
ಭಟ್ಕಳ ತಾಲೂಕಿನಲ್ಲಿ ಕ್ರಿಯಾಶೀಲ ಗೆಳೆಯರ ಸಂಘ ವಿವಿಧ ಸಂಘ ಸಂಸ್ಥೆಯೊAದಿಗೆ ಜನರಿಗೆ ಉಪಕಾರಿಯಾಗಿರುವ ಹೃದಯ ರೋಗ ತಪಾಸಣಾ ಶಿಬಿರವನ್ನು ನಡೆಸಿ ಜನತೆಗೆ ಉತ್ತಮ ಸೇವೆ ನೀಡಿದ್ದಾರೆ ಎಂದು ಶಾಸಕ ಸುನೀಲ ನಾಯ್ಕ ಹೇಳಿದರು.


ಅವರು ಭಾನುವಾರದಂದು ಭಟ್ಕಳದ ತಾಲೂಕು ಆಸ್ಪತ್ರೆಯಲ್ಲಿ ಕ್ರಿಯಾಶೀಲ ಗೆಳೆಯರ ಸಂಘ ಇವರ ನೇತ್ರತ್ವದಲ್ಲಿ ಕರ್ನಾಟಕ ಜರ್ನಲಿಸ್ಟ ಯೂನಿಯನ್,ಉ.ಕ. ಜೆ.ಸಿ.ಐ.ಭಟ್ಕಳ ಸಿ.ಟಿ. ಮತ್ತು ಕುಟುಮೇಶ್ವರ ವಿವಿದ್ದೋದೇಶಗಳ ಸೌಹಾರ್ಧ ಸಹಕಾರಿ ಸಂಘ ಮಾವಿನಕುರ್ವೆ ಹಾಗೂ ಭಟ್ಕಳ ಸರಕಾರಿ ಆಸ್ಪತ್ರೆ ಇವರ ಸಹಯೋಗದಲ್ಲಿ ಹಮ್ಮಿಕೊಂಡ ಬೃಹತ್ ಹೃದಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಭಟ್ಕಳದ ಸರಕಾರಿ ಆಸ್ಪತ್ರೆಯಲ್ಲಿರುವ ವೈದ್ಯರು ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡಿ ರಾಜ್ಯದಲ್ಲಿಯೇ ಉತ್ತಮ ಸೇವೆ ನೀಡುತ್ತಿದ್ದಾರೆ. ಗ್ರಾಮೀಣ ಭಾಗದ ಜನರು ರೋಗ ಉಲ್ಬಣಗೊಂಡಾಗಲೇ ಆಸ್ಪತ್ರೆಗೆ ಹೋಗುವ ಪರಿಪಾಠವಿದೆ. ಇಂದಿನ ದಿನಗಳಲ್ಲಿ ಹೃದಯ ರೋಗದಿಂದ ಹಲವಾರು ಯುವಕರ ಮರಣ ಹೊಂದಿರುತ್ತಾರೆ. ಆದ್ದರಿಂದ ನಾವು ರೋಗ ಲಕ್ಷಣ ಕಾಣಿಸಿದಾಗಲೇ ಆಸ್ಪತ್ರೆಗೆ ಹೋಗುವ ಅವಶ್ಯಕತೆ ಇದೆ ಎಂದರು.
ನಮ್ಮೂರಿನವರೇ ಆದ ಮಂಗಳೂರಿನ ಕೆ.ಎಂ.ಸಿ ಆಸ್ಪತ್ರೆಯ ಖ್ಯಾತ ವೈದ್ಯರಾದ ಡಾ ರಾಜೇಶ ಚಿತ್ತರಂಜನ್ ರವರ ವೈದ್ಯರ ತಂಡ ಈ ಶಿಬಿರದಲ್ಲಿ ಭಟ್ಕಳದ ಜನರಿಗೆ ಸೇವೆ ನೀಡಲು ಬಂದಿದ್ದಾರೆ. ಅವರಿಗೆ ಭಟ್ಕಳದ ಜನತೆಯ ಪರವಾಗಿ ಧನ್ಯವಾದ ಹೇಳಿದ ಅವರು ಸರಕಾರ ಮಾಡಬೇಕಾದ ಕೆಲಸವನ್ನು ಈ ಊರಿನ ಕ್ರಿಯಾಶೀಲ ಸಂಘ ಹಾಗೂ ಇತರ ಸಂಘ ಸಂಸ್ಥೆಗಳು ಸೇರಿ ಈ ಆರೋಗ್ಯ ಶಿಬಿರ ನಡೆಸುತ್ತಿದ್ದು, ಇವರಿಗೆ ಸಾರ್ವಜನಿಕರ ಪರವಾಗಿ ಧನ್ಯವಾದ ಎಂದರು.
ಕಾರ್ಯಕ್ರಮದಲ್ಲಿ ಉಪಸ್ಥಿತಿರಿದ್ದ ಮಂಗಳೂರಿನ ಕೆ.ಎಂ.ಸಿ ಆಸ್ಪತ್ರೆಯ ಖ್ಯಾತ ವೈದ್ಯ ಡಾ.ರಾಜೇಶ ಚಿತ್ತರಂಜನ ಮಾತನಾಡಿ ನನ್ನ ಹುಟ್ಟೂರಿನಲ್ಲಿ ಈ ಶಿಬಿರ ನಡೆಸುತ್ತಿರುವುದು ನನಗೆ ಹೆಮ್ಮೆಯಿದೆ. ಇಂದಿನ ಯುವಕರು ತಮ್ಮ ಜೀವನ ಶೈಲಿಯನ್ನು ಬದಲಿಸಿಕೊಂಡು ಪ್ರತಿದಿನ ನಡಿಗೆ, ಉತ್ತಮ ಆಹಾರ, ಹಾಗೂ ವ್ಯಸನ ಮುಕ್ತರಾಗಿ ನಾವು ನಮ್ಮ ಹೃದಯವನ್ನು ಉತ್ತಮ ಇಟ್ಟುಕೊಳ್ಳುವವುದರ ಮೂಲಕ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಉಪವಿಭಾಗಾಧಿಕಾರಿ ಮಮತಾದೇವಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಸವಿತಾ ಕಾಮತ ವಹಿಸಿ ಮಾತನಾಡಿದರು.
ವೇದಿಕೆಯಲ್ಲಿದ್ದ ಕ್ರಿಯಾಶೀಲ ಗೆಳೆಯರ ಸಂಘದ ಅಧ್ಯಕ್ಷ ಭಾಸ್ಕರ ನಾಯ್ಕ ಮಾತನಾಡಿ ಸಂಘದಿAದ ನಡೆದ ವಿವಿಧ ಜನಪರ ರ‍್ಯಕ್ರಮದ ಬಗ್ಗೆ ವಿವರಿಸಿದರು. ವೇದಿಕೆಯಲ್ಲಿ ಡಾ.ಲಕ್ಷಿö??Ãಶ ನಾಯ್ಕ, ಕರ್ನಾಟಕ ಜರ್ನಲಿಸ್ಟ ಯೂನಿಯನ್‌ನ ಜಿಲ್ಲಾದ್ಯಕ್ಷ ಮನಮೋಹನ ನಾಯ್ಕ, ಕುಟುಮೇಶ್ಚರ ಸೌಹರ್ಧ ಸಂಘದ ಅಧ್ಯಕ್ಷ ರಾಮಾ ಖಾರ್ವಿ, ಜೆ.ಸಿ.ಐ ಭಟ್ಕಳ ಸಿಟಿ ಅಧ್ಯಕ್ಷ ಪಾಂಡುರAಗ ನಾಯ್ಕ, ಉಪಸ್ಥಿತರಿದ್ದರು.
ವೇದಿಕೆಯಲ್ಲಿದ್ದ ಮಂಗಳೂರು ಕೆ.ಎಂ.ಸಿ ಆಸ್ಪತ್ರೆಯ ವೈದ್ಯ ಡಾ.ರಾಜೇಶ ಚಿತ್ತರಂಜನ ಹಾಗೂ ತಾಲೂಕು ಆಸ್ಪತ್ರೆಯ ವೈದ್ಯಾಧಿಕಾರಿ ಡಾ ಸವಿತಾ ಕಾಮತ ಇವರನ್ನು ಸಂಘಟಕರ ಪರವಾಗಿ ಸನ್ಮಾನಿಸಲಾಯುತು.
ಕುಮಾರಿ ಸಿಂಚನಾ ಈಶ್ವರ ನಾಯ್ಕ ಪ್ರಾರ್ಥನೆ ಹಾಡಿದರು. ಪ್ರಾರಂಭದಲ್ಲಿ ಕ್ರಿಯಾಶೀಲ ಸಂಘ ಕಾರ್ಯದರ್ಶಿ ಶ್ರೀಕಾಂತ ನಾಯ್ಕ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಭವಾನಿ ಶಂಕರ ನಾಯ್ಕ ವಂದಿಸಿದರು. ಕಾರ್ಯಕ್ರಮವನ್ನು ರಮೇಶ ಖಾರ್ವಿ ನಿರ್ವಹಿಸಿದರು.
220 ಕ್ಕೂ ಅಧಿಕ ಮಂದಿ ಶಿಬಿರದ ಪ್ರಯೋಜನ ಪಡೆದರು. 211 ಹೆಚ್ಚು ಜನರು ಇಸಿಜಿ ಪರೀಕ್ಷೆಗಳನ್ನು 35 ಜನರು ಇಕೋ ಪರೀಕ್ಷೆ ಹಾಗೂ 32 ಜನರು ಟಿ.ಎಂ. ಟಿ. ಪರೀಕ್ಷೆಗಳನ್ನು ಮಾಡಿಕೊಂಡರು. ಬೆಳಿಗ್ಗೆ 10 ಗಂಟೆಗೆ ಪ್ರಾರಂಭವಾದ ಈ ಶಿಬಿರ ಸಂಜೆ 5 ಗಂಟೆಯವರೆಗೆ ನಡೆದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು.

More Stories
ಜನವರಿ 7 ಭಟ್ಕಳ ತಾಲೂಕ 11ನೆ ಸಾಹಿತ್ಯ ಸಮ್ಮೇಳ
ಭಟ್ಕಳ ತಾಲೂಕು ಕಸಾಪದಿಂದ ರಸಪ್ರಶ್ನೆ ಸ್ಪರ್ಧೆ – ಬಹುಮಾನ ವಿತರಣೆ.
ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲಿ ದೀಪದಾನ ಕಾರ್ಯಕ್ರಮ