March 15, 2025

Bhavana Tv

Its Your Channel

ಕಾಯ್ಕಿಣಿ ಮಠದಹಿತ್ಲ ಬಳಿ ಮನೆ ಕಳ್ಳತನ; ಮುರ್ಡೇಶ್ವರ ಠಾಣಿಯಲ್ಲಿ ಪ್ರಕರಣ ದಾಖಲು

ಭಟ್ಕಳ:ತಾಲ್ಲೂಕಿನ ಕಾಯ್ಕಿಣಿ ಮಠದಹಿತ್ಲ ನಲ್ಲಿ ಸೋಮವಾರ ರಾತ್ರಿ ಮನೆ ಹಿಂಬದಿಯ ಮೇಲ್ಚಾವಣಿಯ ಹಂಚು ಸರಿಸಿ ಕೋಣೆಯ ಒಳನುಗ್ಗಿದ ಕಳ್ಳರು ಪ್ಲಾಸ್ಟಿಕ್ ಬುಟ್ಟಿಯಲ್ಲಿ ಇಟ್ಟಿದ್ದ ಗೋದ್ರೆಜ್ ಕಪಾಟಿನ ಚಾವಿ ಉಪಯೋಗಿಸಿ ಚಿನ್ನಾಭರಣ,ಹಾಗೂ ನಗದು ದೋಚಿ ಪರಾರಿಯಾದ ಘಟನೆ ನಡೆದಿದೆ.
೨ ಲಕ್ಷ್ಮೀ ಸರ, ೪ ಉಂಗುರ,೧ ಚೈನ್,೨೫೦೦೦ ನಗದು ಹಣ,೨ ಪಾನ್ ಕಾರ್ಡ,೨ ಆಧಾರ್ ಕಾರ್ಡ, ೩ ಎಟಿಎಮ್ ಕಾರ್ಡ,ಚಾಲನ ಪ್ರಮಾಣ ಪತ್ರ,ಮತ್ತು ಬೈಕ್ ದಾಖಲಾತಿಗಳು ದೋಚಿ ಪರಾರಿಯಾಗಿದ್ದಾರೆ.
೧,೧೭,೫೦೦ ರೂಪಾಯಿ ೪೭ ಗ್ರಾಂ ಬಂಗಾರ ಆಭರಣಗಳು ಆಗಿದ್ದು,ಹಾಗೂ ನಗದು ೨೫೦೦೦ ಸೇರಿ ಒಟ್ಟು ೧೪೨೫೦೦ ಇವುಗಳ ಒಟ್ಟೂ ಕಿಮ್ಮತ್ತು ಎಂದು ತಿಳಿಸಲಾಗಿದೆ. 
ಈ ಕುರಿತು ಮುಡೇಶ್ವರ ಠಾಣೆಯಲ್ಲಿ ದುರ್ಗಮ್ಮ ಜಟ್ಟಾ ಮೊಗೇರ್ ದೂರು ನೀಡಿದ್ದು ದೂರನ್ನು ಸ್ವೀಕರಿಸಿದ ಮುರ್ಡೇಶ್ವರ ಠಾಣೆಯ ಪಿಎಸ್‌ಐ ದೇವರಾಜ್ ಎಸ್ ಬಿರಾದಾರ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದು ಕಾರವಾರದಿಂದ ಶ್ವಾನ ದಳ ಹಾಗೂ ಬೆರಳಚ್ಚು ತಜ್ಞರು ಆಗಮಿಸಿ ಮಾಹಿತಿಯನ್ನು ಕಲೆ ಹಾಕಿದ್ದಾರೆ.

error: