
ಹಳೆ ದ್ವೇಷದ ಪರಿಣಾಮವಾಗಿ ಹಾಡುಹಗಲೇ ಸಂಶುದ್ದೀನ್ ಸರ್ಕಲನಲ್ಲಿ ಸಹೋದರನೊಂದಿಗೆ ಹಲ್ಲೆ,ತಲೆಗೆ ಬಲವಾದ ಪೆಟ್ಟು ಬಿದ್ದು ಕುಂದಾಪುರ ಆಸ್ಪತ್ರೆಗೆ ದಾಖಲಾದ ವ್ಯಕ್ತಿ,

ಭಟ್ಕಳ : ಇಲ್ಲಿನ ಜಾಲಿ ಪಟ್ಟಣ ಪಂಚಾಯತ ಸದಸ್ಯನರ‍್ವ ಹಳೆ ವೈಮನಸ್ಸಿನ ಪರಿಣಾಮವಾಗಿ ರ‍್ವ ವ್ಯಕ್ತಿಯ ಮೇಲೆ
ಸಹೋದರನೊಂದಿಗೆ ಸೇರಿ ರಾಡನಿಂದ ಹಾಡುಹಗಲೇ ಇಲ್ಲಿನ ಸಾಗರ ರಸ್ತೆ ಟೆಂಪೋ ನಿಲ್ದಾಣ ಸಮೀಪ ಹಲ್ಲೆ ನಡೆಸಿದ ಘಟನೆ ನಡೆದಿದೆ.

ಹಲ್ಲೆಗೊಳಗಾದ ವ್ಯಕ್ತಿ ಹುರುಳಿಸಾಲ ಮಿನಿಹಿತ್ಲು ನಿವಾಸಿ ಈಶ್ವರ ಮಾಸ್ತಪ್ಪ ನಾಯ್ಕ ಎಂದು ತಿಳಿದು ಬಂದಿದೆ. ಘಟನೆಯ ಸಂಬಂಧ ಹಲ್ಲೆಗೊಳಗಾದ ಈಶ್ವರ ನಾಯ್ಕನ ಹೆಂಡತಿಯ ಅಣ್ಣ ಇಲ್ಲಿನ ಹೆಬಳೆ ತೆಂಗಿನಗುಂಡಿ ನಿವಾಸಿ ಜಯಂತ ನಾಯ್ಕ ನಗರ ಠಾಣೆಯಲ್ಲಿ ನೀಡಿದ ದೂರಿನ್ವಯ ಇಬ್ಬರು ಎಂದಿನಂತೆ ಕೆಲಸ ಮುಗಿಸಿ ವಾಪಸ್ಸು ಮನೆಗೆ ತೆರಳುತ್ತಿರುವ ವೇಳೆ ಸಾಗರ ರಸ್ತೆಯಲ್ಲಿನ ಟೆಂಪೋ ನಿಲ್ದಾಣದ ಬಳಿ ಬೈಕನಲ್ಲಿ ಬಂದ ಇಬ್ಬರು ಹಲ್ಲೆಕೊರರಾದ ಹುರುಳಿಸಾಲ ಮಿನಿಹತ್ಲು ನಿವಾಸಿ ರಮೇಶ ಮಾದೇವ ನಾಯ್ಕ ಹಾಗೂ ಆತನ ತಮ್ಮ ರಾಜೇಶ ಮಾದೇವ ನಾಯ್ಕ ಇಬ್ಬರು ಸೇರಿ ಹಲ್ಲೆ ನಡೆಸಿದ್ದಾರೆ.

ಘಟನೆಗೆ ಹಳೆದ್ವೇಷದ ಕಾರಣ ಇಟ್ಟುಕೊಂಡು ಅಡ್ಡಗಟ್ಟಿ ಮೊದಲು ಅವಾಚ್ಯ ಶಬ್ದದಿಂದ ನಿಂದಿಸಿ, ಬೈಯ್ದು ಬೆದರಿಸಿಯೊಡ್ಡಿದ್ದಾರೆ. ಈ ವೇಳೆ ಹಲ್ಲೆಗೊಳಗಾದ ಈಶ್ವರ ನಾಯ್ಕ ಪ್ರಶ್ನಿಸಿದ್ದು, ಇದಕ್ಕೆ ಏಕಾಏಕಿ ಆರೋಪಿ ರಮೇಶ ನಾಯ್ಕ ತನ್ನ ಬೈಕನಲ್ಲಿದ್ದ ರಾಡನಿಂದ ತಲೆಗೆ ಬಲವಾಗಿ ಹೊಡೆದ ಪರಿಣಾಮ ಈಶ್ವರ ನಾಯ್ಕಗೆ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಬಿದ್ದಿದ್ದಾನೆ. ನಂತರ ಮತ್ತೆ ಹಲ್ಲೆಗೊಳಗಾದ ಈಶ್ವರ ನಾಯ್ಕಗೆ ಇವತ್ತು ಇಷ್ಟಕ್ಕೆ ಬಿಟ್ಟಿದ್ದೇನೆ ಮುಂದಿನ ದಿನಗಳಲ್ಲಿ ಕೊಲೆ ಮಾಡುವುದಾಗಿ ಬೆದರಿಕೆಯನ್ನೊಡ್ಡಿ ಸ್ಥಳದಿಂದ ತೆರಳಿದ್ದಾರೆಂದು ಉಲ್ಲೇಖಿಸಲಾಗಿದೆ.

ತಕ್ಷಣಕ್ಕೆ ಹಲ್ಲೆಗೊಳಗಾದ ಈಶ್ವರ ನಾಯ್ಕ ನನ್ನು ಸರಕಾರಿ ಆಸ್ಪತ್ರೆಗೆ ಕರೆತರಲಾಗಿದ್ದು, ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆ ಹಾಗೂ ತಪಾಸಣೆ ಹಿನ್ನೆಲೆ ಕುಂದಾಪುರ ಆಸ್ಪತ್ರೆಗೆ ಸಾಗಿಸಲಾಗಿದೆ. ಘಟನೆಯ ಬಳಿಕ ಆರೋಪಿತ ಇಬ್ಬರನ್ನು ವಶಕ್ಕೆ ಪಡೆದು ತನಿಖೆ ಮುಂದುವರೆಸಿದ್ದಾರೆ. ಪ್ರಕರಣವನ್ನು ನಗರ ಠಾಣೆಯ ಪಿಎಸ್ಐ ಸುಮಾ ಬಿ. ತನಿಖೆ ಮುಂದುವರೆಸಿದ್ದಾರೆ.
More Stories
ಜನವರಿ 7 ಭಟ್ಕಳ ತಾಲೂಕ 11ನೆ ಸಾಹಿತ್ಯ ಸಮ್ಮೇಳ
ಭಟ್ಕಳ ತಾಲೂಕು ಕಸಾಪದಿಂದ ರಸಪ್ರಶ್ನೆ ಸ್ಪರ್ಧೆ – ಬಹುಮಾನ ವಿತರಣೆ.
ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲಿ ದೀಪದಾನ ಕಾರ್ಯಕ್ರಮ