March 16, 2025

Bhavana Tv

Its Your Channel

ಟ್ಯಾಂಕರ್ ಮತ್ತು ಆಕ್ಟಿವಾ ನಡುವೆ ಅಪಘಾತ; ಆಕ್ಟಿವಾ ಸವಾರ ಸ್ಥಳದಲ್ಲೇ ಸಾವು

ಭಟ್ಕಳ:ಟ್ಯಾಂಕರ್ ಮತ್ತು ಆಕ್ಟಿವಾ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಆಕ್ಟಿವಾ ಸವಾರ ಸ್ಥಳದಲ್ಲೇ ಮೃತಪಟ್ಟಿದ ಘಟನೆ ಭಟ್ಕಳ ರಾಷ್ಟ್ರೀಯ ಹೆದ್ದಾರಿ ಮೂಡಭಟ್ಕಳ ಬೈಪಾಸ್ ಬಳಿ ನಡೆದಿದೆ.

ಮೃತಪಟ್ಟ ವ್ಯಕ್ತಿ ಮುಲ್ಲಾ ಮೊಹಮ್ಮದ್ ಇಕ್ಬಾಲ್ ಬೈಂದೂರು ತಾಲ್ಲೂಕಿನ ಶಿರೂರ ಹಡುವಿನ ಕೋಣೆ ನಿವಾಸಿ ಎಂದು ಗುರುತಿಸಲಾಗಿದೆ. ಶಿರೂರ ದಿಂದ ಭಟ್ಕಳಕ್ಕೆ ತೆರಳುತ್ತಿದ್ದ ಇಕ್ಬಾಲ್ ಮಂಗಳೂರು ಕಡೆಯಿಂದ ಬರುತ್ತಿದ್ದ ಟ್ಯಾಂಕರ್
ಆಕ್ಟಿವಾಗೆ ಹಿಂಬದಿಯಿAದ ಡಿಕ್ಕಿ ಹೊಡೆದು ಕೆಳಗಡೆ ಬಿದ್ದಿದ್ದು ಟ್ಯಾಂಕರ್ ಚಕ್ರ ಮೈಮೇಲೆ ಹರಿದು ಮೃತಪಟ್ಟಿದ್ದಾನೆ.
ಅಪಘಾತ ರಭಸಕ್ಕೆ ದೇಹದ ಬಾಗ ಛಿದ್ರ ವಾಗಿದ್ದು ಸ್ಥಳೀಯ ಆಟೋಚಾಲಕರು ಮೃತದೇಹವನ್ನು ಸರ್ಕಾರಿ ಆಸ್ಪತ್ರೆ ಸಾಗಿಸಿದ್ದಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಭಟ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

error: