March 15, 2025

Bhavana Tv

Its Your Channel

ಆರ್.ಎನ್.ಎಸ್ ವಿದ್ಯಾನಿಕೇತನ ವಿದ್ಯಾರ್ಥಿಯಾದ ಆಕಾಶ ಶೇಟ್‌ಗೆ ಸನ್ಮಾನ

ಭಟ್ಕಳ:2021-22 ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 99.52% ಅಂಕಗಳಿಸಿ ರಾಜ್ಯಕ್ಕೆ 4 ನೇ ರ‍್ಯಾಂಕ್ ಪಡೆದ ಆರ್.ಎನ್.ಎಸ್ ವಿದ್ಯಾನಿಕೇತನ ಶಾಲೆಯ ವಿದ್ಯಾರ್ಥಿಯಾದ ಆಕಾಶ ದಿನೇಶ್ ಶೇಟ್‌ಗೆ ವಿಧಾನ ಪರಿಷತ್ ಸದಸ್ಯರಾದ ಎಸ್.ವಿ.ಸಂಕನೂರು ಶಾಲು ಹೊದಿಸಿ ಸನ್ಮಾನಿಸಿದರು. ನಂತರ ಮಾತನಾಡಿದ ಪಿಯುಸಿಯಲ್ಲಿ ರಾಜ್ಯಕ್ಕೆ ಪ್ರಥಮ ರ‍್ಯಾಂಕ್ ಬರುವಂತಾಗಬೇಕು ಎಂದರು. ಕಾರ್ಯಕ್ರಮದಲ್ಲಿ ಆರ್.ಎನ್.ಶೆಟ್ಟಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಮಾಧವ ಪಿ, ಸರಕಾರಿ ಪದವಿ ಪೂರ್ವ ಕಾಲೇಜು, ಅವರ್ಸಾದ ಪ್ರಾಚಾರ್ಯ ಶ್ರೀ ವಸಂತ್ ಗಾಂವಕರ್, ಆರ್.ಎನ್.ಎಸ್ ವಿದ್ಯಾನಿಕೇತನ ಶಾಲೆಯ ಪ್ರಾಚಾರ್ಯರಾದ ಗೀತಾ ಕಿಣಿ ಹಾಗೂ ಆಕಾಶ ಶೇಟ್‌ನ ತಂದೆ ದಿನೇಶ ಶೇಟ್ ಉಪಸ್ಥಿತರಿದ್ದರು.

error: