
ಭಟ್ಕಳ:- ನಾಲ್ಕು ಗೋಡೆಗಳ ನಡುವೆ ಓದು ಬರಹಗಳನ್ನು ಕಲಿಯುವುದರ ಜೊತೆಗೆ ನಿಸರ್ಗದ ಮಡಿಲಲ್ಲಿ ಒಂದಾಗಿ ಬೆರೆತು ಸಮನ್ವಯದಿಂದ ಬಾಳಲು ಕಲಿಯಬೇಕೆಂಬುದು ಸ್ಕೌಟ್ಸ್ ಮತ್ತು ಗೈಡ್ಸ್ ನ ಉದ್ದೇಶ ಎಂದು ಸರಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಪ್ರಕಾಶ ಶಿರಾಲಿ ಹೇಳಿದರು.
ಅವರು ಭಟ್ಕಳದ ದಿ ನ್ಯೂ ಇಂಗ್ಲೀಷ್ ಪಿಯು ಕಾಲೇಜಿನ ಅಗ್ನಿ ರೋರ‍್ಸ್ ಘಟಕದ ಆಶ್ರಯದಲ್ಲಿ ಆಯೋಜಿಸಿದ್ದ 3 ದಿನಗಳ ಬೇಸಿಗೆ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಾ ಮಕ್ಕಳಲ್ಲಿ ಮನಸ್ಸನ್ನು ವೃದ್ಧಿಸುವ ಮೈಂಡ್ ಗೇಮ್ ಗಳು, ಜನಪದ ಆಟಗಳು, ಕಲೆ ಮತ್ತು ಸಂಸ್ಕೃತಿಯ ಪರಿಚಯ ಇತ್ಯಾದಿಗಳು ಬೇಸಿಗೆ ಶಿಬಿರಗಳು ಒಳಗೊಂಡಿರುತ್ತವೆ. ಮಕ್ಕಳಲ್ಲಿ ದೈಹಿಕ, ಬೌದ್ಧಿಕ, ಸಾಮಾಜಿಕ ಮತ್ತು ದೈವಿಕ ವಿಷಯಗಳಲ್ಲಿ ಅವರಲ್ಲಿರುವ ಆಂತರಿಕ ಶಕ್ತಿಯನ್ನು ವೃದ್ಧಿಸುವ ಮತ್ತು ಅವÀರನ್ನು ಜವಾಬ್ದಾರಿಯುತ ಪ್ರಜೆಗಳನ್ನಾಗಿ ರೂಪಿಸುವಲ್ಲಿ ಸಹಕಾರಿಯಾಗಿದೆ ಎಂದು ಹೇಳಿದರು.
ಭಾರತ ಸ್ಕೌಟ್ಸ್ & ಗೈಡ್ಸ್ , ಉತ್ತರಕನ್ನಡದ ಕಾರ್ಯದರ್ಶಿಗಳಾದ ಬಿ.ಡಿ. ಫರ್ನಾಂಡಿಸ್ ಚಾರಿತ್ರಾö್ಯಭಿವೃದ್ಧಿ ಮತ್ತು ಧ್ವಜ ವಂದನೆಯ ಪ್ರಾಯೋಗಿಕ ತರಬೇತಿಯನ್ನು ನೀಡಿ ಭಾರತ ಸ್ಕೌಟ್ಸ್ & ಗೈಡ್ಸ್ ನ ಮಹತ್ವವನ್ನು ವಿವರಿಸಿದರು.
ಪ್ರಾಂಶುಪಾಲ ವೀರೇಂದ್ರ ಶಾನಭಾಗ ಸ್ವಾಗತಿಸಿದರು. ರೋರ‍್ಸ್ ಕಾರ್ಯಕ್ರಮದ ಅಧಿಕಾರಿ ಶಿವಾನಂದ ಭಟ್ ವಂದಿಸಿದರು. ಉಪನ್ಯಾಸಕಿ ಹೇಮಾ ಪೂಜಾರಿ ನಿರೂಪಿಸಿದರು. ನಂತರ ವಿದ್ಯಾರ್ಥಿಗಳಿಂದ ಶ್ರವiದಾನ ನಡೆಯಿತು.

More Stories
ಜನವರಿ 7 ಭಟ್ಕಳ ತಾಲೂಕ 11ನೆ ಸಾಹಿತ್ಯ ಸಮ್ಮೇಳ
ಭಟ್ಕಳ ತಾಲೂಕು ಕಸಾಪದಿಂದ ರಸಪ್ರಶ್ನೆ ಸ್ಪರ್ಧೆ – ಬಹುಮಾನ ವಿತರಣೆ.
ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲಿ ದೀಪದಾನ ಕಾರ್ಯಕ್ರಮ