March 16, 2025

Bhavana Tv

Its Your Channel

ಯುವತಿ ನಾಪತ್ತೆ ಪೋಷಕರಿಂದ ಪೊಲೀಸರಿಗೆ ದೂರು

ಭಟ್ಕಳ: ಮನೆಯಿಂದ ಹೊರಗೆ ತೆರಳಿದ್ದ ಯುವತಿಯೋರ್ವಳು ಮನೆಗೆ ವಾಪಸ್ಸಾಗದೇ ನಾಪತ್ತೆಯಾಗಿರುವ ಘಟನೆ ತಾಲೂಕಿನ ಮುಂಡಳ್ಳಿ ಮೊಗೇರ ಕೇರಿಯಲ್ಲಿ ನಡೆದಿದೆ.

ಕಳೆದ ಜೂ.5ರಂದು ಬೆಳಿಗ್ಗೆ ಮನೆಯಿಂದ ಹೊರಗೆ ತೆರಳಿದ್ದ ಯುವತಿಯೋರ್ವಳು ಮನೆಗೆ ವಾಪಸ್ಸಾಗದೇ ನಾಪತ್ತೆಯಾಗಿರುವ ಘಟನೆ ತಾಲೂಕಿನ ಮುಂಡಳ್ಳಿ ಮೊಗೇರ ಕೇರಿಯಲ್ಲಿ ನಡೆದಿದೆ.
ಸರಿಸುಮಾರು 20 ವರ್ಷ ಪ್ರಾಯದ ಈ ಯುವತಿಯು ಕಳೆದ ಒಂದೂವರೆ ತಿಂಗಳಿನಿAದ ಬೆಂಗಳೂರಿನ ಸೂಪರ್ ಮಾರ್ಕೆಟ್‌ವೊಂದರಲ್ಲಿ ಕೆಲಸ ಮಾಡಿಕೊಂಡಿದ್ದು, ಕಳೆದ ಜೂನ್ 3 ರಂದು ಊರಿಗೆ ಹಿಂದಿರುಗಿದ್ದಳು. ಕಳೆದ ಒಂದು ವಾರದಿಂದ ಕುಟುಂಬ ಸದಸ್ಯರು ಹುಡುಕಾಟ ನಡೆಸಿದರಾದರೂ ಆಕೆ ಪತ್ತೆಯಾಗದ ಕಾರಣ ಇದೀಗ ಪೊಲೀಸರ ಮೊರೆ ಹೋಗಿದ್ದಾರೆ. ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಎಎಸ್‌ಐ ಭರತ್ ತನಿಖೆ ಕೈಗೊಂಡಿದ್ದಾರೆ.

error: