March 13, 2025

Bhavana Tv

Its Your Channel

ಎಂ.ಆರ್ ಎಸ್ ಸ್ಪೋರ್ಟ್ಸ್ ಕ್ಲಬ್ ಮಣ್ಕುಳಿ ಇವರ ಆಶ್ರಯದಲ್ಲಿ ನಡೆದ 30 ಗಜದ ಹೊನಲು ಬೆಳಕಿನ ಫಾಸ್ಟ್ ಬಾಲ್ ಕೌಂಟಿ ಕ್ರಿಕೆಟ್ ಪಂದ್ಯಾವಳಿ

ಭಟ್ಕಳ ತಾಲೂಕಿನ ಎಂ.ಆರ್ ಎಸ್ ಸ್ಪೋರ್ಟ್ಸ್ ಕ್ಲಬ್ ಮಣ್ಕುಳಿ ಇವರ ಆಶ್ರಯದಲ್ಲಿ ನಡೆದ 30 ಗಜದ ಹೊನಲು ಬೆಳಕಿನ ಫಾಸ್ಟ್ ಬಾಲ್ ಕೌಂಟಿ ಕ್ರಿಕೆಟ್ ಪಂದ್ಯಾವಳಿಯಲ್ಲಿ ಎಂ.ಆರ್.ಎಸ್.ತAಡವನ್ನು ಮಣಿಸಿ ಎಮ್. ಸಿ.ಸಿ ಮುರ್ಡೇಶ್ವರ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ

ಫೈನಲ್ ಪಂದ್ಯದಲ್ಲಿ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಎಂ.ಸಿ.ಸಿ ಮುಡೇಶ್ವರ ತಂಡ 6 ಓವರ್ ನ ಮುಕ್ತಾಯಕ್ಕೆ ತನ್ನ 2 ವಿಕೆಟ್ ಕಳೆದುಕೊಂಡು 49 ರನ್ ಕಲೆ ಹಾಕಲು ಯಶಸ್ವಿಯಾಯಿತು .ನಂತರ ಈ ಗುರಿಯನ್ನು ಬೆನ್ನಟ್ಟಿದ ಎಂ.ಆರ್.ಎಸ್ ತಂಡ 6 ಓವರ್ ಮುಕ್ತಾಯಕ್ಕೆ ಕೇವಲ 25 ರನ್ ಗಳಿಸಲು ಸಕ್ತವಾಯಿತಿ. ಇದರೊಂದಿಗೆ ಎಂ.ಆರ್ ಎಸ್ ಟ್ರೋಫಿ 2022 ಚಾಂಪಿಯನ್ ಆಗಿ ಎಮ್. ಸಿ.ಸಿ ಮುರ್ಡೇಶ್ವರ ತಂಡ ಹೊರಹೊಮ್ಮುದರೊಂದಿಗೆ 33,333 ನಗದು ಹಾಗೂ ಆಕರ್ಷಕ ಟ್ರೋಫಿಯನ್ನು ತನ್ನದಾಗಿಸಿಕೊಂಡಿದ್ದು ರನ್ನರಪ್ ತಂಡವಾಗಿ ಎಂ.ಆರ್.ಎಸ್ ತಂಡ 22,222 ನಗದು ಹಾಗೂ ಆಕರ್ಷಕ ಟ್ರೋಪಿಯನ್ನು ಪಡೆದುಕೊಂಡಿದೆ. ಫೈನಲ್ ಪಂದ್ಯದಲ್ಲಿ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿಯನ್ನು ಎಮ್. ಸಿ.ಸಿ ಮುರ್ಡೇಶ್ವರ ತಂಡ ಆಟಗಾರ ಸಚಿನ ಪಡೆದುಕೊಂಡರೆ. ಪಂದ್ಯ ಶ್ರೇಷ್ಠ ಪ್ರಶಸ್ತಿ ಯನ್ನು ಎಮ್. ಸಿ.ಸಿ ಮುರ್ಡೇಶ್ವರ ತಂಡ ಆಟಗಾರ ರೀತಿಶ್ ಪಡೆದುಕೊಂಡರು ಹಾಗೂ ಬೆಸ್ಟ್ ಬ್ಯಾಸ್ಟ್ ಮೆನ್ ಆಗಿ ಎಂ.ಆರ್ ಎಸ್ ತಂಡದ ರಾಘವೇಂದ್ರ ಪಡೆದುಕೊಂಡರೆ ಬೆಸ್ಟ್ ಬೌಲರ್ ಆಗಿ ಆಗಿ ಎಂ.ಆರ್ ಎಸ್ ತಂಡದ ಶೇಖರ್ ಪಡೆದುಕೊಂಡರು ಮತ್ತು ಬೆಸ್ಟ್ ಕೀಪರ್ ಆಗಿ ಎಮ್. ಸಿ.ಸಿ ಮುರ್ಡೇಶ್ವರ ತಂಡ ಆಟಗಾರ ಧರ್ಮರಾಜ ಪಡೆದುಕೊಂಡರು

error: