
ಭಟ್ಕಳ: ಸ್ವಾತಿ ಪಾಲಿಕ್ಲಿನಿಕ್ ಹಾಗೂ ಸುಷ್ಮಾ ಲ್ಯಾಬೋರೇಟರಿ ಇವರ ಜಂಟಿ ಆಶ್ರಯದಲ್ಲಿ ಕಾರ್ಮಿಕ ದಿನಾಚರಣೆಯ ಪ್ರಯುಕ್ತ ಭಟ್ಕಳ ಸುತ್ತಮುತ್ತಲಿನ ಆಟೋ ಚಾಲಕರಿಗೆ ಮೇ 01 ರಿಂದ 31 ರವರೆಗೆ ಉಚಿತ ತಪಾಸಣೆ ರಕ್ತದೊತ್ತಡ ಸಕ್ಕರೆ ಖಾಯಿಲೆ ಪರೀಕ್ಷೆಯು ಇಲ್ಲಿನ ಸ್ವಾತಿ ಪಾಲಿಕ್ಲಿನಿಕ್ & ಸುಷ್ಮಾ ಲ್ಯಾಬೋರೇಟರಿಯಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಸರಕಾರಿ ಆಸ್ಪತ್ರೆಯ ಎಲುಬು ತಜ್ಞ ಡಾ. ಜನಾರ್ಧನ ಮೊಗೇರ ಚಾಲನೆ ನೀಡಿದರು ನಂತರ ಮಾತನಾಡಿ ಕಾರ್ಮಿಕ ದಿನಾಚರಣೆಯೊಂದು ಅರ್ಥಪೂರ್ಣ ದಿನವಾಗಿದ್ದು, ಈ ದಿನವನ್ನು ಕಾರ್ಮಿಕರಿಗಾಗಿಯೇ ಮುಡಿಪಾಗಿಟ್ಟು ಅವರಿಗೆ ಗೌರವಿಸಬೇಕು. ನಮ್ಮ ದೇಶದಲ್ಲಿ ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗ ಹಾಗೂ ಪತ್ರಿಕಾರಂಗ ಇದರ ಜತೆಗೆ ದೇಶದ ಅಭಿವೃದ್ಧಿಗೆ ಕಾರ್ಮಿಕರಿಗೂ ಒಂದು ಉತ್ತಮ ಸ್ಥಾನ ಮಾನ ಸಿಗಬೇಕು. ಅವರ ಸೇವೆ ಕೂಡ ಅತ್ಯಂತ ಪ್ರಮುಖವಾಗಿದ್ದು, ಆದರೆ ಇಂದು ದೇಶದಲ್ಲಿ ಕಾರ್ಮಿಕರನ್ನು ಎಷ್ಟರ ಮಟ್ಟಿಗೆ ಅವರ ಕೆಲಸವನ್ನು ಗೌರವಿಸುತ್ತಿದ್ದೇವೆ ಎನ್ನುವುದನ್ನು ನಾವು ಪ್ರಶ್ನಿಸಿಕೊಳ್ಳಬೇಕಿದೆ. ಎಲ್ಲಾ ವರ್ಗದ ಕಾರ್ಮಿಕರು ಸಂಬಳಕ್ಕಾಗಿ ದುಡಿಯುತ್ತಾರೆ ಜೊತೆಗೆ ಅವರ ಕೆಲಸಕ್ಕೊಂದು ಮಾನ್ಯತೆ ಸಿಗಬೇಕು. ದೇಶದ ಅಭಿವೃದ್ದಿ ಬೆಳವಣಿಗೆಯಲ್ಲಿ ಕಾರ್ಮಿಕರ ಪಾತ್ರ ಗಣನೀಯವಾದುದು. ಕಾರ್ಮಿಕರ ಸ್ಥಾನಮಾನವು ಸಹ ವೃತ್ತಿರಂಗದ ಕೆಲಸಗಾರರಂತೆಯೇ ನಡೆಸಿಕೊಳ್ಳಬೇಕಿರುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಆಟೋ ರಿಕ್ಷಾ ಚಾಲಕ ಮಾಲಕರ ಸಂಘದ ಜಿಲ್ಲಾಧ್ಯಕ್ಷ ಕೃಷ್ಣ ನಾಯ್ಕ ಆಸರಕೇರಿ ಮಾತನಾಡಿ ಪ್ರತಿಯೊಬ್ಬರಿಗೂ ಸಹಾಯದ ವಿಚಾರದಲ್ಲಿ ನೆನಪು ಮಾಡಿಕೊಳ್ಳುವುದು ಎಂದರೆ ಆಟೋ ಚಾಲಕರಾಗಿದ್ದಾರೆ. ಕಟ್ಟಕಡೆಯ ವ್ಯಕ್ತಿಯನ್ನು ತಲುಪಬಲ್ಲ ನಿಜವಾದ ಕಾರ್ಮಿಕ ಎಂದರೆ ಅವರೇ ಆಟೋ ಚಾಲಕರು. ಇಂತಹ ಸಂದರ್ಬದಲ್ಲಿಯೂ ಸಹ ಆಟೋ ಚಾಲಕರ ಆರೋಗ್ಯದ ಬಗ್ಗೆ ಕಾಳಜಿ ಹೊತ್ತು ಅವರಿಗಾಗಿ ಉಚಿತ ತಪಾಸಣೆ ರಕ್ತದೊತ್ತಡ ಸಕ್ಕರೆ ಖಾಯಿಲೆ ಪರೀಕ್ಷೆಯನ್ನು ನಡೆಸಿರುವುದು ಸಂತಸವಾಗುತ್ತದೆ. ನಾವುಗಳು ಇದರ ಸದುಪಯೋಗ ಪಡೆದುಕೊಳ್ಳಬೇಕಾಗಿದೆ ಎಂದರು.
ಸ್ವಾತಿ ಪಾಲಿಕ್ಲಿನಿಕ್‌ನ ಡಾ. ಶೈಲೇಶ ಅಧ್ಯಕ್ಷತೆ ವಹಿಸಿ ಮಾತನಾಡಿ ಕರಾವಳಿ ಭಾಗದ ಆಟೋ ರಿಕ್ಷಾ ಚಾಲಕರು ಬಹುಬೇಗ ಇಷ್ಟವಾಗುತ್ತಾರೆ ಕಾರಣ ಎಲ್ಲರನ್ನು ಅವರು ಅತ್ಯಂತ ಪ್ರೀತಿಯಿಂದ ನೋಡುತ್ತಾರೆ. ಇಂತಹ ಶ್ರಮಜೀವಿಗಳಿಗೆ ಅವರ ಅರೋಗ್ಯದ ಬಗ್ಗೆ ಕಾಳಜಿ ನಾವು ಮಾಡಬೇಕೆಂಬ ಆಸೆ ಇತ್ತು. ಅದರಂತೆ ಈ ಕಾರ್ಯಕ್ರಮವನ್ನು ಆಯೋಜಿಸಿದ್ದೇವೆ ಇದರ ಉಪಯುಕ್ತತೆಯನ್ನು ಆಟೋ ರಿಕ್ಷಾ ಚಾಲಕರು ಪಡೆದುಕೊಂಡು ಆರೋಗ್ಯದ ಕಾಳಜಿ ಹೊಂದಬೇಕು ಎಂಬುದು ನನ್ನ ಉದ್ದೇಶವಾಗಿದೆ ಎಂದರು.
ಈ ಸಂಧರ್ಭದಲ್ಲಿ ನ್ಯಾಯವಾದಿ ಆರ್.ಜಿ. ನಾಯ್ಕ, ಪತ್ರಕರ್ತ ವಿಷ್ಣು ದೇವಾಡಿಗ ಸುಷ್ಮಾ ಲ್ಯಾಬೋರೇಟರಿ ಮಾಲೀಕರಾದ ನಾರಾಯಣ ಸೇರಿದಂತೆ ಇತರರು ಇದ್ದರು.
ನಂತರ ಇಲ್ಲಿನ ಆಟೋ ರಿಕ್ಷಾ ಚಾಲಕರಿಗೆ ರಕ್ತದೊತ್ತಡ ಸಕ್ಕರೆ ಖಾಯಿಲೆ ಪರೀಕ್ಷೆಯನ್ನು ಮಾಡಲಾಯಿತು.

More Stories
ಜನವರಿ 7 ಭಟ್ಕಳ ತಾಲೂಕ 11ನೆ ಸಾಹಿತ್ಯ ಸಮ್ಮೇಳ
ಭಟ್ಕಳ ತಾಲೂಕು ಕಸಾಪದಿಂದ ರಸಪ್ರಶ್ನೆ ಸ್ಪರ್ಧೆ – ಬಹುಮಾನ ವಿತರಣೆ.
ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲಿ ದೀಪದಾನ ಕಾರ್ಯಕ್ರಮ