
ಭಟ್ಕಳ : ಮೋಜು ಮಸ್ತಿಗೆಂದು ಭಟ್ಕಳ ಸರ್ಪನಕಟ್ಟೆಯ ಬಳಿ ಅನ್ಯಕೋಮಿನ ಯುವಕರೊಂದಿಗೆ ಹಿಂದು ಹಾಗೂ ಕ್ರಿಶ್ಚಿಯನ್ ವಿದ್ಯಾರ್ಥಿನೀಯರು ಬಂದಿದ್ದ ವೇಳೆ ಸ್ಥಳೀಯರು ತಡೆದು ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ.
ಮುರುಡೇಶ್ವರದ ಪಾಲಿಟೆಕ್ನಿಕ್ ಕಾಲೇಜಿನ ದ್ವಿತೀಯ ವರ್ಷ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಸರ್ಪನಕಟ್ಟೆಯ ಬಳಿ ಬಂದಿದ್ದ ವೇಳೆ ಸ್ಥಳಿಯರ ಕೈಗೆ ಸಿಕ್ಕಿ ಬಿದ್ದಿದ್ದಾರೆ. ಈ ವೇಳೆ ವಿದ್ಯಾರ್ಥಿಗಳನ್ನು ಸ್ಥಳೀಯರು ವಿಚಾರಿಸಿದ್ದಾರೆ.
ವಿದ್ಯಾರ್ಥಿಗಳು ಸರ್ಪನಕಟ್ಟೆ ಬೇಕರಿಯ ಬಳಿ ಕಾರು ನಿಲ್ಲಿಸಿದಾಗ ಸ್ಥಳೀಯರು ಗಮನಿಸಿದ್ದು, ಈ ವಿದ್ಯಾರ್ಥಿಗಳ ವರ್ತನೆಯಿಂದ ಅನುಮಾನಗೊಂಡ ಸ್ಥಳೀಯರು ಅವರ ಬಗ್ಗೆ ಮಾಹಿತಿ ಕಲೆ ಹಾಕಿದ್ದರು.
ಈ ವೇಳೆ ಓರ್ವ ವಿದ್ಯಾರ್ಥಿನಿ ನೀಡಿದ ಉಡಾಫೆಯ ಉತ್ತರದಿಂದ ಆಕ್ರೋಶಗೊಂಡ ಸ್ಥಳೀಯರು ಎಲ್ಲಾ ವಿದ್ಯಾರ್ಥಿಗಳನ್ನು ತರಾಟೆಗೆ ತೆಗೆದುಕೊಂಡರು. ಕಾಲೇಜಿಗೆ ತೆರಳುವ ಸಮಯದಲ್ಲಿ ಅನ್ಯಕೋಮಿನ ಯುವಕರೊಂದಿಗೆ ಮೋಜು ಮಸ್ತಿಗೆ ತೆರಳುತ್ತಿರುವುದಕ್ಕೆ ಸ್ಥಳೀಯರು ಬುದ್ದಿವಾದ ಹೇಳಿದರು. ಹಾಗೂ ಸ್ಥಳಕ್ಕೆ ನಿಮ್ಮ ಪಾಲಕರನ್ನು ಕರೆಯಿಸಿ ಎಂದು ತಿಳಿಸಿದ್ದಾರೆ ಎನ್ನಲಾಗಿದೆ.
ಅತ್ತ ಈ ಘಟನೆಯಿಂದ ತಕ್ಷಣವೇ ನೂರಾರು ಮಂದಿ ಜಮಾವಣೆಗೊಂಡಿದ್ದು, ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಸ್ಥಳದಲ್ಲಿ ಜನರು ಜಮಾವಣೆಗೊಂಡ ಹಿನ್ನೆಲೆ ಪರಿಸ್ಥಿತಿ ವಿಕೋಪಕ್ಕೆ ತೆರಳುವ ಮೊದಲು ಪೊಲೀಸರು ಸ್ಥಳಕ್ಕೆ ತೆರಳಿ ವಿಚಾರಣೆಗೆ ಮುಂದಾಗಿದ್ದು, ಸ್ಥಳದಲ್ಲಿಯೇ ವಿದ್ಯಾರ್ಥಿನಿಯರ ಪಾಲಕರಿಗೆ ವಿಷಯ ಮುಟ್ಟಿಸಿ ಮನೆಗೆ ತೆರಳಿಸಿದ್ದಾರೆ. ಬಳಿಕ ಅನ್ಯಕೋಮಿನ ಇಬ್ಬರು ಯುವಕರನ್ನು ಅಲ್ಲಿಂದ ಠಾಣೆಗೆ ಕರೆದು ತಂದು ಬುದ್ದಿವಾದ ಹೇಳಿ ಕಳುಹಿಸಿದ್ದಾರೆ ಎಂದು ಪೋಲಿಸ್ ಮೂಲದಿಂದ ತಿಳಿದು ಬಂದಿದೆ.

More Stories
ಜನವರಿ 7 ಭಟ್ಕಳ ತಾಲೂಕ 11ನೆ ಸಾಹಿತ್ಯ ಸಮ್ಮೇಳ
ಭಟ್ಕಳ ತಾಲೂಕು ಕಸಾಪದಿಂದ ರಸಪ್ರಶ್ನೆ ಸ್ಪರ್ಧೆ – ಬಹುಮಾನ ವಿತರಣೆ.
ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲಿ ದೀಪದಾನ ಕಾರ್ಯಕ್ರಮ