March 17, 2025

Bhavana Tv

Its Your Channel

ಪೊಲೀಸ್ ವಸತಿ ಗೃಹಕ್ಕೆ ನುಗ್ಗಿದ ಕಳ್ಳರು:ಬಂಗಾರದ ಆಭರಣಗಳನ್ನು ದೋಚಿ ಪರಾರಿ

ಭಟ್ಕಳ ತಾಲ್ಲೂಕಿನ ಸಾಗರ ರಸ್ತೆಯಲ್ಲಿ ಇರುವ ಪೊಲೀಸ್ ವಸತಿ ಗೃಹ ಒಂದರಲ್ಲಿ ರಾತ್ರಿ ಯಲ್ಲಿ ಮನೆಗೆ ನುಗ್ಗಿದ ಮುಸುಕು ದಾರಿ ಕಳ್ಳರು ಒಂಟಿ ಮಹಿಳೆಗೆ ಇಬ್ಬರು ಚಾಕು ತೋರಿಸಿ ಬಂಗಾರದ ಆಭರಣಗಳನ್ನು ದೋಚಿ ಪರಾರಿ ಯಾಗಿದ್ದ ಘಟನೆ ಶುಕ್ರವಾರ ನಡೆದಿದೆ.

ಗ್ರಾಮೀಣ ಠಾಣೆ ಪೋಲಿಸ್ ಕಾನ್ಸ್ಟೇಬಲ್ ಸಂಗಮೇಶ್ ರಾತ್ರಿ ಪಾಳಿ ಕರ್ತವ್ಯಕ್ಕೆ ತೆರಳಿದ ಸಂದರ್ಭದಲ್ಲಿ ಮನೆಯಲ್ಲಿ ರಾತ್ರಿ 12.45ರ ಸುಮಾರಿಗೆ ಬಾಗಿಲು ಬಡಿದ ಶಬ್ದ ಕೇಳಿ ಗಂಡ ಮನೆಗೆ ಬಂದಿರಬಹುದೆAದು ಭಾವಿಸಿದ ಪತ್ನಿ ನಾಗರತ್ನ ಬಾಗಿಲು ತೆಗೆದ ತಕ್ಷಣ ಚಾಕು ಹಿಡಿದ ಇಬ್ಬರು
ಮುಸುಕುದಾರಿಗಳು ಕೂಗದಂತೆ ಬೆದರಿಸಿದ್ದು ಕಳ್ಳರು ಮನೆಯೊಳಕ್ಕೆ ನುಗ್ಗಿ ಮನೆಯಲ್ಲಿದ್ದ ಬೀರುವನ್ನು ಜಾಲಾಡಿ ವಸ್ತುಗಳನ್ನೆಲ್ಲಾ ಚೆಲ್ಲಾಪಿಲ್ಲಿ ಮಾಡಿ ಬಂಗಾರದ ಮಂಗಳಸೂತ್ರ, ಉಂಗುರ, ಕಿವಿಯೋಲೆ ಇತ್ಯಾದಿ ಒಟ್ಟೂ 2 ಲಕ್ಷ ಮೌಲ್ಯದ ಆಭರಣಗಳನ್ನು ದರೋಡೆ ಮಾಡಿಕೊಂಡು ಪರಾರಿಯಾಗಿದ್ದಾರೆ.
ಮಂಕಿ ಕ್ಯಾಪ್, ಕೈಗೆ ಗ್ಲೌಸ್,ಕಾಲಿಗೆ ಸಾಕ್ಸ್ ಧರಿಸಿದ್ದ ಅವರಲ್ಲಿ ಓರ್ವ ಕನ್ನಡದಲ್ಲೇ ಮಾತನಾಡುತ್ತಿದ್ದರು ಎಂದು ಕಾನ್ಸ್ಟೇಬಲ್ ಪತ್ನಿ ನಾಗರತ್ನಾ ಪೊಲೀಸರು ಬಳಿ ತಿಳಿಸಿದ್ದಾರೆ.
ದೂರನ್ನು ದಾಖಲಿಸಿಕೊಂಡ ಸಬ್ ಇನ್ಸಪೆಕ್ಟರ್ ಎಚ್.ಬಿ. ಕುಡಗುಂಟಿ ಅವರು ಇನ್ಸಪೆಕ್ಟರ್ ದಿವಾಕರ ಪಿ.ಎಂ. ಅವರ ಮಾರ್ಗದರ್ಶನದಲ್ಲಿ ತನಿಖೆ ಕೈಗೊಂಡಿದ್ದಾರೆ. ಕಾರವಾರದಿಂದ ಶ್ವಾನದಳ, ಬೆರಳಚ್ಚು ತಜ್ಞರು ಆಗಮಿಸಿದ್ದು ದರೋಡೆಕೋರರ ಪತ್ತೆಗೆ ವಿಶೇಷ ಕಾರ್ಯಾಚರಣೆಗೆ ಇಲಾಖೆ ಕ್ರಮ ಕೈಗೊಂಡಿದೆ. ಸ್ಥಳಕ್ಕೆ ಡಿ.ವೈ.ಎಸ್.ಪಿ. ಬೆಳ್ಳಿಯಪ್ಪ ಕೆ.ಯು. ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

error: