March 14, 2025

Bhavana Tv

Its Your Channel

ವಿಧಾನಪರಿಷತ್ ಚುನಾವಣೆ; ಪಶ್ಚಿಮ ಶಿಕ್ಷಕರ ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿ ಬಸವರಾಜ್ ಗುರಿಕಾರರಿಂದ ಭರ್ಜರಿ ಪ್ರಚಾರ

ಭಟ್ಕಳ: ಜೂನ್ 13, 2022 ರಂದು ವಿಧಾನಪರಿಷತ್ತಿನ ಪಶ್ಚಿಮ ಶಿಕ್ಷಕರ ಕ್ಷೇತ್ರಕ್ಕೆ ನಡೆಯಲಿರುವ ಚುನಾವಣೆಯಲ್ಲಿ ಭಟ್ಕಳ ತಾಲೂನ 200ಕ್ಕೂ ಹೆಚ್ಚು ಶಿಕ್ಷಕ ಮತದಾರು ಪಕ್ಷಾತೀತವಾಗಿ ತಮಗೆ ಬೆಂಬಲ ನೀಡಿದ್ದಾರೆ ಎಂದು ವಿಧಾನಪರಿಷತ್ತಿನ ಪಶ್ಚಿಮ ಶಿಕ್ಷಕರ ಕ್ಷೇತ್ರದಕಾಂಗ್ರೇಸ್ ಅಭ್ಯರ್ಥಿ ಬಸವರಾಜಗುರಿಕಾರ ಹೇಳೀದರು.
ಗುರುವಾರ ತಾಲೂಕಿನ ವಿವಿಧ ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡುತ್ತಿರುವ ಅವರು ಹೆಬಳೆ ಪಂಚಾAiÀiತ್ ವ್ಯಪ್ತಿಯ ನ್ಯೂ ಶಮ್ಸ್ ಸ್ಕೂಲ್ ಶಾಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಈ ಬಾರಿ ಬದಲಾವಣೆಗಾಗಿ ಬಸವರಾಜ್ ಗುರಿಕಾರರಿಗೆ ಬೆಂಬಲಿಸುವAತೆ ಕೇಳಿಕೊಂಡರು.
ನAತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಶಿಕ್ಷಕ ಮತದಾರರು ಬದಲಾವಣೆ ಬಯಸಿದ್ದಾರೆ, ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಖಾಸಗಿ ಅನುದಾನಿತ ಶಿಕ್ಷಕರ ಸಮಸ್ಯೆಗಳನ್ನು ಬಗೆಹರಿಸುವುದು ತಮ್ಮಮೊದಲ ಆಧ್ಯತೆಯಾಗಿದೆ ಎಂದರು.
ಕಳೆದ 40 ವರ್ಷಗಳಿಂದ ಶಿಕ್ಷಕ ಸಂಘಟನೆಗಳಲ್ಲಿ ಸಕ್ರೀಯವಾಗಿದ್ದೇನೆ. ಕ್ಷೇತ್ರದ ಎಲ್ಲ ಶಿಕ್ಷಕರು ನನ್ನ ಬಗ್ಗೆ ತುಂಬ ಅಭಿಮಾನವಿಟ್ಟುಕೊಂಡು ಈ ಬಾರಿ ಚುನಾವಣೆಗೆ ಸ್ಪರ್ಧಿಸುವಂತೆ ಹಕ್ಕೋತ್ತಾಯ ಮಾಡಿದ್ದು ಅವರ ಬೇಡಿಕೆಯಂತೆ ಸ್ಪರ್ಧಿಸಿದ್ದೇನೆ. ಶಿಕ್ಷಕರ ಪ್ರೀತಿ ವಿಶ್ವಾಸವೇ ನನ್ನ ಗೆಲುವಿನ ಆಧಾರಸ್ಥಂಭವಾಗಲಿದೆ ಎಂದರು. ನಿಮ್ಮನ್ನು ಶಿಕ್ಷಕರು ಯಾಕೆ ಮತನೀಡಬೇಕು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಕಳೆದ 40 ವರ್ಷಗಳಿಂದಲೂ ನೋಡುತ್ತ ಬಂದಿದ್ದೇನAದರೆ ಶಿಕ್ಷಕರ ಸಮಸ್ಯೆಗಳು ಕೇವಲ ಸಮಸ್ಯೆಗಳಾಗಿಯೆ ಉಳಿದುಕೊಂಡಿವೆ ಹೊರತು ಅದನ್ನು ಇದುವರೆಗೂ ಯಾರೂ ಕೂಡ ಬಗೆಹರಿಸಿಲ್ಲ ಹಾಗಾಗಿ ಈಗ ಶಿಕ್ಷಕರು ಬದಲಾವಣೆಯನ್ನು ಬಸಯಸಿದ್ದಾರೆ. ಬದಲಾವಣೆಗಾಗಿ ಶಿಕ್ಷಕರು ನನ್ನನ್ನು ಚುನಾವಣೆಗೆ ನಿಲ್ಲಿಸಿದ್ದಾರೆ. ಶಿಕ್ಷಕರ ಸರ್ವಾಂಗೀಣ ಅಭ್ಯೋದಯವೇ ನನ್ನ ಮುಂದಿನ ಯೋಜನೆಎಂದರು.
ಸರ್ಕಾರಿ, ಖಾಸಗಿ, ಅನುದಾನಿತ ಅನುದಾನರಹಿತ ಎಂಬ ಭೇದಭಾವವಿಲ್ಲದೆ ಎಲ್ಲರಿಗೂ ಸೇವಾ ಸೌಲಭ್ಯ, ಕೇಂದ್ರ ಹಾಗೂ ನೆರೆಹೊರೆರಾಜ್ಯದ ಮಾದರಿಯಲ್ಲಿ ಉನ್ನತ ವೇತನಶ್ರೇಣಿ ದೊರಕಿಸಿಕೊಡುವುದು, 1995ರ ನಂತರ ಆರಂಭಗೊAಡ ಶಾಲೆ ಕಾಲೇಜುಗಳನ್ನು ಅನುದಾನಕ್ಕೆ ಒಳಪಡಿಸುವುದು, ಜ್ಯೋತಿ ಸಂಜೀವಿನಿ ಆರೋಗ್ಯ ಯೋಜನೆಯನ್ನು ಅನುದಾನಿತ ಮತ್ತು ಅನುದಾನರಹಿತ ಶಾಲಾ ಕಾಲೇಜುಗಳ ಶಿಕ್ಷಕರಿಗೆ ದೊರಕಿಸಿಕೊಡುವುದು, 2015ರಿಂದ ಖಾಲಿಯಾಗಿರುವ ಹುದ್ದೆಗಳಿಗೆ ನೇಮಕಾತಿಗಾಗಿ ಖಾಸಗಿ ಆಡಳಿತ ಮಂಡಳಿಗಳಿಗೆ ಒಪ್ಪಿಗೆ ಕೊಡಿಸುವಂತಹದ್ದು, ಹಳೆಪಿಂಚಣಿ ಯೋಜನೆಯನ್ನು ಮತ್ತೆ ಜಾರಿಗೆತರುವುದು ಸೇರಿದಂತೆ ಹತ್ತು ಹಲವು ಯೋಜನೆಗಳನ್ನು ಹಾಕಿಕೊಂಡು ತ್ವರಿತಗತಿಯಲ್ಲಿ ಅನುಷ್ಟಾನಕ್ಕೆ ತರುವುದುತಮ್ಮ ಪ್ರಥಮ ಅಧ್ಯತೆಯಾಗಿದೆ ಎಂದು ಬಸವರಾಜ ಗುರಿಕಾರ ಮಾಹಿತಿ ನೀಡಿದರು.
ನಾನು ಒಂದು ಪಕ್ಷದ ಅಭ್ಯರ್ಥಿಯಾದರೂ ಕೂಡ ಶಿಕ್ಷಕರು ಮಾತ್ರ ಪಕ್ಷಾತೀತರಾಗಿದ್ದಾರೆ. ಅವರು ನನ್ನನ್ನು ಪಕ್ಷಾತೀತವಾಗಿಯೆ ಬೆಂಬಲ ನೀಡುತ್ತೇವೆ ಎಂದು ವಚನ ನೀಡಿದ್ದಾರೆ. ಶಿಕ್ಷಕರು ಯಾವುದೇ ಸಮಸ್ಯೆಗಳನ್ನು ಹೊಂದಿರಬಾರದು. ಸಮಸ್ಯೆಗಳಿಂದ ಗುಣಾತ್ಮಕ ಶಿಕ್ಷಣಕ್ಕೆ ಹೊಡೆತ ಬೀಳುತ್ತದೆ. ಆದ್ದರಿಂದ ಸರ್ಕಾರ ಶಿಕ್ಷಕರ ಬೇಕು-ಬೇಡಗಳನ್ನು ಪರಿಗಣಿಸಿ ಅವರ ಸಮಸ್ಯೆಗಳಿಗೆ ಕೂಡಲೇ ಪರಿಹಾರ ಒದಗಿಸಿಕೊಡಬೇಕೆಂದು ಅವರು ಆಗ್ರಹಪಡಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ಅನಂ ಆಲಾ ಎಂ.ಟಿ, ಪ್ರಾಂಶುಪಾಲ ಲಿಯಾಖತ್ ಅಲಿ, ಜ್ಯೋತಿ ಮೊಗೇರ್, ಜಯಂತಿ ಶೆಟ್ಟಿ, ಬ್ಲಾಕ್‌ಕಾಂಗ್ರೇಸ್‌ಅಧ್ಯಕ್ಷ ಸಂತೋಷ್ ನಾಯ್ಕ, ಮಹೇಶ್ ನಾಯ್ಕ, ತೇಜಸ್ ನಾಯ್ಕ, ಗಣಪತಿ ಪಟಗಾರ, ಎಸ್.ಎಕ್.ರಾಮದುರ್ಗಾ ವಿಷ್ಣುದೇವಾಡಿಗ,ಸರ್ಕಾರಿ ಪ್ರಾಥಮಿಕ ಶಾಲೆ ಸೋನಾರಕೇರಿ ಮುಖ್ಯಾಧ್ಯಾಪಕಜಂಬೂರ್ ಮಠ ಸೇರಿದಂತೆ ವಿವಿಧಗಣ್ಯರು ಉಪಸ್ಥಿತರಿದ್ದರು.

error: