March 13, 2025

Bhavana Tv

Its Your Channel

ಮೊಗೇರ ಸಮುದಾಯದವರು ನಡೆಸುತ್ತಿರುವ ಧರಣಿ ಸತ್ಯಾಗ್ರಹ 27ನೇ ದಿನಕ್ಕೆ, ಧರಣಿ ನಿರತ ವ್ಯಕ್ತಿಯೋರ್ವರು ಇದ್ದಕ್ಕಿದ್ದಂತೆಯೇ ಕುಸಿದು ಬಿದ್ದು ಆಸ್ಪತ್ರೆಗೆ ದಾಖಲು

ಟ್ಕಳ: ಪರಿಶಿಷ್ಟ ಜಾತಿ ಪ್ರಮಾಣ ಪತ್ರಕ್ಕೆ ಆಗ್ರಹಿಸಿ ಭಟ್ಕಳದ ಮೊಗೇರ ಸಮುದಾಯದವರು ನಡೆಸುತ್ತಿರುವ ಧರಣಿ ಸತ್ಯಾಗ್ರಹ 27ನೇ ದಿನಕ್ಕೆ ಕಾಲಿಟ್ಟಿದ್ದು, ಧರಣಿ ನಿರತ ವ್ಯಕ್ತಿಯೋರ್ವರು ಇದ್ದಕ್ಕಿದ್ದಂತೆಯೇ ಕುಸಿದು ಬಿದ್ದು ಆಸ್ಪತ್ರೆಗೆ ದಾಖಲಾಗಿರುವ ಘಟನೆ ನಡೆದಿದೆ.

ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾದ ತಾಲೂಕಿನ ವ್ಯಕ್ತಿಯನ್ನು ವೆಂಕಟಾಪುರ ನೀಲಕಂಠ ನಿವಾಸಿ ಸುಕ್ರಪ್ಪ ಅಷ್ಟು ಮೊಗೇರ (66) ಎಂದು ಗುರುತಿಸಲಾಗಿದೆ. ನಿವೃತ್ತ ಕೋರ್ಟಿ ಬೆಲೀಫ್‌ರಾಗಿರುವ ಇವರು ಕಳೆದ 27 ದಿನಗಳಿಂದಲೂ ಧರಣಿಯಲ್ಲಿ ಪಾಲ್ಗೊಳ್ಳುತ್ತಿದ್ದು, ಘೋಷಣೆ ಕೂಗುವುದರಲ್ಲಿಯೂ ಮುಂಚೂಣಿಯಲ್ಲಿದ್ದರು, ಸೋಮವಾರ ಸಂಜೆ ಘೋಷಣೆ ಕೂಗುತ್ತಿರುವಾಗಲೇ ಇವರು ಕುಸಿದು ಬಿದ್ದಿದ್ದು, ಕೂಡಲೇ ಅವರನ್ನು ಭಟ್ಕಳ ಸರಕಾರಿ ಆಸ್ಪತ್ರೆಗೆ ಸಾಗಿಸಲಾಯಿತು.
ಸದ್ಯ ಅವರನ್ನು ತುರ್ತು ನಿಗಾ ಘಟಕದಲ್ಲಿ ಇಡಲಾಗಿದ್ದು, ಆರೋಗ್ಯ ಸ್ಥಿರವಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
ಧರಣಿ ನಿರತರು ಕುಸಿದು ಬಿದ್ದಿರುವ ಬಗ್ಗೆ ಮಾಹಿತಿ ಪಡೆದ ಮಾಜಿ ಶಾಸಕ ಮಂಕಾಳ ವೈದ್ಯ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.
ಈ ಸಂದರ್ಭದಲ್ಲಿ ಭಟ್ಕಳ ಮೊಗೇರ ಸಮಾಜದ ಅಧ್ಯಕ್ಷ ಅಣ್ಣಪ್ಪ ಮೊಗೇರ, ನ್ಯಾಯವಾದಿ ನಾಗರಾಜ ಈ.ಎಚ್., ಪುಂಡಲೀಕ ಹೆಬಳೆ, ಶ್ರೀಧರ ಮೊಗೇರ ಮುಂಡಳ್ಳಿ, ಯಾದವ ಮೊಗೇರ, ಕೃಷ್ಣ ಮೊಗೇರ ಹೊನ್ನೆಗದ್ದೆ, ಈಶ್ವರ ಮೊಗೇರ ಗೊರಟೆ, ಗಣೇಶ ಮೊಗೇರ ಮೊದಲಾದವರು ಉಪಸ್ಥಿತರಿದ್ದರು.

error: