May 2, 2024

Bhavana Tv

Its Your Channel

ರಾಜ್ಯ ಮಟ್ಟದ ಕಿಕ್‌ಬಾಕ್ಸಿಂಗ್ ಚಾಂಪಿಯನ್ ಶಿಫ್; ಭಟ್ಕಳದ ಶೋಟೋಕಾನ್ ಕರಾಟೆ ಇನ್ಸಿಟ್ಯಿಟ್ಯೂಟ್ ವಿದ್ಯಾರ್ಥಿಗಳ ಉತ್ತಮ ಸಾಧನೆ

ಭಟ್ಕಳ:ರಾಜ್ಯ ಮಟ್ಟದ ಕಿಕ್‌ಬಾಕ್ಸಿಂಗ್ ಚಾಂಪಿಯನ್ ಶಿಫ್‌ನಲ್ಲಿ ಭಟ್ಕಳದ ಶೋಟೋಕಾನ್ ಕರಾಟೆ ಇನ್ಸಿಟ್ಯಿಟ್ಯೂಟ್ ವಿದ್ಯಾರ್ಥಿಗಳು ಉತ್ತಮ ಸಾಧನೆ. ಒಂಬತ್ತು ಚಿನ್ನದ ಪದಕ, ಒಂದು ಬೆಳ್ಳಿಯ ಪದಕ, ಮೂರು ಕಂಚಿನ ಪದಕಗಳನ್ನು ಪಡೆಯುವ ಮೂಲಕ ಕೊಲ್ಕತ್ತಾದಲ್ಲಿ ನಡೆಯುವ ರಾಷ್ಟ್ರಮಟ್ಟದ ಜೂನಿಯರ್ ಕಿಕ್ ಬಾಕ್ಸಿಂಗ್ ಪಂದ್ಯಕ್ಕೆ ಆಯ್ಕೆಯಾಗಿದ್ದಾರೆ.

ಕರ್ನಾಟಕ ಕಿಕ್‌ಬಾಕ್ಸಿಂಗ್ ಸ್ಪೋರ್ಟ್ಸ್ ಅಸೋಸಿಯೇಶನ್ ವತಿಯಿಂದ ಮೈಸೂರಿನಲ್ಲಿ ನಡೆದ 2ನೇ ರಾಜ್ಯ ಮಟ್ಟದ ಕಿಕ್‌ಬಾಕ್ಷಿಂಗ್ ಚಾಂಪಿಯನ್ ಶಿಫ್‌ನಲ್ಲಿ ಭಟ್ಕಳದ ಶೋಟೋಕಾನ್ ಕರಾಟೆ ಇನ್ಸಿಟ್ಯಿಟ್ಯೂಟ್ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದು ಒಂಬತ್ತು ಚಿನ್ನದ ಪದಕ, ಒಂದು ಬೆಳ್ಳಿಯ ಪದಕ ಮೂರು ಕಂಚಿನ ಪದಕಗಳನ್ನು ಪಡೆಯುವ ಮೂಲಕ ಕೊಲ್ಕತ್ತಾದಲ್ಲಿ ನಡೆಯುವ ರಾಷ್ಟ್ರಮಟ್ಟದ ಜೂನಿಯರ್ ಕಿಕ್ ಬಾಕ್ಸಿಂಗ್ ಪಂದ್ಯಕ್ಕೆ ಆಯ್ಕೆಯಾಗಿದ್ದಾರೆ.
18ಕೆಜಿ ವಿಭಾಗದ ಪಾಯಿಂಟ್ ಫೈಟಿಂಗ್ ನಲ್ಲಿ ಪ್ರಣವಿ ರಾಮಚಂದ್ರ ಕಿಣಿ, 34ಕೆಜಿ ವಿಭಾಗದ ಪಾಯಿಂಟ್ ಫೈಟಿಂಗ್ ಮತ್ತು ಮ್ಯೂಸಿಕಲ್ ಫಾರ್ಮ್ ಹಾರ್ಡ್ ಸ್ಟೈಲ್ ನಲ್ಲಿ ರಿಷಿಮಾ ರಾಜೇಶ ನಾಯ್ಕ, 37ಕೆಜಿ ವಿಭಾಗದಲ್ಲಿ ಆದ್ಯ ಸತೀಶ ಶೆಟ್ಟಿ, ಮಣಿಪ್ರಸಾದ ಅಶ್ವಥ ಶೆಟ್ಟಿ, ಸಿಂಧು ಶಿವಾಜಿ, ನಿಧಿ ಯಶ್ವಂತ ನಾಯ್ಕ, ತ್ರಿಷಾ ವಿಷ್ಣು ಖಾರ್ವಿ ಚಿನ್ನದ ಪದಕ ಪಡೆದರೆ, ಕನಸು ರಾಜೇಶ ನಾಯ್ಕ, ಪ್ರಣವ ನಾರಾಯಣ ಮೊಗೇರ, ಸಿಂಧು ಶಿವಾಜಿ, ನಿಧಿ ನಾಯ್ಕ ಇವರು ಇತರ ವಿಭಾಗದಲ್ಲಿ ಸಾಧನೆ ಮೆರೆದಿದ್ದಾರೆ. ಉತ್ತರ ಕನ್ನಡ ಕಿಕ್ ಬಾಕ್ಸಿಂಗ್ ಸ್ಪೋರ್ಟ್ಸ್ ಅಸೋಸಿಯೇಷನ್ ಅಧ್ಯಕ್ಷಈಶ್ವರ ಎನ್ ನಾಯ್ಕ ಹಾಗೂ ರಾಷ್ಟ್ರೀಯ ಮಟ್ಟದ ಕಿಕ್ ಬಾಕ್ಸಿಂಗ್ ರೆಫ್ರಿ ನಾಗಶ್ರೀ ವಿ ನಾಯ್ಕ, ಸದಸ್ಯರಾದ ಸುರೇಶ್ ಮೊಗೇರ ಮನೋಜ್ ನಾಯ್ಕ ,ಚಂದ್ರು ನಾಯ್ಕ ,ಉಮೇಶ್ ಮೊಗೇರ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದಾರೆ.

error: