March 12, 2025

Bhavana Tv

Its Your Channel

ಕಸದ ರಾಶಿ ಮತ್ತು ಶಿಥಿಲಾವಸ್ಥೆಯಲ್ಲಿರುವ ಶೌಚಗ್ರಹವನ್ನು ತೆರವುಗೊಳಿಸಬೇಕೆಂದು ಶಾಸಕ ಸುನೀಲ ನಾಯ್ಕಗೆ ಮನವಿ

ಭಟ್ಕಳ ಪಟ್ಟಣದ ಚೌಥನಿಯಲ್ಲಿರುವ ವೀರ ವಿಠ್ಠಲ್ ದೇವಸ್ಥಾನದ ಬಳಿ ಇರುವ ಕಸದ ರಾಶಿ ಮತ್ತು ಶಿಥಿಲಾವ್ಯಸ್ಥೆಯಲ್ಲಿ ಶೌಚಗ್ರಹವನ್ನು ಇಲ್ಲಿಂದ ತೆರವುಗೊಳಿಸಬೇಕು ಎಂದು ಶಾಸಕ ಸುನೀಲ ನಾಯ್ಕ ಅವರಿಗೆ ಚೌಥನಿಯ ನಿವಾಸಿಗಳು ಮನವಿ ನೀಡಿ ಆಗ್ರಹಿಸಿದ್ದಾರೆ.

ಭಟ್ಕಳ ಪುರಸಭೆ ವ್ಯಾಪ್ತಿಗೆ ಬರುವ ಚೌಥನಿಯಲ್ಲಿ ಪುರಾತನ ಶ್ರೀ ವೀರ ವಿಠ್ಠಲ ದೇವಸ್ಥಾನ ಇದೆ. ಇಲ್ಲಿ ಪ್ರತಿದಿನ ನೂರಾರು ಸಂಖ್ಯೆಯ ಭಕ್ತರು ಬರುತ್ತಾರೆ. ಆದರೆ ಈ ವಠಾರದಲ್ಲಿ ಮುಗು ಮುಚ್ಚಿಕೊಂಡು ತಿರುಗುವ ಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ ಇಲ್ಲಿ ಶಿಥಿಲಾವ್ಯವಸ್ಥೆ ತಲುಪಿದ ಒಂದು ಶೌಚಗ್ರಹವಿದೆ. ಪ್ರತಿಬಾರಿಯೂ ಇದರ ನಿರ್ವಹಣೆಗೆಂದು ಲಕ್ಷಾಂತರ ರೂ ವ್ಯಯಿಸಲಾಗುತ್ತದೆ. ಆದರೆ ಇದರ ಉಪಯೋಗವನ್ನು ಮಾತ್ರ ಯಾರು ಮಾಡುತ್ತಿಲ್ಲ. ಸರಿಯಾದ ಸ್ವಚ್ಚತೆ ಇಲ್ಲದೆ ಅನೈತಿಕ ತಾಣವಾಗಿ ಮಾರ್ಪಾಟಾಗುತ್ತಿದೆ. ರಾತ್ರಿಯಾದರೆ ಕೆಲವು ಮಾಂಸದ ಅಂಗಡಿಯವರು ರಿಕ್ಷಾದಲ್ಲಿ ತಂದು ಮಾಂಸವನ್ನು ಎಸೆದು ಹೋಗುತ್ತಾರೆ. ಪಕ್ಕದಲ್ಲೆ ದೇವಸ್ಥಾನವಿದ್ದು ಮುಂದಿನ ದಿನಗಳಲ್ಲಿ ಅಹಿತಕರ ಘಟನೆಗಳು ನಡೆಯುವ ಸಾದ್ಯತೆ ತಳ್ಳಿಹಾಕುವಂತಿಲ್ಲ. ಭಟ್ಕಳದ ಶಾಂತಿ ಸುವ್ಯವಸ್ಥೆ, ಸ್ವಚ್ಚತೆ ಕಾಪಾಡುವ ದೃಷ್ಟಿಯಿಂದ ಇಲ್ಲಿರುವ ಅನುಪಯುಕ್ತ ಶೌಚಗ್ರಹ ಹಾಗೂ ಕಸ ಎಸೆಯುವ ಸ್ಥಳವನ್ನು ತೆರವುಗೊಳಿಸಬೇಕು ಎಂದು ಸಂಬಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡವಂತೆ ಮನವಿಯಲ್ಲಿ ಸ್ಥಳೀಯ ಸಮಸ್ತ ನಾಗರಿಕಕರು ಆಗ್ರಹಿಸಿದ್ದಾರೆ.
ಸ್ಥಳೀಯರ ಪರವಾಗಿ ರವಿ ನಂಬಿಯಾರ, ಕಿರಣ ಚಂದಾವರ, ಅನಿಲ ಭಟ್, ಶ್ರೀಧರ ನಾಯ್ಕ, ನರೇಂದ್ರ ರಾವ್ ಇವರು ಶಾಸಕ ಸುನೀಲ ಅವರಿಗೆ ಮನವಿ ನೀಡಿದರು. ಈ ಕುರಿತು ಸೂಕ್ತ ಕ್ರಮದ ಭರವಸೆಯನ್ನು ಶಾಸಕರು ನೀಡಿದ್ದಾರೆ

error: