March 17, 2025

Bhavana Tv

Its Your Channel

ಟಾಟಾ ಇಂಡಿಕ್ಯಾಶ್ ಎ.ಟಿ.ಎಂ. ಕೇಂದ್ರ ಉದ್ಘಾಟಿಸಿದ ಶಾಸಕ ಸುನಿಲ್ ಬಿ. ನಾಯ್ಕ

ಭಟ್ಕಳ ತಾಲೂಕಿನ ಗ್ರಾಮೀಣ ಭಾಗವಾದ ಸರ್ಪನಕಟ್ಟೆಯಲ್ಲಿ ನೂತನವಾಗಿ ಖಾಸಗೀ ಸಹಭಾಗಿತ್ವದಲ್ಲಿ ಸ್ಥಾಪಿಸಲಾದ ಟಾಟಾ ಇಂಡಿಕ್ಯಾಶ್ ಎ.ಟಿ.ಎಂ. ಕೇಂದ್ರವನ್ನು ಶಾಸಕ ಸುನಿಲ್ ಬಿ.ನಾಯ್ಕ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು ಇಂತಹ ಗ್ರಾಮೀಣ ಭಾಗದಲ್ಲಿ ಎ.ಟಿ.ಎಂ. ಸ್ಥಾಪಿಸಿ ಜನತೆಗೆ ಸೇವೆ ನೀಡಬೇಕೆನ್ನುವ ಸುಭಾಷ ಎಂ.ಶೆಟ್ಟಿಯವರ ಕನಸು ಇಂದು ನನಸಾಗಿದೆ. ಖಾಸಗೀ ಸಹಭಾಗಿತ್ವದಲ್ಲಿ ಎ.ಟಿ.ಎಂ. ಸ್ಥಾಪಿಸಿರುವುದು ತಾಲೂಕಿಗೆ ಪ್ರಥಮವಾಗಿದ್ದು ಈ ಭಾಗದ ಹಾಗೂ ಹೆದ್ದಾರಿಯಲ್ಲಿ ಸಂಚರಿಸುವವರಿಗೆ ಸಹಕಾರಿಯಾಗಲಿ ಎಂದು ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ವಾಸುಕಿ ಸೌಹಾರ್ಧ ಸಹಕಾರಿಯ ನಿಯಮಿತ ಇದರ ವೃತ್ತಿಪರ ನಿರ್ದೇಶಕ ಸುಭಾಷ ಎಂ. ಶೆಟ್ಟಿ ವಹಿಸಿದ್ದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಭಟ್ಕಳ ಅರ್ಬನ್ ಬ್ಯಾಂಕ್ ಅಧ್ಯಕ್ಷ ಜಾಫರ್ ಸಾಧಿಕ್ ಶಾಬಂದ್ರಿ, ಯಲ್ವಡಿಕವೂರು ಗ್ರಾ.ಪಂ.ಅಧ್ಯಕ್ಷ ಲಕ್ಷಿö್ಮÃನಾರಾಯಣ ನಾಯ್ಕ ಮಾತನಾಡಿದರು. ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಮುಕ್ತೇಸರ ನಾರಾಯಣ ಎಂ. ಶೆಟ್ಟಿ, ಹಿರಿಯರಾದ ಮಹಾಬಲೇಶ್ವರ ಶೆಟ್ಟಿ ಉಪಸ್ಥಿತರಿದ್ದರು.
ಸುಭಾಷ ಎಂ. ಶೆಟ್ಟಿ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಕಾಶ ಶಿರಾಲಿ ನಿರೂಪಿಸಿ, ವಂದಿಸಿದರು.

error: