March 12, 2025

Bhavana Tv

Its Your Channel

ಭಟ್ಕಳ; ಸ್ವಾಮೀಜಿ ವಿರುದ್ಧ ಅವಹೇಳನಕಾರಿ ಪೋಸ್ಟ್: ಕ್ರಮಕ್ಕೆ ಆಗ್ರಹ

ಭಟ್ಕಳ: ನಾಮಧಾರಿ ಕುಲಗುರುಗಳಾದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಬಗ್ಗೆ ಫೇಕ್ ಐಡಿಗಳ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಪೋಸ್ಟ್ಗಳನ್ನು ಹರಿಬಿಡುತ್ತಿರುವವರು ಹಾಗೂ ಕಮೆಂಟ್‌ಗಳನ್ನು ಹಾಕುತ್ತಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಭಟ್ಕಳ ಸಮಿತಿ ವತಿಯಿಂದ ಡಿವೈಎಸ್‌ಪಿಗೆ ದೂರು ಸಲ್ಲಿಸಲಾಗಿದೆ.

ಇತ್ತೀಚಿಗೆ ಇಲ್ಲಿನ ಸಾರದಹೊಳೆಯಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ ರಾಜಕೀಯದ ಕುರಿತು ಮಾತನಾಡಿದ್ದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಹೇಳಿಕೆಗಳಿಗೆ ಸಂಬAಧಿಸಿದAತೆ ನಮ್ಮ ನಾಮಧಾರಿ ಒಕ್ಕೂಟ, ಪ್ರೀತಿ ಜೈನ್ ಎಂಬ ನಕಲಿ ಫೇಸ್‌ಬುಕ್ ಖಾತೆಗಳಿಂದ ಶ್ರೀಗಳ ಅವಹೇಳನ ಮಾಡುವಂಥ ಪೋಸ್ಟ್ಗಳನ್ನು ಹಾಗೂ ಕಮೆಂಟ್‌ಗಳನ್ನ ಮಾಡಲಾಗಿದೆ.

ಇದರಿಂದ ಸ್ವಾಮೀಜಿ ಅವರ ಭಕ್ತರಿಗೆ, ನಾಮಧಾರಿ ಸಮಾಜದವರ ಮನಸ್ಸಿಗೆ ನೋವಾಗಿದೆ. ಇಂಥ ಪೋಸ್ಟ್ ಮಾಡುವುದನ್ನು ನಾವು ವಿರೋಧಿಸುತ್ತೇವೆ. ಇಂಥ ಕಿಡಿಗೇಡಿಗಳ ವಿರುದ್ಧ ತಕ್ಷಣ ಕ್ರಮ ಕೈಗೊಂಡು ಬಂಧಿಸಬೇಕು ಎಂದು ಅವರು ಆಗ್ರಹಿಸಿದರು. ಈ ಖಾತೆಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರಿನ ಜೊತೆಗೆ ಖಾತೆಗಳಿಂದಾದ ಪೋಸ್ಟ್ ಹಾಗೂ ಕಮೆಂಟ್‌ಗಳ ಸ್ಕ್ರೀನ್ ಶಾಟ್‌ಗಳನ್ನೂ ಡಿವೈಎಸ್‌ಪಿ ಬೆಳ್ಳಿಯಪ್ಪಗೆ ಸಲ್ಲಿಸಲಾಗಿದೆ.

ಭಟ್ಕಳ ನಾಮಧಾರಿ ಸಮಾಜದ ಅಧ್ಯಕ್ಷ ಕೃಷ್ಣ ನಾಯ್ಕ, ಉಪಾಧ್ಯಕ್ಷ ಭವಾನಿ ಶಂಕರ ನಾಯ್ಕ, ಕಾರ್ಯದರ್ಶಿ ಮಾಸ್ತಿ ನಾಯ್ಕ, ಶ್ರೀರಾಮ ಸೇವಾ ಸಮಿತಿ ಅಧ್ಯಕ್ಷ ಶ್ರೀಧರ ನಾಯ್ಕ, ಮುಖಂಡರಾದ ಗೋವಿಂದ ನಾಯ್ಕ, ಗಿರೀಶ ನಾಯ್ಕ, ಕೆ.ಆರ್.ನಾಯ್ಕ, ತಿಮ್ಮಪ್ಪ ನಾಯ್ಕ ಇದ್ದರು.

error: