸಂತರೆಲ್ಲರು ಸಹ ಸಂವಿಧಾನದ ಉತ್ತಮತೆಯನ್ನು ಕಾಪಾಡಿಕೊಂಡು ಸಮಗ್ರ ಬದಲಾವಣೆಗೆ ಹೆಚ್ಚಿನ ಒತ್ತು ನೀಡುವ ಉದ್ದೇಶದಿಂದ ಉತ್ತರ ಪ್ರದೇಶದ ಯೋಗಿ ಆದಿತ್ಯಾನಾಥರ ಪ್ರೇರಣೆಯಂತೆ ರಾಜ್ಯದ ಚುನಾವಣೆಯಲ್ಲಿ ಸ್ಪರ್ಧಿಸಲು ತೀರ್ಮಾನಿಸಲಾಗಿದೆ.
ಈಗಾಗಲೇ ನಿರ್ಧರಿಸಿದಂತೆ 50 ಮಂದಿ ಸಂತರು ಭಟ್ಕಳ ಕ್ಷೇತ್ರದಿಂದ ರಾಜ್ಯದೆಲ್ಲೆಡೆ ಚುನಾವಣೆಗೆ ಸ್ಪರ್ಧಿಸಿ ಬದಲಾವಣೆಗೆ ದಾರಿ ಮಾಡಿಕೊಡಬೇಕಾಗಿದೆ. ಕಾರಣ ಇಂದಿನ ನಾಯಕರಿಗೆ ಶಾಸಕಾಂಗ, ಆಡಳಿತ, ಸಂವಿಧಾನದ ಗಂಧ ಗಾಳಿ ತಿಳಿಯದವರು ಜನಪ್ರತಿನಿಧಿ ಆಗುತ್ತಿದ್ದು, ಇದು ಪರಿಷ್ಕರಣೆಗೊಂಡು ವಿದ್ಯಾವಂತರ ಕೈಗೆ ಸಿಗಬೇಕಾಗಿದೆ. ರಾಜಕೀಯಕ್ಕೆ ಬರುವುದು ಕೇವಲ ಪ್ರಚಾರ, ಸುಖಭೋಗಗಳ ಅನುಭವಿಸಲು ಎಂಬ ದುಷ್ಟ ಕಲ್ಪನೆ ಪಂಚಾಯತ ಸದಸ್ಯನಿಂದ ದೊಡ್ಡ ನಾಯಕರ ತನಕವಿದ್ದು, ಇದರ ಬದಲಾವಣೆ ಆಗಲೇಬೇಕಾಗಿದೆ. ಜನರ ತೆರಿಗೆ ಹಣದಲ್ಲಿ ಶೋಕಿ ಮಾಡುವವರು ಜನರಿಗೆ ಅವರ ಅಧಿಕಾರ ಖರ್ಚು ವೆಚ್ಚದ ಲೆಕ್ಕ ಕೊಡುವಂತಹ ಕಾರ್ಯ ಆಗಬೇಕಾಗಿದೆ.
ಸಂತರು ಅಧಿಕಾರಕ್ಕೆ ಬಂದರೇ ಸಂಬಳ, ಕಮಿಶನ್ ಅಥವಾ ಇನ್ಯಾವುದೇ ಹಣ ಗೀಳು ಇಟ್ಟುಕೊಳ್ಳದೇ, ಹಾಗೂ ಯಾವುದನ್ನು ಅಪೇಕ್ಷಿಸದೇ ಜನರಲ್ಲಿ ಜಾಗೃತಿ ಮುಡಿಸುವ ಕೆಲಸದಲ್ಲಿ ಪಾರದರ್ಶಕ ಸೇವೆಗೆ ಮುನ್ನಡಿ ಇಡಲಿದ್ದೇವೆ. ಕನಿಷ್ಠ ಓರ್ವ ಶಾಸಕನಿಗೆ ತಿಂಗಳಿಗೆ ಒಂದು ಬಾರಿ ನಿವ್ರತ್ತ ನ್ಯಾಯಾಧೀಶರಿಂದ ಕಾನುನಿನ ಭೋದನೆ ಮಾಡಬೇಕಾಗಿದೆ. ಸಚಿತರಿಗೆ ಕೇವಲ ಊಟಕ್ಕೆ ಅನ್ನ ಸಾಕು ಇದರಿಂದಲೇ ಸನಾತನ ಹಿಂದು ಧರ್ಮವನ್ನು ತಿದ್ದುವ ಕೆಲಸ ಮಾಡಲಿದ್ದೇವೆ. ಈಗಿನ ವ್ಯವಸ್ಥೆಯನ್ನು ಕಂಡು ಬೇಸತ್ತಿದ್ದು ನಾಯಕರುಗಳು ಇದ್ಯಾವುದರ ರಿಪೇರಿಗೆ ಹೋಗದಿರುವದನ್ನು ನೋಡಿ ಸನ್ಯಾಸಿಗಳು ಜಪವನ್ನು ಬಿಟ್ಟು ರಾಜಕೀಯಕ್ಕೆ ಧುಮುಕಬೇಕಾಗಿದೆ ಎಂದರು.
ರಾಜಕೀಯ ಆಸಕ್ತಿ ಸಂತರಿಗೂ ಇಲ್ಲವಾಗಿದ್ದು ಆದರೆ ರಾಜ್ಯಾಂಗದ ಪರಿಶುದ್ದತೆಗೆ ಸಂತರು, ಸನ್ಯಾಸಿಗಳು ರಾಜಕೀಯಕ್ಕೆ ಇಳಿಯಬೇಕಾದ ಅನಿವಾಚಿoತೆ ಸೃಷ್ಟಿ ಯಾಗಿದೆ. ಇದಕ್ಕೆ ಉತ್ತರ ಪ್ರದೇಶದ ಆದಿತ್ಯನಾಥರೇ ಪ್ರೇರಣೆಯಾಗಿದೆ. ಇವೆಲ್ಲವೂ ಬೇಸತ್ತು ಸಂತರು ತೆಗೆದುಕೊಂಡ ನಿರ್ಧಾರವಾಗಿದೆ.
ಭಗವದ್ಗೀತೆಯೇ ನಮ್ಮ ಚಿಹ್ನೆ, ರಾಮರಾಜ್ಯದ ಪರಿಕಲ್ಪನೆಯಲ್ಲಿ ಚುನಾವಣೆಯ ಸಕಲ ಸಿದ್ದತೆ ತಯಾರಾಗಿದ್ದು, ಜನರ ಸೇವೆಯೊಂದೆ ನಮ್ಮ ಗುರಿಯಾಗಿದ್ದು ಇದರಲ್ಲಿ ಸನ್ಯಾಸಿಗಳ ಅಪೇಕ್ಷೆ ಯಾವುದು ಇಲ್ಲವಾಗಿದೆ. ಇಂದು ವಿಕೇಂದ್ರೀಕರಣ ಆಗುತ್ತಿಲ್ಲ. ಎಲ್ಲವೂ ಕೇಂದ್ರೀಕರಣದತ್ತ ಸಾಗಿದೆ. ಈ ರಾಜಕೀಯ ಪಕ್ಷದ ನಾಯಕರರ ಕಿತ್ತಾಟದ ಒಂದು ಕಡೆಯಾದರೆ ಅತ್ತ ನಾಯಕರು ಒಟ್ಟಿಗೆ ಚಹ-ತಿಂಡಿ ಸವಿಯುತ್ತಾರೆ ಆದರೆ ಇತ್ತ ಅವರ ಅನುಯಾಯಿಗಳು ಹೊರಗಡೆ ಕಿತ್ತಾಡಿಕೊಳುವುದು ನೋಡಿದರೆ ಸಂತರ ಕಣ್ಣಲ್ಲಿ ನೀರು ಬರುತ್ತದೆ.
ಈ ರಾಜಕೀಯದ ಬದಲಾವಣೆಗೆ ಮುಂದಿನ ಚುನಾವಣೆಯು ಭಟ್ಕಳದಲ್ಲಿಯೇ ಪ್ರಯೋಗ ಆರಂಭಗೊಳ್ಳಲಿದ್ದು ಮಾಜಿ ಶಾಸಕರು ಹಾಗೂ ಮುಂದಿನ ಚುನಾವಣಾ ಆಕಾಂಕ್ಷಿಗಳು ನನ್ನ ಸ್ಪರ್ಧೇಯಿಂದ ಹಿಂದೆ ಸರಿಯುತ್ತಾರೆಂಬ ನಂಬಿಕೆಯಿದೆ ಎಂದರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾದ ಉಪಸ್ಥಿತರಿದ್ದ ರಾಜ್ಯ ವಿಧಾನ ಸಭಾ ಅಧ್ಯಕ್ಷ, ಸಭಾಪತಿ, ಶಿರಸಿ ಕ್ಷೇತ್ರದ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ ರಾಜಕೀಯದಲ್ಲಿನ ವಿಚಾರದಲ್ಲಿ ಸ್ವಾಮೀಜಿ ಅವರ ಮಾತಿನಲ್ಲಿ ಬಲವಾದ ಎಚ್ಚರಿಕೆಯ ಸಂದೇಶವಿದೆ. ಸಂವಿಧಾನದ ಆಶಯದಂತೆ ರಾಜಕೀಯ ನಾಯಕರು ಜನರಿಗೆ ಉತ್ತಮ ಆಡಳಿತ ನೀಡುವ ಜವಾಬ್ದಾರಿಯಿದ್ದು, ಇದನ್ನೇ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಗಳು ನಮಗೆಲ್ಲರಿಗೂ ಸಂದೇಶ ನೀಡಿದ್ದಾರೆ ಎಂದ ಅವರು ನಿಮ್ಮಿಂದ ಸಾಧ್ಯ ವಾಗದೇ ಇದ್ದಲ್ಲಿ ಧಾರ್ಮಿಕ ಕ್ಷೇತ್ರ ಸಂತರು ಬಂದು ರಾಜ್ಯ ಆಡಳಿತಕ್ಕೆ ಮುನ್ನುಡಿ ಬರೆಯಲಿದ್ದಾರೆಂಬ ಮಾತುಗಳು ಗಂಭೀರತೆಯಿAದ ಸ್ವೀಕರಿಸಿ ಉತ್ತಮ ಆಡಳಿತ ನೀಡಬೇಕಾಗಿದೆ ಎಂದರು.
ಒoದು ದೇವಸ್ಥಾನದ ನಿರ್ಮಾಣವು ಬಹುಪುಣ್ಯದ ಕೆಲಸ ಇದಾಗಿದ್ದು, ನಿಮ್ಮಲ್ಲಿನ ಶ್ರದ್ದೇ, ಭಕ್ತಿಯನ್ನು ನೋಡಿದರೆ ಹನುಮ ಸೀತೆಯನ್ನು ಕಾಪಾಡಲು ಸೇತುವೆ ನಿರ್ಮಿಸಲು ತನ್ನ ವಾನರ ಸೇನೆಯನ್ನು ಬಳಸಿದಂತೆ ದೇವಸ್ಥಾನದ ನಿರ್ಮಾಣದಲ್ಲಿ ಇಲ್ಲಿನ 18 ಕೂಟದ ಜನರು ಹಾಗೂ ಮುಖಂಡರು ವಾನರರಂತೆ ಕೆಲಸ ಮಾಡಿದ್ದಾರೆ. ಪ್ರತಿಯೊಬ್ಬರಲ್ಲಿನ ರಾಮ ಮೇಲಿನ ಪ್ರೀತಿ ಹನುಮನ ಶಕ್ತಿಯಿಂದ ಶಾಶ್ವತವಾದ ಶಿಲಾಮಯ ದೇವಸ್ಥಾನದ ನಿರ್ಮಾಣವೂ ರಾಜ್ಯಕ್ಕೆ ಬಹುದೊಡ್ಡ ಸಂದೇಶವನ್ನು ರವಾನಿಸಿದಂತಾಗಿದೆ ಎಂದರು.
ಸನಾತನ ಹಿಂದು ಧರ್ಮ ಜಗತ್ತಿಗೆ ಗುರುವಿನ ಸ್ಥಾನದಲ್ಲಿ ನಿಂತು ಜ್ಞಾನದ ಬೆಳಕನ್ನೇ ಸಾರಿದೆ. ಸರ್ವೇ ಜನಾ ಸುಖಿಃನೋ ಭವಂತು ಎಂಬ ಮಾತಿನಂತೆ ಎಲ್ಲರಿಂದಲೂ ಸಾಧ್ಯ ಎಲ್ಲರು ಸುಖ ಸಂತೋಷದಿAದ ಇರಬೇಕೆಂಬುದನ್ನು ಸಾರಿದ್ದು ಇದನ್ನೇ ಸಂತರು, ವೇದ ಉಪನೀಷತ್ ಸಹ ತಿಳಿಸಿದೆ.
ಮನುಷ್ಯ ಜನ್ಮ ಸಿಕ್ಕಿರುವದೇ ನಮ್ಮ ಪುಣ್ಯದ ಕೆಲಸ. ಆದರೆ ಭಕ್ತಿ ಮಾರ್ಗದ ಜೊತೆಗೆ ಜ್ಞಾನ ಮಾರ್ಗದತ್ತ ನಾವೆಲ್ಲರು ಸಾಗಬೇಕಾಗಿದೆ ಎಂದ ಅವರು ಭಕ್ತಿ, ಜ್ಞಾನದ ಜೊತೆಗೆ ಪರಮಾತ್ಮನನ್ನು ಕಾಣಬೇಕಾಗಿದ್ದು ಅದುವೇ ಸ್ರಷ್ಠಿಯ ಮೂಲದ ಅರಿವನ್ನು ಕಂಡು ಕೊಳ್ಳಬೇಕು. ಅಹಂ ಬ್ರಹ್ಮಂ ಸರ್ವಂ ಬ್ರಹ್ಮಂ ಎಂಬoತೆ ಸ್ರಷ್ಟಿಯ ಅಂಶ ಮನುಷ್ಯರಾಗಿದ್ದರೆ ಎಲ್ಲವೂ ಸೃಷ್ಟಿಯ ಅಂಶವೇ ಆಗಿದೆ ಎಂಬುದು ನಾವೆಲ್ಲ ಭಾರತೀಯರು ನಂಬಿದ್ದೇವೆ. ಎಲ್ಲವನ್ನು ದೇವರ ರೂಪದಲ್ಲಿಯೇ ನಾವು ಕಾಣಲಿದ್ದೇವೆ ಎಂದರು.
ಈ ಸಂಧರ್ಭದಲ್ಲಿ ಮಾಜಿ ಸಚಿವ ಆರ್.ಎನ್. ನಾಯ್ಕ, ಜೆಡಿ ನಾಯ್ಕ ಮಾತನಾಡಿದರು.
ಇದೇ ಸಂಧರ್ಭದಲ್ಲಿ ದೇವಸ್ಥಾನದ ನಿರ್ಮಾಣ ಪೂರ್ವದ ಅಷ್ಟಮಂಗಳ ಪ್ರಶ್ನೆ ತಿಳಿಸಿದ ಅರ್ಚಕರಾದ ಲಂಬೋದರ ಅವರನ್ನು, ದೇವಸ್ಥಾನ ರಚನೆಯ ಶಿಲ್ಪಿಗಳನ್ನು, ತಾಲೂಕಿನ ಪತ್ರಕರ್ತರನ್ನು ಸನ್ಮಾನಿಸಿ ಗೌರವಿಸಲಾಯಿತು.
ವೇದಿಕೆಯಲ್ಲಿ ಶಾಸಕ ಸುನೀಲ ನಾಯ್ಕ, ಮಾಜಿ ಶಾಸಕ ಮಂಕಾಳ ವೈದ್ಯ, ಸಹಾಯಕ ಆಯುಕ್ತೆ ಮಮತಾದೇವಿ ಜಿ.ಎಸ್., ತಹಸೀಲ್ದಾರ್ ಡಾ. ಸುಮಂತ ಸೇರಿದಂತೆ ದೇವಸ್ಥಾನದ ಆಡಳಿತ ಮಂಡಳಿ ಮೊಕ್ತೇಸರರು, ಜೀರ್ಣೋದ್ದಾರ ಸಮಿತಿ ಅಧ್ಯಕ್ಷರು, ನಾಮಧಾರಿ ಮಾವಳ್ಳಿ ಕೂಟ ಅಧ್ಯಕ್ಷರು ಮುಂತಾದವರು ಉಪಸ್ಥಿತರಿದ್ದರು.
ಶಿಕ್ಷಕರಾದ ಪರಮೇಶ್ವರ ನಾಯ್ಕ ಹಾಗೂ ನಾರಾಯiಣ ನಾಯ್ಕ ಕಾಯಕ್ರಮವನ್ನು ನಿರ್ವಹಿಸಿದರು.

More Stories
ಜನವರಿ 7 ಭಟ್ಕಳ ತಾಲೂಕ 11ನೆ ಸಾಹಿತ್ಯ ಸಮ್ಮೇಳ
ಭಟ್ಕಳ ತಾಲೂಕು ಕಸಾಪದಿಂದ ರಸಪ್ರಶ್ನೆ ಸ್ಪರ್ಧೆ – ಬಹುಮಾನ ವಿತರಣೆ.
ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲಿ ದೀಪದಾನ ಕಾರ್ಯಕ್ರಮ