March 15, 2025

Bhavana Tv

Its Your Channel

ಭಟ್ಕಳದಲ್ಲಿ ಶೇ.81.99 ಮತದಾನ

ಭಟ್ಕಳ: ವಿಧಾನ ಪರಿಷತ್ತಿನ ಪಶ್ಚಿಮ ಶಿಕ್ಷಕರ ಮತದಾರರ ಕ್ಷೇತ್ರದ ಚುನಾವಣೆಯು ಸೋಮವಾರ ನಡೆದಿದ್ದು ತಾಲೂಕಿನ ತಹಸೀಲ್ದಾರ್ ಕಚೇರಿಯಲ್ಲಿನ ಮತಗಟ್ಟೆಯಲ್ಲಿ ಶೇ.81.99 ಮತದಾನವಾಗಿದೆ.
ಬೆಳಿಗ್ಗೆ 8 ಗಂಟೆಯಿAದ ಆರಂಭಗೊAಡ ಮತದಾನ ಪ್ರಕ್ರಿಯೆ ಸಂಜೆ 5 ಗಂಟೆಯ ತನಕ ನಡೆದಿದ್ದು ಶಿಕ್ಷಕರೇ ಮತದಾನಕ್ಕೆ ನಿರಾಸಕ್ತಿ ತೋರಿಸಿದ್ದು ಕಂಡು ಬಂತು. ಒಟ್ಟು 211 ಮತದಾರರ ಪೈಕಿ 173 ಜನರು ಮತ ಚಲಾಯಿಸಿದ್ದು ಅವರಲ್ಲಿ 92 ಮಹಿಳೆಯರು, 64 ಪುರುಷ ಮತದಾರರು ಮತ ಚಲಾಯಿಸಿದ್ದಾರೆ.
ಪಶ್ಚಿಮ ಶಿಕ್ಷಕರ ಕ್ಷೇತ್ರ ಧಾರವಾಡ, ಗದಗ, ಹಾವೇರಿ ಮತ್ತುಉತ್ತರ ಕನ್ನಡ ಜಿಲ್ಲೆ ಒಳಗೊಂಡಿದ್ದು ಉತ್ತರ ಕನ್ನಡದ ಭಟ್ಕಳದಲ್ಲಿ ಶಾಂತಿಯುತ ಮತದಾನವಾಗಿದೆ. ಕಾಂಗ್ರೇಸ್ ಪಕ್ಷದಿಂದ ಬಸವರಾಜ್ ಗುರಿಕಾರ್, ಬಿಜೆಪಿಯಿಂದ ಬಸವರಾಜ್ ಹೊರಟ್ಟಿ, ಜೆ.ಡಿ.ಎಸ್.ನಿಂದ ಶ್ರೀಶೈಲಾ ಗುಡದಿನ್ನಿ ಸೇರಿದಂತೆ ಒಟ್ಟು 7 ಅಭ್ಯರ್ಥಿಗಳ ಭವಿಷ್ಯ ಮತಗಟ್ಟೆಯಲ್ಲಿ ಭದ್ರವಾಗಿದೆ. ಜೂನ್ 15 ರಂದು ಬೆಳಗಾವಿಯ ಜ್ಯೋತಿ ಪದವಿ ಪೂರ್ವ ಕಾಲೇಜಿನಲ್ಲಿ ಮತಎಣಿಕೆ ನಡೆಯಲಿದೆ.

error: