March 16, 2025

Bhavana Tv

Its Your Channel

ಮಹಿಳೆಯ ಕೊಲೆಗಾರರನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿ, ಇಬ್ಬರ ಬಂಧನ

ಭಟ್ಕಳ: ಮೇ.24ರಂದು ತಾಲೂಕಿನ ತಲಾನ್ ಗುಡ್ಡದ ಮೇಲೆ ಅನುಮಾನಾಸ್ಪದವಾಗಿ ಮೃತಪಟ್ಟು ಕೊಳೆತ ಸ್ಥಿತಿಯಲ್ಲಿ ದೊರೆತ ಮಹಿಳೆಯ ಕೊಲೆಗಾರರನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವೀಯಾಗಿದ್ದು ಇಬ್ಬರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.

ಗುಡ್ಡದ ಮನೆಯೊಂದರಲ್ಲಿ ವಾಸಿಸುತ್ತಿದ್ದ ಆರೋಪಿ ಮಾಸ್ತಪ್ಪ ಮಂಜಪ್ಪ ನಾಯ್ಕ ವಯೋವೃದ್ಧರೋರ್ವನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಮಾಡಿದ್ದು ಮಹಿಳೆಯ ಸಾವಿಗೆ ಈತನೇ ಕಾರಣ ಎನ್ನಲಾಗುತ್ತಿದ್ದು, ಆಕೆ ಸತ್ತಿರುವುದು ಖಚಿತವಾಗುತ್ತಿದ್ದಂತೆಯೇ ಅಣ್ಣನ ಮಗನಾದ ಸಾಗರದ ಕಟ್ಟಿನಕಾರ ನಿವಾಸಿ ನಾಗಪ್ಪ ನಾರಾಯಣ ನಾಯ್ಕ ಇಬ್ಬರು ಸೇರಿ ಆಕೆಯನ್ನ ಹೊತ್ತುಕೊಂಡು ರಸ್ತೆಯ ಬದಿ ಇಳಿಜಾರಿನಲ್ಲಿ ಒಗೆದು ಬಂದಿರುವುದಾಗಿ ಆರೋಪಿಗಳು ಪೊಲೀಸರ ಬಳಿ ಬಾಯಿ ಬಿಟ್ಟಿದ್ದಾರೆ. ಎಲ್ಲ ಮುಗಿದ ನಂತರ ಸಾಕ್ಷ್ಯವನ್ನು ನಾಶಪಡಿಸಲು ಚಾಪೆ, ಬಟ್ಟೆಬರೆಗಳನ್ನು ಮನೆಯಲ್ಲಿದ್ದ ಮಾಸ್ತಪ್ಪ ನಾಯ್ಕ ಸುಟ್ಟು ಹಾಕಿದ್ದು, ಆರೋಪಿಯ ವಿಚಾರಣೆ ಮುಂದುವರೆದಿರುವAತೆಯೇ ಮೃತ ಮಹಿಳೆಯನ್ನು ಪಕ್ಕದ ಜಿಲ್ಲೆಯ ಬಸ್ ನಿಲ್ದಾಣವೊಂದರಲ್ಲಿ ಮಾತನಾಡಿಸಿ ಕೊಲೆಗಾರರ ನಾಗಪ್ಪ ನಾಯ್ಕ ಪರಿಚಯ ಮಾಡಿಕೊಂಡಿರುವ ಬಗ್ಗೆಯೂ ಪೊಲೀಸರ ಬಳಿ ಬಾಯಿ ಬಿಟ್ಟಿದ್ದಾನೆ. ವಿಪರೀತ ಕುಡಿತ ಹಾಗೂ ಕಾಮದ ಚಟಕ್ಕೆ ಬಿದ್ದಿದ್ದ ನಾಗಪ್ಪ ನಾಯ್ಕ ಆಕೆಯನ್ನು ಚಿಕ್ಕಪ್ಪನ ಮನೆಗೆ ಕರೆದುಕೊಂಡು ಬಂದು ಕೊಲೆ ಮಾಡಿದ್ದಾನೆ ಎನ್ನಲಾಗಿದೆ.

ಮೃತ ಮಹಿಳೆಯ ಗುಪ್ತಾಂಗದಲ್ಲಿ ರಕ್ತಸ್ರಾವವಾಗಿದೆ ಎನ್ನಲಾಗುತ್ತಿದ್ದು, ಸಾವಿನ ಬಗ್ಗೆ ನಿಖರ ಕಾರಣಗಳನ್ನು ಕಂಡುಕೊಳ್ಳಲು ಪೊಲೀಸರು ವೈದ್ಯಕೀಯ ವರದಿ ಕೈ ಸೇರುವುದನ್ನೇ ಕಾಯುತ್ತಿದ್ದಾರೆ. ಸಾವು ಹೇಗೆ ಸಂಭವಿಸಿದೆ ಎನ್ನುವುದು ಇನ್ನಷ್ಟು ತಿಳಿದು ಬರಬೇಕಿದೆ. ತಲಾಂದ ಗ್ರಾಮದ ಕೊಲ್ಲಿಮುಲ್ಲೆ ನಿವಾಸಿ ಗಣಪತಿ ರಾಮಚಂದ್ರ ನಾಯ್ಕ ಎನ್ನುವವರು ಗ್ರಾಮೀಣ ಠಾಣೆಗೆ ದೂರು ನೀಡಿದ್ದರು.ದೂರನ್ನು ಆಧರಿಸಿ ಆರೋಪಿಗಳು
ಪತ್ತೆ ಹಚ್ಚಿ ಬಂಧಿಸುವಲ್ಲಿ ಗ್ರಾಮೀಣ ಸರ್ಕಲ್ ಇನ್ಸಪೆಕ್ಟರ್ ಮಹಾಬಲೇಶ್ವರ ಎಸ್.ಎನ್.ಪಿ.ಎಸ್.ಐ ಗಳಾದ ಭರತಕುಮಾರ್ ವಿ. ರತ್ನಾ ಎಸ್.ಕೆ., ಸಿಬ್ಬಂದಿಗಳಾದ ವಿನಾಯಕ ಪಾಟೀಲ, ಮಂಜುನಾಥ ಗೊಂಡ, ದೀಪಕ್ ಎಸ್. ನಾಯ್ಕ, ಮಹೇಶ ಪಟಗಾರ, ರಾಜು ಗೌಡ, ವಿನಾಯಕ ನಾಯ್ಕ, ರೇಣುಕಾ ಹೊನ್ನಿಕೋಳ, ಪ್ರೊಬೆಷನರಿ ಸಬ್ ಇನ್ಸಪೆಕ್ಟರ್ ಸುನಿಲ್ ಬಿ.ವೈ., ಮಂಜುನಾಥ ಪಾಟೀಲ್ ಭಾಗವಹಿಸಿದ್ದರು.
ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಸುಮನ್ ಪನ್ನೇಕರ್, ಹೆಚ್ಚುವರಿ ಎಸ್.ಪಿ. ಬದರೀನಾಥ, ಡಿ.ವೈ.ಎಸ್.ಪಿ. ಕೆ.ಯು. ಬೆಳ್ಳಿಯಪ್ಪ ತನಿಖೆಗೆ ಮಾರ್ಗದರ್ಶನ ನೀಡಿದ್ದರು.
ಒಟ್ಟಾರೆ ಈ ಪ್ರಕರಣ ದಲ್ಲಿ ಕೊಲೆಯಾದ ಆರೋಪಿಗಳು ಪತ್ತೆಯಾದರು ಮೃತ ಮಹಿಳೆ ಗುರುತು ಇನ್ನೂ ಪತ್ತೆಯಾಗಿಲ್ಲ ಎನ್ನುವುದು ಬೇಸರದ ಸಂಗತಿಯಾಗಿದೆ.

ಮೃತ ಮಹಿಳೆಯ ಮಾಹಿತಿ ಸಿಕ್ಕಲ್ಲಿ ಈ ದೂರವಾಣಿ ಸಂಖ್ಯೆಗೆ 9480805232, 9480805262 ಮಾಹಿತಿ ನೀಡಲು ಪೊಲೀಸ ಪ್ರಕಟಣ ತಿಳಿಸಿದ್ದಾರೆ.

error: