March 12, 2025

Bhavana Tv

Its Your Channel

ರಾಜ್ಯದಲ್ಲಿನ ಕಮಿಷನ್ ಹಗರಣದ ತನಿಖೆ ದಾರಿ ತಪ್ಪಿಸಲು ಧರ್ಮ, ಕೋಮು ದ್ವೇಷದ ಹೇಳಿಕೆಗೆ ಸರಕಾರ ಪುಷ್ಠಿ ನೀಡುತ್ತಿದೆ- ತಾಹೀರ ಹುಸೇನ್ ಗಂಭೀರ ಆರೋಪ

ಭಟ್ಕಳ: ರಾಜ್ಯ ಸರಕಾರದ ಮೇಲೆ ಇತ್ತೀಚಿಗೆ ಬಹುದೊಡ್ಡ ಭ್ರಷ್ಟಾಚಾರದ ಆರೋಪ ಬಂದಿದ್ದು, ಈಗಾಗಲೇ 40 % ಕಮಿಶನ್ ಪಡೆದುಕೊಳ್ಳುವ ಸರಕಾರ ಎಂಬ ಕುಖ್ಯಾತಿ ಸಹ ಬಂದಿದೆ. ಈ ಆರೋಪದ ಹಿನ್ನೆಲೆ ಸಚಿವ ಈಶ್ವರಪ್ಪ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಈ ಪ್ರಕರಣದ ತನಿಖೆ ಹಾಗೂ ಇದರ ಮಾಹಿತಿಯನ್ನು ದಾರಿ ತಪ್ಪಿಸುವ ಹುನ್ನಾರದ ಜೊತೆಗೆ ಕೋಮು ದ್ವೇಷ ಹರಡಿಸುವ ಹೇಳಿಕೆಗಳು, ಕೆಲಸಗಳು ರಾಜ್ಯದಲ್ಲಿ ನಡೆಯುತ್ತಿದೆ. ಈ ಹಿನ್ನೆಲೆ ವೆಲ್ಪೇರ್ ಪಾರ್ಟಿ ಅಫ್ ಇಂಡಿಯಾ ಇದನ್ನು ತೀವ್ರವಾಗಿ ಖಂಡಿಸುತ್ತದೆ ಎಂದು ವೆಲ್ಪೇರ್ ಪಾರ್ಟಿ ಆಪ್ ಇಂಡಿಯಾದ ರಾಜ್ಯಾಧ್ಯಕ್ಷ ಅಡ್ವೇಕೇಟ್ ತಾಹೀರ ಹುಸೇನ್ ಹೇಳಿದರು.

ಅವರು ಸೋಮವಾರದಂದು ಭಟ್ಕಳ ವೆಲ್ಪೇರ್ ಪಾರ್ಟಿ ಆಪ್ ಇಂಡಿಯಾದ ತಾಲೂಕಾ ಕಚೇರಿಯಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. ಈ ಕಮಿಷನ್ ಆರೋಪವು ಕೇವಲ ಈಶ್ವರಪ್ಪ ಅವರ ಮೇಲೆ ಮಾತ್ರ ಅಲ್ಲದೇ ಸಚಿವ ಡಾ. ಸುಧಾಕರ್, ಗೋವಿಂದ ಕಾರಜೋಳ ಅವರ ಹೆಸರು ಸಹ ಕೇಳಿ ಬಂದಿದೆ. ಇನ್ನು ರಾಜ್ಯದಲ್ಲಿ ಪಿಎಸೈ ಪರೀಕ್ಷೆ, ಪಿಡಬ್ಲೂಡಿ ಪರೀಕ್ಷೆ ಹಾಗೂ ಎಫ್‌ಡಿಎ ಪರೀಕ್ಷೆಯ ವಿಚಾರದಲ್ಲಿಯೂ ಸಹ ಬಹುದೊಡ್ಡ ಹಗರಣ ನಡೆಯುತ್ತಿದೆ ಎಂಬ ಮಾಹಿತಿ ಕೇಳಿ ಬರುತ್ತಿದೆ. ಹಾಗೂ ಈಗಾಗಲೇ ಈ ರಾಜ್ಯ ಸರಕಾರದ ಅವಧಿಯಲ್ಲಿ ಹಗರಣ ಪಟ್ಟಿಯೇ ಬೆಳೆಯುತ್ತಿದೆ.
ಗದಗ ಜಿಲ್ಲೆಯ ಶಿರಹಟ್ಟಿಯ ಜಗದ್ಗುರುಗಳಾದ ಶ್ರೀ ದಿಂಗಾಲೇಶ್ವರ ಸ್ವಾಮೀಗಳು ಸಹ ಹೇಳಿಕೆ ನೀಡಿದ್ದು ಮಠಕ್ಕೆ 2 ಕೋಟಿ ನೇರವಾಗಿ ಬರುತ್ತಿಲ್ಲ ಈ ಬಗ್ಗೆ ಸಾಕ್ಷಿ, ದಾಖಲೆ ಸಹ ನೀಡುವುದಾಗಿ ಹೇಳಿದ್ದು ಸದ್ಯ ಕೇಳಿ ಬರುತ್ತಿರುವ ಭ್ರಷ್ಟಾಚಾರದ ವಿಚಾರದಲ್ಲಿ ಸತ್ಯಾಸತ್ಯತೆಗಳಿವೆ ಎಂಬುದು ಸಾಬೀತಾಗುತ್ತಿದ್ದರು ಸಹ ರಾಜ್ಯ ಸರಕಾರ ಇವೆಲ್ಲವನ್ನು ನೋಡಿ ಸಹ ಮೌನವಾಗಿರುವುದು ಖಂಡನಾರ್ಹವಾಗಿದೆ ಎಂದರು.
ರಾಜ್ಯ ಸರಕಾರ ಈ ಎಲ್ಲಾ ಬೆಳವಣಿಗೆಗಳನ್ನು ಮುಚ್ಚಿ ಹಾಕಲು ಸತತ ಪ್ರಯತ್ನ ನಡೆಸುತ್ತಿದ್ದು, ಧರ್ಮ, ಕೋಮು ಸಂಬAಧಿತ ಹೇಳಿಕೆ ಕೇಳಿ ಬಂದಿದ್ದರು ಸಹ ಅದಕ್ಕೂ ಯಾವುದೇ ಪ್ರತಿಕ್ರಿಯೆ ಅಥವಾ ಕ್ರಮಕ್ಕೆ ಮುಂದಾಗದಿರುವದಕ್ಕೆ ವೆಲ್ಪೇರ್ ಪಾರ್ಟಿ ಆಪ್ ಇಂಡಿಯಾ ಖಂಡಿಸುತ್ತದೆ ಎಂದರು.
ಕೋವಿಡ್ ಮಹಾಮಾರಿಯ ಬಳಿಕ ರಾಜ್ಯ ಆರ್ಥಿಕತೆಯಲ್ಲಿ ಸುಧಾರಣೆ ಆಗುತ್ತಿರುವ ವೇಳೆಯಲ್ಲಿ ಆರ್ಥಿಕ ನಿರ್ಭಂಧ ಹಾಕುವ ಕುರಿತು ಶ್ರೀ ರಾಮ ಸೇನೆ ಸಂಸ್ಥಾಪಕ ಪ್ರಮೋದ ಮುತಾಲಿಕ್ ಅವರು ಮಾತನಾಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ. ಅದರಲ್ಲೂ ಸಹ ನಿರ್ದಿಷ್ಟ ಸಮುದಾಯಕ್ಕೆ ಆರ್ಥಿಕ ನಿರ್ಭಂದ ಹೇರುವ ಹೇಳಿಕೆಯನ್ನು ರಾಜ್ಯದಲ್ಲಿ ನೀಡಿದ್ದಾರೆ. ಹಿಂದುಗಳು ಮುಸ್ಲಿಂರ ಚಿನ್ನದ ಅಂಗಡಿಯಲ್ಲಿ ಚಿನ್ನವನ್ನು ಖರೀದಿ ಮಾಡಬಾರದು ಎಂಬುದು ಮುತಾಲಿಕ ಅವರ ಮುರ್ಖತನದ ಹೇಳಿಕೆಯಾಗಿದೆ. ಕಾರಣ ಇದರಿಂದ ನಷ್ಟ ರಾಜ್ಯ ಸರಕಾರದ ಬೊಕ್ಕಸಕ್ಕೆ ಆಗುತ್ತಿದೆ. ರಾಜ್ಯದಲ್ಲಿಯ ಬಹುದೊಡ್ಡ ದೊಡ್ಡ ವ್ಯಾಪಾರಗಳು ಧರ್ಮದ, ಕೋಮುವಿನ ಆಧಾರದಲ್ಲಿ ವಿಂಗಡಣೆ ಮಾಡುತ್ತಾ ಹೋದರೆ ಸರಕಾರಕ್ಕೆ ಬರಬೇಕಾದ ತೆರಿಗೆ ಸಹ ಬಾರದೇ ಇರಬಹುದು. ಈಗಾಗಲೇ ಹಣದುಬ್ಬರ ಶೇ. 6.95 ಕ್ಕೆ ಏರಿಕೆಯಾಗಿದ್ದರೆ ಅಗತ್ಯ ವಸ್ತುಗಳ ಬೆಲೆ ಏರಿಕೆಯೂ ಸಹ ಶೇ. 7.68 ಇದ್ದು ದಿನೇ ದಿನೇ ಆರ್ಥಿಕ ಸಂಕಷ್ಟದಲ್ಲಿರುವ ವೇಳೆ ಸಂಘಟನೆಗಳ ಪ್ರಮುಖರು ಈ ರೀತಿಯ ಹೇಳಿಕೆ ನೀಡುವುದು ಸರಿಯಲ್ಲ ಎಂದರು.
ರಾಜ್ಯ ಸರಕಾರವು ತನ್ನ ಜವಾಬ್ದಾರಿಯಂತೆ ಈ ರೀತಿಯ ಹೇಳಿಕೆ ಅಥವಾ ಜನರಿಗೆ ಕರೆ ನೀಡುವವರ ಮೇಲೆ ಕಠಿಣ ಕ್ರಮಕ್ಕೆ ಮುಂದಾಗಬೇಕು. ಅದೇ ರೀತಿ ಜನರಿಗೆ ಸರಕಾರ ಈ ರೀತಿಯ ಕರೆ ಅಥವಾ ಹೇಳಿಕೆಗೆ ಕಿವಿಕೊಡಬೇಡಿ ಎಂಬ ಅಶ್ವಾಸನೆ ನೀಡಬೇಕಿದೆ. ಆದರೆ ಇವೆಲ್ಲವನ್ನು ಗಮನಿಸದೇ ಮೌನವಾಗಿದ್ದು ಒಂದು ರೀತಿಯಲ್ಲಿ ಬೆಂಬಲಸುವ ಕೆಲಸಕ್ಕೆ ಮುಂದಾಗಿರುವುದು ಕಂಡು ಬರುತ್ತಿದೆ. ಒಂದು ಕರೆ ಕೋಮು ದ್ವೇಷ ಹಾಗೂ ರಾಜ್ಯ ಆರ್ಥಿಕ ಸಂಕಷ್ಟವನ್ನು ಅರಿತು ಅನಾವಶ್ಯಕ ಹೇಳಿಕೆ ನೀಡುವವರ ಮೇಎ ಕ್ರಮಕ್ಕೆ ಮುಂದಾಗಬೇಕಿದೆ ಎಂದರು.
ಇನ್ನು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಕಾರಣ ಬಿಜೆಪಿಯ ಕಾರ್ಯಕರ್ತರೇ ಸ್ವತಃ ಅವರದ್ದೇ ಪಕ್ಷದಿಂದ ಆಯ್ಕೆಯಾಗಿರುವ ಸರಕಾರದ ಗೃಹ ಸಚಿವರು ಅವರ ಸ್ಥಾನಕ್ಕೆ ಅರ್ಹರಲ್ಲ ಎಂಬುದನ್ನು ಹೇಳುವ ಪರಿಸ್ಥಿತಿ ಬಂದೊದಗಿದೆ. ಇದರಿಂದ ಗೃಹ ಮಂತ್ರಿಗಳು ಅವರ ಕೆಲಸ ನಡೆಸುವಲ್ಲಿ ವಿಫಲರಾಗಿದ್ದಾರೆ. ಸದ್ಯ ರಾಜ್ಯದಲ್ಲಿ ಉತ್ತರ ಭಾರತದಲ್ಲಿ ಈ ಹಿಂದೆ ನಡೆಯುತ್ತಿದ್ದ ವಿಕೃತಿ, ಸಮಾಜ ವಿರೋಧಿ ನಡೆಯುತ್ತಿರುವುದು. ಈ ಕಾರಣಕ್ಕೆ ಗೃಹ ಮಂತ್ರಿಗಳ ತಕ್ಷಣ ವಜಾ ಮಾಡಬೇಕೆಂದು ಆಗ್ರಹಿಸಿದರು.
ಇನ್ನು ನಮ್ಮ ತಾಲೂಕಿನಲ್ಲಿನ ಅಂತರಾಷ್ಟಿçÃಯ ವಿಶ್ವ ಮಾನ್ಯತೆ ಪಡೆದ ಪ್ರವಾಸಿ ತಾಣದಲ್ಲಿ ಮೂಲಸೌಕರ್ಯದ ಕೊರತೆ ಎದ್ದು ಕಾಣುತ್ತಿದೆ. ಜನರೇ ತಮ್ಮ ಸ್ವಂತ ಹಣದಲ್ಲಿ ಕುಡಿಯುವ ನೀರಿನ ಸರಬರಾಜು ಮಾಡಿಕೊಳ್ಳುವ ಹಚಿತದಲ್ಲಿ ಮುರುಡೇಶ್ವರ ಪರಿಸ್ಥಿತಿ ಎದುರಾಗಿದೆ. ಕಳೆದ 4-5 ತಿಂಗಳಿನಿAದ ಕಸ ವಿಲೇವಾರಿಯಾಗಿದೇ ಇರುವ ಬಗ್ಗೆ ಅಲ್ಲಿನ ಸ್ಥಳಿಯರೇ ವೆಲ್ಪೇರ್ ಪಾರ್ಟಿ ಮುಖಂಡರು ಭೇಟಿ ನೀಡಿದ ಸಂಧರ್ಭದಲ್ಲಿ ಹೇಳಿಕೆ ನೀಡಿದ್ದಾರೆ. ಇಲ್ಲಿನ ಸಂಸದರು, ಶಾಸಕರು ಹಾಗೂ ಸ್ಥಳಿಯ ಗ್ರಾಮ ಪಂಚಾಯತ ಅಧ್ಯಕ್ಷರು ಇಲ್ಲಿನ ಸಮಸ್ಯೆಯ ಪರಿಹಾರಕ್ಕೆ ಸ್ಪಂದಿಸುತ್ತಿಲ್ಲ. ಒಂದು ತಿಂಗಳ ಒಳಗೆ ಇಲ್ಲಿನ ಮೂಲ ಸೌಕರ್ಯದ ವ್ಯವಸ್ಥೆ ಕಲ್ಪಿಸದಿದ್ದಲ್ಲಿ ವೆಲ್ಪೇರ್ ಪಾರ್ಟಿ ಆಫ್ ಇಂಡಿಯಾ ಉಗ್ರ ಪ್ರತಿಭಟನೆ ನಡೆಸಲು ಸಿದ್ದರಿದ್ದೇವೆ ಎಂದರು.
ಈ ಸಂಧರ್ಭದಲ್ಲಿ ಉ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆಸೀಫ್ ಶೇಕ್, ರಾಜ್ಯ ಮಾಧ್ಯಮ ಕಾರ್ಯದರ್ಶಿ ಅಜೀಜ್ ಜಾಗಿರ್ದಾರ್, ಪಕ್ಷದ ಮುಖಂಡರಾದ ಅಬ್ದುಲ ಜಬ್ಬಾರ್ ಅಸದಿ ಮುಂತಾದವರು ಉಪಸ್ಥಿತರಿದ್ದರು.

error: