March 13, 2025

Bhavana Tv

Its Your Channel

ಭಟ್ಕಳ ತಾಲೂಕಿನಲ್ಲಿ ಸುರಿದ ಭಾರೀ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತ.

ಭಟ್ಕಳ: ಕಳೆದ ಕೆಲವು ದಿನಗಳಿಂದ ಭಾರೀ ಸೆಖೆಗೆ ಕಾರಣವಾಗಿದ್ದ ವಾತಾವರಣ ಬುಧವಾರ ಬೆಳಿಗ್ಗೆಯಿಂದ ಭಾರೀ ಮಳೆ ಸುರಿಯುವ ಮೂಲಕ ತಂಪಾಗಿದೆ. ಬೆಳಿಗ್ಗೆಯಿಂದಲೇ ಸುರಿಯುತ್ತಿದ್ದ ಮಳೆಯು ಮಧ್ಯಾಹ್ನವಾಗುತ್ತಲೇ ಜೋರಾಗಿ ಸುರಿದು ಸಂಪೂರ್ಣ ವಾತಾವರಣವನ್ನೇ ತಂಪಾಗಿಸಿದ್ದಲ್ಲದೇ ಅನೇಕ ಕಡೆಗಳಲ್ಲಿ ನೀರು ನಿಂತು ಜನರು ಓಡಾಡುವುದಕ್ಕೆ ತೊಂದರೆ ಪಡುವಂತಾಯಿತು.

ತಾಲೂಕಿನಾದ್ಯಂತ ಮಳೆಯು ಜೋರಾಗಿಯೇ ಸುರಿದಿದ್ದು ಭೂಮಿಯಲ್ಲಿ ನೀರು ಇಂಗುವಷ್ಟು ಮಳೆ ಸುರಿದಿದೆ. ಹಲವು ಕಡೆಗಳಲ್ಲಿ ತಗ್ಗು ಪ್ರದೇಶದಲ್ಲಿ ನೀರು ನಿಂತು ತೊಂದರೆಯಾದರೆ, ನಗರ ಭಾಗದಲ್ಲಿ ರಸ್ತೆ ಪಕ್ಕದಲ್ಲಿ ನೀರು ನಿಂತು ಜನ, ವಾಹನ ಓಡಾಟಕ್ಕೂ ತೊಂದರೆಯಾಯಿತು.
ಬೆಳಿಗ್ಗೆಯಿಂದ ಆರಂಭವಾದ ಮಳೆಯು ಸ್ವಲ್ಪ ಹೊತ್ತು ಬಿಡುವುಕೊಟ್ಟಿದ್ದು ಕಚೇರಿಗೆ ಹೋಗುವವರು, ವಿವಿಧ ಕೆಲಗಳಿಗೆ ಹೋಗುವವರು ತಮ್ಮ ತಮ್ಮ ಕೆಲಸಗಳಿಗೆ ಹೋದರೆ ಕೆಲವು ಕಚೇರಿಗೆ, ಬ್ಯಾಂಕುಗಳಿಗೆ ಕೆಲಸಕ್ಕೆ ಹೋದವರು ತಾಸುಗಟ್ಟಲ್ಲೆ ಅಲ್ಲಿಯೇ ಕಾಯುವಂತಾಯಿತು. ಎರಡು ಗಂಟೆಯ ನಂತರ ಮಳೆಯ ಅಬ್ಬರ ಸ್ವಲ್ಪ ಕಡಿಮೆಯಾಗಿದ್ದು ಜನರು ಹೊರಗಡೆ ತಿರುಗಾಡುವಂತಾಯಿತು. ಒಟ್ಟಾರೆ ಭಟ್ಕಳದಲ್ಲಿ ಪ್ರಥಮ ಮಳೆಯೇ ಜೋರಾಗಿ ಬಂದಿದ್ದು ಕೃಷಿಕರಿಗೆ ಇದು ಬೀಜ ಬಿತ್ತಲು ಅನುಕೂಲವಾಯಿತು.

error: